Nitish Kumar I.N.D.I.A Alliance: ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶತ್ರುಗಳೂ ಇಲ್ಲ. ಬಿಹಾರ ಮತ್ತು ನಿತೀಶ್ ಕುಮಾರ್ ವಿಷಯಕ್ಕೆ ಬಂದಾಗ, ಈ ಮಾತು ಸಂಪೂರ್ಣವಾಗಿ ಸತ್ಯವೆನಿಸುತ್ತಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಫ್ಲಿಪ್-ಫ್ಲಾಪ್‌ ನಡವಳಿಕೆಗಳಿಗೆ ಹೆಸರುವಾಸಿಯಾಗಿದ್ದು, ತಮ್ಮ ನಿರ್ಧಾರದಿಂದ ರಾಜಕೀಯ ದಿಗ್ಗಜರನ್ನು ಮತ್ತೆ ಅಚ್ಚರಿಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೆ ಬರ್ತಿದ್ದಾರೆ ಹಾರ್ದಿಕ್ ಪಾಂಡ್ಯ! ಈ ಪಂದ್ಯದ ಮೂಲಕ ಭರ್ಜರಿ ಕಂಬ್ಯಾಕ್


ಲೋಕಸಭೆ ಚುನಾವಣೆ 2024ರ ಮೊದಲು, I.N.D.I.A ವಿರೋಧ ಪಕ್ಷದ ನಾಯಕರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗದಂತಹ  ಹೊಡೆತ ವನ್ನು ನೀಡಲಾಗಿದೆ. ಸುಮಾರು 2 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರುತ್ತಿದ್ದ ನಿತೀಶ್, ಇದೀಗ ಮೋದಿ ಬೆಂಬಲದಿಂದಲೇ ಮುಂದೆ ಸಾಗುತ್ತಿರುವಂತೆ ಕಾಣುತ್ತಿದೆ.


ಕಾರಣ 1: 6 ತಿಂಗಳ ಹಿಂದೆ ತೇಜಸ್ವಿಯವರ ಆಪ್ತ ಸಚಿವರ ನಿರ್ಧಾರವನ್ನು ನಿತೀಶ್ ಬದಲಾಯಿಸಿದ್ದರಿಂದ ಅವರ ನಡುವೆ ಭಿನ್ನಾಭಿಪ್ರಾಯದ ಗೊಣಗಾಟ ಪ್ರಾರಂಭವಾಯಿತು. ಅಂದಿನಿಂದ, ಬಿಹಾರದ ಮಹಾಮೈತ್ರಿಕೂಟ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳು ಏಳಲಾರಂಭಿಸಿದವು.


ಕಾರಣ 2- ಆರ್‌ ಜೆ ಡಿ ಸಚಿವ ಚಂದ್ರಶೇಖರ್ ಅಥವಾ ಸುರೇಂದ್ರ ಯಾದವ್ ಆಗಿರಲಿ, ಅವರ ವಿವಾದಾತ್ಮಕ ಹೇಳಿಕೆಗಳು ಸಿಎಂ ನಿತೀಶ್ ಅವರ ಸಮಸ್ಯೆಗಳನ್ನು ಹೆಚ್ಚಿಸುತ್ತಲೇ ಇದ್ದವು. ಅದು ರಾಮ ಮಂದಿರ ಅಥವಾ ರಾಮಚರಿತಮಾನದ ವಿಚಾರವೇ ಆಗಿರಲಿ.


ಕಾರಣ 3- ಸುಮಾರು ಒಂದು ತಿಂಗಳ ಹಿಂದೆ ನಿತೀಶ್ ಅವರು ಲಾಲನ್ ಸಿಂಗ್ ಅವರನ್ನು ತೆಗೆದುಹಾಕುವ ಮೂಲಕ ಜೆಡಿಯು ಅಧಿಕಾರವನ್ನು ವಹಿಸಿಕೊಂಡರು. ಲಾಲು ಅವರ ಆಪ್ತ ಲಾಲನ್ ಸಿಂಗ್ ಅವರು ಲಾಲುಗೆ ಲಾಭ ಮಾಡಿಕೊಡಲು ಪಕ್ಷದಲ್ಲಿ ಏನಾದರೂ ದೊಡ್ಡ ಆಟ ಆಡಬಹುದು ಎಂದು ನಿತೀಶ್ ಅನುಮಾನ ಹೊಂದಿದ್ದರು. ನಿತೀಶ್ ಮತ್ತು ಲಾಲು ನಡುವೆ ಹೆಚ್ಚುತ್ತಿರುವ ಅಂತರಕ್ಕೆ ಇದೂ ಪ್ರಮುಖ ಕಾರಣವಾಗಿತ್ತು.


ಇದನ್ನೂ ಓದಿ: ಭಾನವಾರ ಚಿನ್ನದ ಬೆಲೆಯಲ್ಲಿ ಸ್ಥಿರತೆ.. ಬೆಳ್ಳಿ ಏರಿಕೆ; ಇಂದಿನ ದರ ಹೀಗಿದೆ   


ಕಾರಣ 4- ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಬಿಜೆಪಿ ಹರಸಾಹಸ ಪಡುತ್ತಿದ್ದರೂ ವಿಪಕ್ಷಗಳು ಚದುರಿ ಹೋಗಿವೆ. ರಾಮಮಂದಿರದ ನಂತರ, ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಮೋದಿ ಸರ್ಕಾರವು ದೊಡ್ಡ ಮಾಸ್ಟರ್ ಸ್ಟ್ರೋಕ್ ಅನ್ನು ಆಡಿದೆ. ಬಹುಶಃ 2024 ರಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಿದ್ಧರಾಗಿದೆ ಎಂದು ನಿತೀಶ್ ಕುಮಾರ್ ಅರಿತುಕೊಂಡಿದ್ದಾರೆ ಎಂದನಿಸುತ್ತದೆ. ಇದೇ ಕಾರಣದಕ್ಕೆ ಮೈತ್ರಿಕೂಟವನ್ನು ನಿತೀಶ್ ಕುಮಾರ್ ತೊರೆದಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.