Hardik Pandya: ಟೀಂ ಇಂಡಿಯಾಗೆ ಮತ್ತೆ ಬರ್ತಿದ್ದಾರೆ ಹಾರ್ದಿಕ್ ಪಾಂಡ್ಯ! ಈ ಪಂದ್ಯದ ಮೂಲಕ ಭರ್ಜರಿ ಕಂಬ್ಯಾಕ್

Hardik Pandya Health Update: ಪಾದದ ಗಾಯದಿಂದಾಗಿ ಕಳೆದ ವರ್ಷ ವಿಶ್ವಕಪ್‌’ನಿಂದ ಹೊರಗುಳಿದಿದ್ದ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಆರೋಗ್ಯದ ಅಪ್‌ಡೇಟ್ ನೀಡಿದ್ದಾರೆ.

Written by - Bhavishya Shetty | Last Updated : Jan 28, 2024, 08:32 AM IST
    • ಭಾರತದ ಅನುಭವಿ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ
    • ಪಾದದ ಗಾಯದಿಂದಾಗಿ ಕಳೆದ ವರ್ಷ ವಿಶ್ವಕಪ್‌’ನಿಂದ ಹೊರಗುಳಿದಿದ್ದ ಪಾಂಡ್ಯ
    • ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಆರೋಗ್ಯದ ಅಪ್‌ಡೇಟ್ ನೀಡಿದ್ದಾರೆ.
Hardik Pandya: ಟೀಂ ಇಂಡಿಯಾಗೆ ಮತ್ತೆ ಬರ್ತಿದ್ದಾರೆ ಹಾರ್ದಿಕ್ ಪಾಂಡ್ಯ! ಈ ಪಂದ್ಯದ ಮೂಲಕ ಭರ್ಜರಿ ಕಂಬ್ಯಾಕ್ title=
Hardik Pandya

Hardik Pandya Video: ಭಾರತದ ಅನುಭವಿ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪಾದದ ಗಾಯದಿಂದ ಚೇತರಿಸಿಕೊಂಡ ನಂತರ ಪೂರ್ಣ ಸ್ವಿಂಗ್‌’ನಲ್ಲಿ ಬೌಲಿಂಗ್ ಪ್ರಾರಂಭಿಸಿದ್ದಾರೆ. ಇದು ಟೀಮ್ ಇಂಡಿಯಾ ಮತ್ತು ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌’ಗೆ ಸಂತಸದ ಸುದ್ದಿ ಎಂದೇ ಹೇಳಬಹುದು. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌’ಗೆ ಅವರು ಸಂಪೂರ್ಣವಾಗಿ ಫಿಟ್ ಆಗುತ್ತಿದ್ದಾರೆ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

ಇದನ್ನೂ ಓದಿ: ಲಕ್ಷ್ಮೀ ನಾರಾಯಣ ರಾಜಯೋಗ: ಇನ್ಮುಂದೆ ಎಲ್ಲೆಡೆಯೂ ಈ ರಾಶಿಯವರದ್ದೇ ರಾಜ್ಯಭಾರ.. ಸಾಕ್ಷಾತ್ ಮಹಾಲಕ್ಷ್ಮೀ ಪುತ್ರರ ಸ್ವರೂಪವೇ ಇವರು!

ಪಾದದ ಗಾಯದಿಂದಾಗಿ ಕಳೆದ ವರ್ಷ ವಿಶ್ವಕಪ್‌’ನಿಂದ ಹೊರಗುಳಿದಿದ್ದ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ತುಣುಕನ್ನು ಹಂಚಿಕೊಳ್ಳುವ ಮೂಲಕ ಆರೋಗ್ಯದ ಅಪ್‌ಡೇಟ್ ನೀಡಿದ್ದಾರೆ.

“ಆಟಕ್ಕೆ ಮರಳಲು ನನಗೆ ಸಂತೋಷವಾಗಿದೆ. 17 ವರ್ಷಗಳ ಹಿಂದೆ ಇದೇ ನೆಲದಲ್ಲಿ ನನ್ನ ಪಯಣ ಆರಂಭವಾಯಿತು” ಎಂದಿದ್ದಾರೆ ಹಾರ್ದಿಕ್. ಇನ್ನು ಈ ಸಂದರ್ಭದಲ್ಲಿ ಬೌಲಿಂಗ್‌ ಹೊರತಾಗಿ ಮೈದಾನದಲ್ಲಿ ಓಡಿ ಕಸರತ್ತು ಮಾಡುತ್ತಿರುವುದು ಕಂಡುಬಂದಿದೆ. “ಪ್ರತಿದಿನ ಅಭ್ಯಾಸ ಮಾಡಲು ನನ್ನ ಕೈಲಾದಷ್ಟು ಸಮಯವನ್ನು ನೀಡುತ್ತಿದ್ದೇನೆ” ಎಂದು ಶೀರ್ಷಿಕೆ ಬರೆದಿದ್ದಾರೆ.

ಡಿಸೆಂಬರ್ 15 ರಂದು ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್‌ ನಾಯಕರನ್ನಾಗಿ ಮಾಡಲಾಯಿತು. ನವೆಂಬರ್ 2023 ರಲ್ಲಿ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಗಾಯಗೊಂಡ ಅವರು ರಾಷ್ಟ್ರೀಯ ತಂಡದಿಂದ ಹೊರಗಿದ್ದರು

ಹಾರ್ದಿಕ್ ಭಾರತಕ್ಕಾಗಿ ಎಲ್ಲಾ ಮೂರು ಕ್ರಿಕೆಟ್ ಸ್ವರೂಪಗಳನ್ನು ಆಡಿದ್ದಾರೆ. ತಮ್ಮ ಆಲ್‌ರೌಂಡ್ ಪ್ರದರ್ಶನದ ಆಧಾರದ ಮೇಲೆ ಅನೇಕ ಬಾರಿ ಭಾರತಕ್ಕಾಗಿ ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ. 11 ಟೆಸ್ಟ್ ಪಂದ್ಯಗಳಲ್ಲಿ ಹಾರ್ದಿಕ್ 532 ರನ್‌’ಗಳೊಂದಿಗೆ 17 ವಿಕೆಟ್ ಪಡೆದಿದ್ದಾರೆ. ODIನಲ್ಲಿ, 86 ಪಂದ್ಯಗಳನ್ನು ಆಡುವಾಗ 1769 ರನ್ ಮತ್ತು 84 ವಿಕೆಟ್’ಗಳನ್ನು ಗಳಿಸಿದ್ದಾರೆ. ಇನ್ನು  T20 ಅಂತರಾಷ್ಟ್ರೀಯದ 92 ಪಂದ್ಯಗಳಲ್ಲಿ 1348 ರನ್ ಮತ್ತು 73 ವಿಕೆಟ್ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: BBK Winner: ಸಂಗೀತಾನೂ ಅಲ್ಲ, ವಿನಯ್ ಕೂಡ ಅಲ್ಲ… ಈ ಸ್ಪರ್ಧಿಯೇ ‘ಬಿಗ್ ಬಾಸ್’ ವಿಜೇತ ಅಂತ ಸುಳಿವು ಕೊಟ್ಟ ಕಿಚ್ಚ ಸುದೀಪ್!

ಸದ್ಯ ಹಾರ್ದಿಕ್ ಫಿಟ್ ಆಗಿರುವುದು ಭಾರತ ತಂಡಕ್ಕೂ ಸಂತಸದ ಸುದ್ದಿ. ಜೊತೆಗೆ ಜೂನ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News