ನವದೆಹಲಿ: ಭಾರತದಾದ್ಯಂತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF)ಯಲ್ಲಿ ಖಾಲಿ ಇರುವ 429 ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 


COMMERCIAL BREAK
SCROLL TO CONTINUE READING

ಆಸಕ್ತ ಅಭ್ಯರ್ಥಿಗಳು CISF ವೆಬ್ಸೈಟ್'ನಲ್ಲಿ ಫೆಬ್ರವರಿ 20 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಇಂಟರ್ ಮೀಡಿಯೆಟ್ ಅಥವಾ ಎಸ್ ಎಸ್ ಎಲ್ ಸಿ ಹಾಗೂ 10+2 ತೇರ್ಗಡೆಯಾಗಿರಬೇಕು.


ಉದ್ಯೋಗಾವಕಾಶದ ಹೆಚ್ಚಿನ ವಿವರಗಳು
ಸಂಸ್ಥೆಯ ಹೆಸರು : ಕೇಂದ್ರ ಕೈಗಾರಿಕಾ ಭದ್ರತಾ ಪಡೆ
ಅಧಿಸೂಚನೆ : CISF ನೇಮಕಾತಿ 2019
ಹುದ್ದೆ : ಹೆಡ್ ಕಾನ್ಸ್ಟೇಬಲ್
ಹುದ್ದೆಯ ಸಂಖ್ಯೆ : 429
ವಯೋಮಿತಿ : 18-25 ವರ್ಷಗಳು
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಇಂಟರ್ ಮೀಡಿಯೆಟ್ ಅಥವಾ ಎಸ್ ಎಸ್ ಎಲ್ ಸಿ ಹಾಗೂ 10+2 ತೇರ್ಗಡೆ.


ಅರ್ಜಿ ವಿವರ
ಅರ್ಜಿ ಸಲ್ಲಿಸಲು ಆರಂಭ: ಜನವರಿ 21, 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2019 ಸಂಜೆ 5 ಗಂಟೆಯವರೆಗೆ
ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್
ಅರ್ಜಿ ಶುಲ್ಕ: ಸಾಮಾನ್ಯ/OBC 100ರೂ., ಎಸ್ಸಿ/ಎಸ್ಟಿ/ಮಹಿಳೆ/ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ


ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಸಂಸ್ಥೆಯ ಅಧಿಕೃತ ಪ್ರಕಟಣೆಗೆ, ಹೆಚ್ಚಿನ ಮಾಹಿತಿಗೆ www.cisf.gov.in ವೆಬ್ಸೈಟ್'ಗೆ ಭೇಟಿ ನೀಡಿ.