ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗ ಕಾರ್ಯಾಚರಣೆಯಡಿಯಲ್ಲಿ ಭಾರತೀಯ ರೈಲ್ವೇ 90,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ರೈಲ್ವೆ ಲೋಕೋ ಪೈಲಟ್ ಮತ್ತು ತಂತ್ರಜ್ಞರನ್ನು ಒಳಗೊಂಡಂತೆ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಭರ್ತಿಮಾಡಬೇಕು ಎಂದು ರೈಲ್ವೆ ಸಚಿವಾಲಯವು ಮಾಹಿತಿ ನೀಡಿದೆ. 


COMMERCIAL BREAK
SCROLL TO CONTINUE READING

ಈ ಹುದ್ದೆಗಳಿಗೆ ಅರ್ಜಿ ಆಹ್ವಾನ
ಗ್ರೂಪ್ ಡಿ ಯಲ್ಲಿ ವಿವಿಧ ವಿಭಾಗಗಳ ಸಹಾಯಕ ಹುದ್ದೆಗಾಗಿ 62,907 ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ವಿಷಯವೆಂದರೆ ಈ ಹುದ್ದೆಗಾಗಿ ಐಟಿಐ ಪ್ರಮಾಣಪತ್ರದ ಅವಶ್ಯಕತೆ ಇಲ್ಲ. ಇದಲ್ಲದೆ ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಾಗಿ 26,502 ಪೋಸ್ಟ್ ಖಾಲಿಯಿದ್ದು ಇದಕ್ಕೂ ಅರ್ಜಿ ಆಹ್ವಾನಿಸಲಾಗಿದೆ. ಹೀಗಾಗಿ ರೈಲ್ವೆ ಇಲಾಖೆಯಲ್ಲಿ ಒಟ್ಟು 89,409 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 


ಇದನ್ನೂ ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪರೀಕ್ಷೆಯಲ್ಲಿ ಶೂನ್ಯ ಸಂಪಾದಿಸಿದವರಿಗೂ ಕ್ಲರ್ಕ್ ಪೋಸ್ಟ್!


ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆ ಮತ್ತು ಕೊನೆಯ ದಿನಾಂಕ
ಈ ಹುದ್ದೆಗಳಿಗೆ ಕನಿಷ್ಠ ಅರ್ಹತೆ 10 ನೇ ಮತ್ತು ಐಟಿಐ (ಕೈಗಾರಿಕಾ ತರಬೇತಿ ಇನ್ಸ್ಟಿಟ್ಯೂಟ್ ಸರ್ಟಿಫಿಕೇಟ್) ಪ್ರಮಾಣಪತ್ರ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 5, 2018. ಭಾರತೀಯ ರೈಲ್ವೇಯ ಅಧಿಕೃತ ವೆಬ್ಸೈಟ್  indianrailwayrecruitment.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.


ಆನ್ಲೈನ್ ಪರೀಕ್ಷೆ ಮತ್ತು ನೇಮಕಾತಿ
ರೈಲ್ವೆಯಲ್ಲಿ ಕೆಲಸ ಮಾಡುವ ಮೂಲಕ ಭವಿಷ್ಯವನ್ನು ನಿರ್ಮಿಸುವ ಬಗ್ಗೆ ಯೋಚನೆ ಮಾಡುವ ಯುವಜನರಿಗೆ ಇದೊಂದು ಉತ್ತಮ ಅವಕಾಶ. 89,409 ಪೋಸ್ಟ್ಗಳಿಗೆ ಆನ್ಲೈನ್ ನೇಮಕಾತಿ ಪರೀಕ್ಷೆಗೆ ಆನ್ಲೈನ್ ನೇಮಕಾತಿ ನಡೆಯಲಿದೆ. ಸುರಕ್ಷತೆಯ ಅಡಿಯಲ್ಲಿ ಖಾಲಿಯಾಗಿರುವ 70,000 ಹುದ್ದೆಗಳನ್ನು ಈ ನೇಮಕಾತಿ ಅಡಿಯಲ್ಲಿ ತುಂಬಿಸಲಾಗುವುದು ಎಂದು ಹೇಳಲಾಗಿದೆ.


2019ರ ಮೊದಲು ಸಿಗಲಿದೆ ಭಾರೀ ಉದ್ಯೋಗಾವಕಾಶ
ಅಧಿಕೃತ ಮೂಲಗಳ ಪ್ರಕಾರ ರೈಲ್ವೆಯ ಹೊರತಾಗಿಯೂ 2019ಕ್ಕೂ ಮೊದಲು ಹುದ್ದೆಗಳನ್ನು ತುಂಬಲು ಇತರ ಸಚಿವಾಲಯಗಳಿಗೆ ಸೂಚನೆ ನೀಡಲಾಗಿದೆ.