ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಂಗಳವಾರದಂದು ಅನಿಲ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬನು ಕೆಂಪು ಮೆಣಸಿನ ಪುಡಿಯನ್ನು ಎರಚಿದ ಘಟನೆ ದೆಹಲಿ ಸಚಿವಾಲಯದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಪಿಟಿಐ ಪ್ರಕಾರ ಕೇಜ್ರಿವಾಲ್ ಊಟಕ್ಕೆ ಹೊರಟಾಗ ಮೂರನೆಯ ಮಹಡಿಯಲ್ಲಿ ಮುಖ್ಯಮಂತ್ರಿ ಕೊಠಡಿಯ ಹೊರಗಡೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.ಈ ಘಟನೆ ನಡೆದ ನಂತರ ಪೊಲಿಸರು ಆ ವ್ಯಕ್ತಿಯನ್ನು ಬಂಧಿಸಿ ಇಂದ್ರಪ್ರಸ್ಥ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ. 


ಅಷ್ಟಕ್ಕೂ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ಈ ಘಟನೆ ಮೊದಲನೇಯದ್ದಲ್ಲ. ಏಪ್ರಿಲ್ 2014 ರಲ್ಲಿ, ಕೇಜ್ರಿವಾಲ್ ಅವರಿಗೆ ದೆಹಲಿಯಲ್ಲಿ ರೋಡ್ ಶೂ ಕಾರ್ಯಕ್ರಮದಲ್ಲಿ ವ್ಯಕ್ತಿಯೋಬ್ಬನು ಅವರ ಕೆನ್ನೆಗೆ ಬಾರಿಸಿದ್ದನು. ದಕ್ಷಿಣ ದೆಹಲಿಯ ದಕ್ಷಿಣಪುರಿ ಪ್ರದೇಶದ ಮೂಲಕ ರೋಡ್ ಶೋ ದಲ್ಲಿ ಹಾದು ಹೋಗುತ್ತಿದ್ದ ವೇಳೆ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ತೆರೆದ ವಾಹನ ಮೇಲೆ ಹತ್ತಿ ಅವರ ಕೆನ್ನೆಗೆ ಬಾರಿಸಿದ್ದನು.