ನವದೆಹಲಿ : ಕೊರೊನಾ ಕಾರಣದಿಂದ ಅದೆಷ್ಟೋ ಜನರ ದುಡಿಮೆ ನಿಂತು ಹೋಗಿದೆ. ಲಾಕ್ ಡೌನ್ (lock down) ಹಿನ್ನೆಲೆಯಲ್ಲಿ ಆರ್ಥಿಕ ನಷ್ಟ ಅನುಭವಿಸಿದವರಿಗೆ ಲೆಕ್ಕವಿಲ್ಲ. ಇನ್ನು ತಮ್ಮ ಮಕ್ಕಳ ಶಾಲಾ ಫೀಸ್ (School fees) ಜಮಾ ಮಾಡಲು ಸಾಧ್ಯವಾಗದ ಪೋಷಕರಿಗೆ ಒಂದು ಸಮಾಧಾನದ ಸುದ್ದಿ ಬಂದಿದೆ. 2021-22 ಶೈಕ್ಷಣಿಕ ಸಾಲಿನಲ್ಲಿ ಕಟ್ಟಬೇಕಾದ ಶುಲ್ಕದಲ್ಲಿ,  15%ರಷ್ಟು ಕಡಿತಗೊಳಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ (Maharastra government) ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಿದೆ. ಆದರೆ ಸರ್ಕಾರ ಈ ನಿರ್ಧಾರ ಖಾಸಗಿ ಶಾಲೆಗಳ ಆಡಳಿತ ವರ್ಗವನ್ನು ಕೆರಳಿಸಿದೆ.  ಸರ್ಕಾರದ ಈ ನಿರ್ಧಾರದ ವಿರುದ್ದ ನ್ಯಾಯಾಲಯದ ಮೊರೆ ಹೋಗಲು ಶಾಲೆಗಳು ಕೂಡ ಯೋಚಿಸಿವೆ. 


COMMERCIAL BREAK
SCROLL TO CONTINUE READING

ಪೋಷಕರಿಗೆ ಹೀಗೆ ಸಿಗಲಿದೆ ಲಾಭ ? : 
 ಇಲ್ಲಿಯವರೆಗೆ ಮಗುವಿನ ವಾರ್ಷಿಕ ಶುಲ್ಕ 10,000 ಸಾವಿರ ರೂಪಾಯಿಗಳನ್ನು ಕಟ್ಟುತ್ತಿದ್ದೀರಿ ಅಂದು ಕೊಳ್ಳೋಣ. ಇದರ ಮೇಲೆ    ಶೇಕಡಾ 15 ರಷ್ಟು ರಿಯಾಯಿತಿ ಸಿಗಲಿದೆ. ನೀಡಲಾಗುವುದು. ಅಂದರೆ ಹತ್ತು ಸಾವಿರದ ಬದಲಿಗೆ 8500 ರೂಪಾಯಿಗಳನ್ನುಮಾತ್ರ ಕಟ್ಟಬೇಕಾಗುತ್ತದೆ.  


ಇದನ್ನೂ ಓದಿ :  LPG Subsidy: ನಿಮಗೆ ಎಲ್‌ಪಿಜಿ ಮೇಲೆ ಸಬ್ಸಿಡಿ ಸಿಗುತ್ತಿದೆಯೇ ? ಹೀಗೆ ಚೆಕ್ ಮಾಡಿ


ಶುಲ್ಕವನ್ನು ಮೊದಲೇ ಪಾವತಿಸಿದ್ದರೆ ಏನು ಮಾಡಬೇಕು?
ಸರ್ಕಾರದ (Maharastra government) ಸೂಚನೆಗಳ ಪ್ರಕಾರ, ಪೋಷಕರು ಈಗಾಗಲೇ ತಮ್ಮ ಮಗುವಿನ ಒಂದು ವರ್ಷದ ಶುಲ್ಕವನ್ನುಕಟ್ಟಿದ್ದರೆ,  ಮುಂದಿನ ವರ್ಷದ ಶುಲ್ಕದಲ್ಲಿ ಆ 15% ವನ್ನು ಶಾಲೆ ಸರಿಹೊಂದಿಸಬೇಕು. ಅಥವಾ ಮರುಪಾವತಿ ಮಾಡಬೇಕು. ಅಂದರೆ ಈಗಾಗಲೇ ವರ್ಷದ ಸಂಪೂರ್ಣ ಶುಲ್ಕ 10,000 ರೂ. ಯನ್ನು ಕಟ್ಟಿದ್ದರೆ, 1500 ರೂ.ಗಳನ್ನು ಮುಂದಿನ ವರ್ಷ ಸರಿಹೊಂದಿಸಲಾಗುತ್ತದೆ. ಇಲ್ಲದಿದ್ದರೆ,  ಶಾಲೆಯು ಈ ಹಣವನ್ನು ಪೋಷಕರಿಗೆ ಹಿಂದಿರುಗಿಸಬೇಕು. 


ಸರ್ಕಾರದ ನಿರ್ಧಾರದ ಬಗ್ಗೆ  ಶಾಲೆ ಆಡಳಿತ ಮಂಡಳಿ ಬೇಸರ : 
ಕೊರೊನಾದಿಂದ  (Coronavirus) ಸಂಕಷ್ಟದಲ್ಲಿರುವ ಪೋಷಕರಿಗೆ ಸರ್ಕಾರದ ಈ ನಿರ್ಧಾರ ಸಂತೋಷವನ್ನುಂಟು ಮಾಡಿದರೆ, ಮತ್ತೊಂದೆಡೆ ಈ ಸುದ್ದಿಯಿಂದ ಶಾಲೆಯ ಆಡಳಿತ ಮಂಡಳಿ ಅತೃಪ್ತಿ ವ್ಯಕ್ತಪಡಿಸಿದೆ. ಸರ್ಕಾರವು ಶುಲ್ಕವನ್ನು (School fees) ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಎನ್ನುವುದು ಶಾಲೆಯ ವಾದ. ಇನ್ನು ಈ ವಿಚಾರದ ಬಗ್ಗೆ ಕೋರ್ಟ್ ಮೊರೆ ಹೋಗಲು ಶಾಲೆಗಳು ನಿರ್ಧರಿಸಿವೆ.  


ಇದನ್ನೂ ಓದಿ :  Vehicle Scrappage Policy ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ, ಇಲ್ಲಿದೆ ವಿಶೇಷತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ