ಪಾಕಿಸ್ತಾನದ ಪತ್ತೇದಾರಿ ಸಂಸ್ಥೆ ಐಎಸ್ಐ ನ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬಲ್ಪುರದಲ್ಲಿ ಸೈನ್ಯದ ಅಧಿಕಾರಿಯೋರ್ವರನ್ನು ಬಂಧಿಸಲಾಗಿದೆ ಎಂಬ ವರದಿಯಾದ ಬೆನ್ನಲ್ಲೇ, ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು, ಪ್ರಕರಣದ ಆರೋಪಿಯಾದ ಲೆಫ್ಟಿನೆಂಟ್ ಕರ್ನಲ್ ಅವರು ಯುನಿಟ್ನಲ್ಲಿ ತಮ್ಮ ದಿನನಿತ್ಯದ ಕರ್ತವ್ಯಗಳನ್ನು ಮುಂದುವರಿಸುತ್ತಿದ್ದಾರೆ ಮತ್ತು ವಿಚಾರಣೆಯ ಭಾಗವಾಗಿ ಅವರನ್ನು ಪ್ರಶ್ನೆಗೆ ಒಳಪಡಿಸಲಾಗಿತ್ತು ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಮುಂದುವರೆದು ಮಾತನಾಡಿದ ಅವರು, "ಹನಿ ಟ್ರ್ಯಾಪಿಂಗ್ ಮತ್ತು ಹಣದ ವಿನಿಮಯದ ವರದಿಗಳು ಕೇವಲ ಊಹಾಪೋಹಗಲಾಗಿದ್ದು, ಇವು ನಿಖರವಾದ ಅಥವಾ ಪ್ರಾಮಾಣಿಕವಾದುವಲ್ಲ" ಎಂದು ಹೇಳಿದರಲ್ಲದೆ, "ವಿಚಾರಣೆಯ ಫಲಿತಾಂಶದ ವಿವರಗಳನ್ನು ಪ್ರಗತಿಯಂತೆ ಕಾಲಕ್ರಮೇಣ ತಿಳಿಸಲಾಗುವುದು" ಎಂದರು.


ಲೆಫ್ಟಿನೆಂಟ್ ಅವರ ಐಟಿ ಸಾಧನಗಳಿಂದ ವರ್ಗೀಕರಿಸಿದ ಮಾಹಿತಿಯ ಶಂಕಿತ ಸೋರಿಕೆ ಕುರಿತು ಸತ್ಯವನ್ನು ಕಂಡುಹಿಡಿಯಲು ಫೆಬ್ರವರಿ 12 ರಂದು  ಜಬಲ್ಪುರ್ನಲ್ಲಿ ಭಾರತೀಯ ಸೇನೆಯಿಂದ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. "ಇದು ಅಚಾನಕ್ ಆಗಿ ಅಥವಾ ಉದ್ದೇಶಪೂರ್ವಕವಾಗಿ ನಡೆದಿದೆಯೆ ಎಂದು ಇನ್ನೂ ದೃಢೀಕರಿಸಬೇಕಾಗಿದೆ" ಎಂದು ಹಿರಿಯ ಸೇನಾಧಿಕಾರಿ ಹೇಳಿದರು.


ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ನ್ಯಾಯ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.


ಈ ಕುರಿತು ಬುಧವಾರ ಮಾಹಿತಿ ನೀಡಿದ ಅಲಹಾಬಾದ್ ಭದ್ರತಾ PRO ವಿಂಗ್ ಕಮಾಂಡರ್ ಅರವಿಂದ್ ಸಿನ್ಹಾ ಅವರು "ಕಳೆದ (ಮಂಗಳವಾರ) ರಾತ್ರಿ ಸೇನೆಯ ಹಿರಿಯ ತಂಡ ಅವರನ್ನು ಜಬಲ್ಪುರದಿಂದ ಬಂಧಿಸಿ ವಿಚಾರಣೆ ನಡೆಸಲಾಗಿದೆ" ಎಂದು ತಿಳಿಸಿದ್ದಾರೆ.


ಆದಾಗ್ಯೂ, ಹನಿ ಟ್ರ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಈ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ವಿಂಗ್ ಕಮಾಂಡರ್ ಸಿನ್ಹಾ ಹೇಳಿದ್ದಾರೆ.