ಗಣರಾಜ್ಯೋತ್ಸವ 2024: ಭಾರತವು ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದ್ದಂತೆ, ಒಂದು ವಿಶೇಷ ಪ್ರಶ್ನೆ ಉದ್ಭವಿಸುತ್ತದೆ. ಈ ವರ್ಷ 75ನೇ ಅಥವಾ 76ನೇ ಗಣರಾಜ್ಯೋತ್ಸವವೇ? ಎಂಬುದು. ಧ್ವಜಾರೋಹಣ ಮತ್ತು ಉತ್ಸವಗಳು ಪ್ರಾರಂಭವಾಗುವ ಮೊದಲು ಈ ಗೊಂದಲ ನಮ್ಮನ್ನು ಕಾಡುತ್ತದೆ. ಇಂದು ನಾವು ಇದರ ಹಿಂದಿನ ರಹಸ್ಯವನ್ನು ನಿಮಗೆ ತಿಳಿಸುತ್ತೇವೆ. ಈ ಸರಳ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಗಣರಾಜ್ಯೋತ್ಸವದ ಇತಿಹಾಸಕ್ಕೆ ಹಿಂತಿರುಗಬೇಕು. ಇದರ ವಿಶೇಷ ಮಹತ್ವ ಮತ್ತು 1950ರಲ್ಲಿ ಪ್ರಾರಂಭವಾದ ಐತಿಹಾಸಿಕ ಪ್ರಯಾಣವನ್ನು ಎತ್ತಿ ತೋರಿಸುತ್ತದೆ. ಈ ವಾರ್ಷಿಕ ಆಚರಣೆಯ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಇದು ಭಾರತದ ಏಕತೆ ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ಸಂಕೇತಿಸುತ್ತದೆ.


COMMERCIAL BREAK
SCROLL TO CONTINUE READING

ಇದು 75ನೇ ಅಥವಾ 76ನೇ ಆಚರಣೆಯೇ?


ಈ ವರ್ಷ ಭಾರತವು ತನ್ನ 75ನೇ ಗಣರಾಜ್ಯೋತ್ಸವವನ್ನು ಜನವರಿ 26ರಂದು ಆಚರಿಸುತ್ತಿದೆ. ಭಾರತದ ಸಂವಿಧಾನ ಅಂಗೀಕಾರಗೊಂಡ ದಿನ ಮತ್ತು 1950ರ ಜನವರಿ 26ರಂದು ರಾಷ್ಟ್ರವನ್ನು ಗಣರಾಜ್ಯವಾಗಿ ಒಪ್ಪಿಕೊಂಡ ದಿನವಾಗಿ ಇದನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಿಲಿಟರಿ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರು ಕರ್ತವ್ಯ ಪಥದಲ್ಲಿ ಪರೇಡ್ ನಡೆಸುತ್ತಾರೆ. ಭಾರತೀಯ ಸೇನಾ ಯೋಧರ ಮಿಲಿಟರಿ ಶಕ್ತಿ ಪ್ರದರ್ಶನಕ್ಕೆ ಈ ದಿನ ಸಾಕ್ಷಿಯಾಗಲಿದೆ. ಕರ್ನಾಟಕ ಸೇರಿದಂತೆ ದೇಶದ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಎತ್ತಿ ತೋರಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ. ದೆಹಲಿಯ  ಇಂಡಿಯಾ ಗೇಟ್‌ನಲ್ಲಿ ಭಾರತದ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ.


ಇದನ್ನೂ ಓದಿ: ʼಬಾಬ್ರಿ ಮಸೀದ್‌ ಜೀವಂತವಾಗಿದೆʼ ಭಾರತದಲ್ಲಿ ಕೋಮುಗಲಭೆ ಎಬ್ಬಿಸಲು ʼಪಾಕ್‌ʼ ಸಂಚು.!


ಕ್ಯಾಲೆಂಡರ್ ವರ್ಷಗಳಿಗೆ ವಿರುದ್ಧವಾಗಿ, ಭಾರತೀಯ ಸಂವಿಧಾನವನ್ನು ಅಳವಡಿಸಿಕೊಂಡ ನಂತರದ ವರ್ಷಗಳ ಸಂಖ್ಯೆಯನ್ನು ಆಧರಿಸಿ ಗಣರಾಜ್ಯೋತ್ಸವವನ್ನು ಎಣಿಸಲಾಗುತ್ತದೆ. ಜನವರಿ 26, 1950ರಂದು ಅದನ್ನು ಅಳವಡಿಸಿಕೊಳ್ಳುವುದರೊಂದಿಗೆ ಈ ವರ್ಷ ಅಂದರೆ 2024ರಂದು ನಾವು 75ನೇ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾಗುತ್ತಿದ್ದೇವೆ. 


ಗಣರಾಜ್ಯೋತ್ಸದ ಇತಿಹಾಸ ಮತ್ತು ಮಹತ್ವ


2024ರಲ್ಲಿ ಆಚರಿಸಲಾಗುತ್ತಿರುವ 75ನೇ ಗಣರಾಜ್ಯೋತ್ಸವವು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದು ಸ್ವತಂತ್ರ ಭಾರತದ ಚೈತನ್ಯವನ್ನು ಸಂಕೇತಿಸುತ್ತದೆ. 1950ರಲ್ಲಿ ಈ ದಿನದಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ ಎಂದು ಘೋಷಿಸಿತು, ಇದು ವಸಾಹತುಶಾಹಿ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯವನ್ನು ಸೂಚಿಸುತ್ತದೆ. ಇದು ತಮ್ಮ ಸರ್ಕಾರವನ್ನು ಆಯ್ಕೆ ಮಾಡುವ ನಾಗರಿಕರ ಪ್ರಜಾಪ್ರಭುತ್ವದ ಶಕ್ತಿಯನ್ನು ನೆನಪಿಸುತ್ತದೆ.


ಇದನ್ನೂ ಓದಿ: ʼಬಾಬ್ರಿ ಮಸೀದ್‌ ಜೀವಂತವಾಗಿದೆʼ ಭಾರತದಲ್ಲಿ ಕೋಮುಗಲಭೆ ಎಬ್ಬಿಸಲು ʼಪಾಕ್‌ʼ ಸಂಚು.!


1950ರಲ್ಲಿ ಉದ್ಘಾಟನಾ ಗಣರಾಜ್ಯೋತ್ಸವದ ಮೆರವಣಿಗೆಯು ಇರ್ವಿನ್ ಆಂಫಿಥಿಯೇಟರ್‌ನಲ್ಲಿ (ಈಗ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣ) ನಡೆಯಿತು, ಆದರೆ ರಾಜ್‌ಪಥ್‌ನಲ್ಲಿ (ಈಗಿನ ಕರ್ತವ್ಯಪಥ್) ಮೊದಲ ಮೆರವಣಿಗೆಯು 1955ರಲ್ಲಿ ನಡೆಯಿತು, ಈ ವೇಳೆ ಪಾಕಿಸ್ತಾನದ ಗವರ್ನರ್ ಜನರಲ್ ಮಲಿಕ್ ಗುಲಾಮ್ ಮುಹಮ್ಮದ್ ಮುಖ್ಯ ಅತಿಥಿಯಾಗಿದ್ದರು. ಗಣರಾಜ್ಯೋತ್ಸವದ ಮುನ್ನಾದಿನವಾದ ಇಂದು(ಜನವರಿ ೨೫ ರಾಷ್ಟ್ರವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡುತ್ತಾರೆ. ಈ ಸಂದರ್ಭದ ಐತಿಹಾಸಿಕ ಮಹತ್ವವನ್ನು ಅವರು ಒತ್ತಿಹೇಳುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.