ನವದೆಹಲಿ: SC Ruling on Women Army Officers - ಭಾರತೀಯ ಸೇನೆಯಲ್ಲಿ ಮಹಿಳೆಯರ ಶಾಶ್ವತ ಆಯೋಗಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಜೊತೆಗೆ ಈ ವಿಷಯವನ್ನು ಮುಂದಿನ ಒಂದು ತಿಂಗಳೊಳಗೆ ಪರಿಗಣಿಸಿ, ಮುಂದಿನ ಎರಡು ತಿಂಗಳುಗಳ ಒಳಗೆ ಇತ್ಯರ್ಥಪಡಿಸುವಂತೆ ನ್ಯಾಯಪೀಠ ಸೇನೆಗೆ ಸೂಚಿಸಿದೆ. ಈ ತೀರ್ಪಿನ ವೇಳೆ ನ್ಯಾಯಾಲಯ ಭಾರತೀಯ ಸೇನೆಯ ವಾರ್ಷಿಕ ವರದಿ ಹಾಗೂ ಮೆಡಿಕಲ್ ಫಿಟ್ನೆಸ್ ಮಾನದಂಡಗಳನ್ನು ತಡವಾಗಿ ಅನುಷ್ಠಾನಗೊಳಿಸುವುದು ಮಹಿಳೆಯರ ಪಾಲಿಗೆ ಪಕ್ಷಪಾತ ಧೋರಣೆಯಾಗಿದೆ. ಭಾರತೀಯ ಸೇನೆಯಲ್ಲಿ ಮಹಿಳೆಯರ ಶಾಶ್ವತ ಆಯೋಗಕ್ಕೆ ಬೆಂಬಲ ವ್ಯಕ್ತಪಡಿಸಿ 80 ಮಹಿಳೆಯರ ಅರ್ಜಿಯ ಕುರಿತು ಗುರುವಾರ ನ್ಯಾಯಾಲಯ ವಿಚಾರಣೆ ನಡೆಸಿದೆ.


COMMERCIAL BREAK
SCROLL TO CONTINUE READING

ಇಲ್ಲಿ ವಿಶೇಷವೆಂದರೆ ಕಳೆದ ವರ್ಷ ಫೆಬ್ರವರಿಯಲ್ಲಿ ಸೈನ್ಯದ ಮಹಿಳಾ ಅಧಿಕಾರಿಗಳಿಗೆ ಪುರುಷರಿಗೆ ಸಮನಾಗಿ ಕಮಾಂಡ್ ಹುದ್ದೆಗಳಿಗೆ ಅರ್ಹರಾಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆ ವೇಳೆಯೂ ಕೂಡ , ನ್ಯಾಯಾಲಯವು ಸರ್ಕಾರದ ವಾದ 'ತಾರತಮ್ಯ', ಸಂಪ್ರದಾಯವಾದ ಮತ್ತು ಗೊಂದಲಗಳಿಂದ ಕೂಡಿದೆ ಎಂದು ಹೇಳಿತ್ತು. ಈ ವೇಳೆ ಸೇವಾ ಅವಧಿಯನ್ನು ಲೆಕ್ಕಿಸದೆ ಎಲ್ಲಾ ಮಹಿಳೆಯರಿಗೆ ಶಾಶ್ವತ ಆಯೋಗ ಲಭ್ಯವಾಗಲಿದೆ ಎಂದು ನ್ಯಾಯಾಲಯ ಹೇಳಿತ್ತು.


ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿರುವ ಐದು ಮಹತ್ವದ ಅಂಶಗಳು ಇಂತಿವೆ
-ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಮಹಿಳೆಯರಿಗೆ ಕಡ್ಡಾಯ ಫಿಸಿಕಲ್ ಫಿಟ್ನೆಸ್ ಅನ್ನು ಅನಿಯಂತ್ರಿತ ಮತ್ತು ಅಭಾಗಲಭ್ದ ಎಂದು ಹೇಳಿದೆ. ಸೇನೆಯ ವಾರ್ಷಿಕ ಗೌಪ್ಯತಾವರದಿಯನ್ನು ತಡವಾಗಿ ಅನುಷ್ಠಾನಗೊಳಿಸುವುದು ಎಂದರೆACR ಮೌಲ್ಯಮಾಪನ ಹಾಗೂ ವೈದ್ಯಕೀಯ ಫಿಟ್ನೆಸ್ ಮಾನದಂಡಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಎಸಗಿದ ತಾರತಮ್ಮ ಧೋರಣೆ ಎಂದು ನ್ಯಾಯಾಲಯ ಹೇಳಿದೆ.


- ಈ ಮೊದಲು ಕೂಡ ನ್ಯಾಯಾಲಯ ಮಹಿಳೆಯರಿಗೆ ಶಾಶ್ವತ ಆಯೋಗ ನೀಡಬೇಕು ಎಂದು ಹೇಳಿದೆ. ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆಯಿಂದ ಮಹಿಳಾ ಅಧಿಕಾರಿಗಳಿಗೆ ತೊಂದರೆಯಾಗಿದೆ ಎಂದು ನ್ಯಾಯಾಲಯ ನ್ಯಾಯಪೀಠ ಹೇಳಿದರು. 'ಎಸ್‌ಎಸ್‌ಸಿ ಅಂದರೆ ಸಣ್ಣ ಸೇವಾ ಆಯೋಗವು ಮೌಲ್ಯಮಾಪನ ಮಾಡುವ ವಿಧಾನದಿಂದಾಗಿ ಮಹಿಳಾ ಅಧಿಕಾರಿಗಳಿಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಹಾನಿ ಉಂಟಾಗುತ್ತದೆ' ಎಂದು ನ್ಯಾಯಾಲಯ ಹೇಳಿದೆ.


- ಈ ಸಂದರ್ಭದಲ್ಲಿ ನ್ಯಾಯಾಲಯ ಸೇನೆಯಲ್ಲಿ ಮಹಿಳೆಯರ ಕಾರ್ಯಗಳ ಕುರುತು ಶ್ಲಾಘನೆ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿದ್ದ ಜಸ್ಟಿಸ್ ಡಿ.ವೈ ಚಂದ್ರಚೂಡ್, ಹಲವು ಮಹಿಳಾ ಅಧಿಕಾರಿಗಳು ನ್ಯಾಯಾಲಯದ ಸಮ್ಮುಖದಲ್ಲಿಯೇ ಹಲವು ಅವಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. ಹಲವರು ವಿದೇಶದಲ್ಲಿರುವ ಅಸೈನ್ಮೆಂಟ್ ಗಳ ಮೇಲೆ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದಿದ್ದರು.  ಜೊತೆಗೆ ಸೇನೆಯಲ್ಲಿ ಮಹಿಳೆಯರ ಆಯ್ಕೆಗಾಗಿ ಆರಂಭಿಸಲಾಗುತ್ತಿರುವ ಮಂಡಳಿಯ ಮೇಲೂ ಕೂಡ ಪ್ರಶ್ನೆ ಎತ್ತಿದ್ದರು.


ಇದನ್ನೂ ಓದಿ-ಬದಲಾಗಲಿದೆ ಕಲಿಕಾ ಪದ್ಧತಿ : ಲಾಂಚ್ ಆಗಿದೆ CBSE ಹೊಸ Assessment Framework


 - ಮಹಿಳಯರ ಪರ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಆಯ್ಕೆ ಪ್ರಕ್ರಿಯೆಯ ಮೇಲೂ ಕೂಡ ಪ್ರಶ್ನೆಗಳನ್ನು ಎತ್ತಿದೆ. 'ಕೆಲವರು ಆಟೋಟಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಕೂಡ ಅವರನ್ನು ಕಡೆಗಣಿಸಿರುವುದು ನಮ್ಮ ಗಮನಕ್ಕೆ ಬಂದಿದೆ' ಎಂದು ನ್ಯಾಯಪೀಠ ಹೇಳಿದೆ. ಈ ಬಾರಿಯ ವಿಚಾರಣೆಯ ವೇಳೆ ಮಹಿಳೆಯರ ಸಾಧನೆಗಳ ಕುರಿತು ಒಂದು ದೊಡ್ಡ ಪಟ್ಟಿಯನ್ನೇ ಶಾಮೀಲುಗೊಳಿಸಿರುವುದು ವಿಶೇಷ. ಈ ಬಗ್ಗೆ ಹೇಳಿರುವ ನ್ಯಾಯಪೀಠ, "ಆಯ್ಕೆ ಮಂಡಳಿ ಸೆಲೆಕ್ಷನ್ ಗಾಗಿ ಅಲ್ಲ ರಿಜೆಕ್ಷನ್ ಗಾಗಿ ಸಭೆ ಸೇರುತ್ತದೆ" ಎಂಬಂತೆ ಬಿಂಬಿತವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.


ಇದನ್ನೂ ಓದಿ- Ethanol As Standalone Fuel - ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ Modi Government


- ಶಾರ್ಟ್ ಸರ್ವಿಸ್ ಕಮಿಷನ್ ನಲ್ಲಿ ಮಹಿಳೆಯರ ಆಗುತ್ತಿರಿವ ಪ್ರತಿ ಭೇದ-ಭಾವಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ನ್ಯಾಯಾಲಯ ಸೇನೆಯನ್ನು ತರಾಟೆಗೆ ತೆಗೆದುಕೊಂಡಿದೆ. ದೇಶಕ್ಕಾಗಿ ಖ್ಯಾತಿ ತಂದು ಕೊಟ್ಟಿರುವ ಮಹಿಳೆಯರನ್ನು ಕೂಡ ಪರ್ಮನೆಂಟ್ ಕಮಿಷನ್ ಪ್ರಕರಣದಲ್ಲಿ ಕಡೆಗಣಿಸಲಾಗಿದೆ ಎಂದು ನ್ಯಾಯಪೀಠ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.


ಇದನ್ನೂ ಓದಿ- ಪ್ರತಿಪಕ್ಷಗಳ ವಿರೋಧದ ನಡುವೆಯೂ ದೆಹಲಿ ಮಸೂದೆಗೆ ರಾಜ್ಯಸಭೆ ಅಂಗೀಕಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.