ನವದೆಹಲಿ: Loan Moratorium ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಮೊರಟೋರಿಯಂ ಅವಧಿಯನ್ನು ಆಗಸ್ಟ್ 31 ರ ನಂತರ ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೆ ವೇಳೆ ಈ ಆರು ತಿಂಗಳ ಅವಧಿಯಲ್ಲಿ ಯಾವುದೇ ಸಾಲಗಾರರಿಂದ ಪಡೆದ ಬಡ್ಡಿಗೆ ಮೇಲೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ. ಇನ್ನೊಂದೆಡೆ ಮೊರಾಟೋರಿಯಂ ಅವಧಿಯ ವೇಳೆ 2 ಕೋಟಿ ರೂ.ಗೂ ಹೆಚ್ಚಿನ ಬಡ್ಡಿಯ ಮೇಲೆ ಬಡ್ಡಿಮನ್ನಾ ಕೂಡ ನೀಡಲಾಗುವುದಿಲ್ಲ ಎಂದು ಎಂ.ಆರ್ ಷಾ ಹೇಳಿದ್ದಾರೆ.
ಒಂದು ವೇಳೆ ಯಾವುದೇ ಬ್ಯಾಂಕ್ ಬಡ್ಡಿಯ ಮೇಲೂ ಬಡ್ಡಿ ಪಡೆದಿದ್ದರೆ, ಆ ಬ್ಯಾಂಕ್ ಅದನ್ನು ಸಾಲಗಾರರಿಗೆ ಮರುಪಾವತಿಸಬೇಕು. ಇದಕ್ಕೆ ಯಾವುದೇ ರೀತಿಯ ಪರಿಹಾರ ನೀಡಲಾಗುವುದಿಲ್ಲ. ಸಂಪೂರ್ಣ ಸಾಲ ಮನ್ನಾ ಸಂಭವವಿಲ್ಲ ಏಕೆಂದರೆ, ಬ್ಯಾಂಕ್ ಗಳ ಮೇಲೆ ಖಾತೆದಾರರ ಹಾಗೂ ಪೆನ್ಷನ್ ಧಾರಕರ ಜವಾಬ್ದಾರಿ ಇರುತ್ತದೆ ಎಂದು ಸುಪ್ರೀಂ ಇದೆ ವೇಳೆ ಹೇಳಿದೆ.
ಸರ್ಕಾರದ ನಿರ್ಣಯದಲ್ಲಿ ಹಸ್ತಕ್ಷೇಪ ಇಲ್ಲ
ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ ಮತ್ತು ನ್ಯಾಯಾಲಯ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು. ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರವು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಿದೆ. ನೀತಿಯ ಕುರಿತು ನಾವು ಸರ್ಕಾರಕ್ಕೆ ಸೂಚನೆಗಳನ್ನು ನೀಡಲು ಸಾಧ್ಯವಿಲ್ಲ. ಆದರೆ, ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಈ ಕುರಿತು ಪರಿಹಾರ ಪ್ರಕಟಿಸಲಿದೆ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ- ಜನಸಾಮಾನ್ಯರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, Loan Moratorium ಅವಧಿ ವಿಸ್ತರಣೆ
ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡಲಾಗಿದ್ದ EMI ಮರುಪಾವತಿಸುವುದರಿಂದ ವಿನಾಯಿತಿ 6 ತಿಂಗಳ ಅವಧಿಯಲ್ಲಿ ಸಾಲದ ಕಂತನ್ನು ಮರುಪಾವತಿಸದವರನ್ನು ಡೀಫಾಲ್ಟ್ ಆಗಿ ಇರಿಸಲಾಗಿಲ್ಲ. ಆದರೆ, ಬ್ಯಾಂಕುಗಳು ಈ 6 ತಿಂಗಳ ಬಡ್ಡಿಗೆ ಬಡ್ಡಿ ವಿಧಿಸುತ್ತಿದ್ದವು. ಆರ್‌ಬಿಐ ಮೊದಲು 27 ಮಾರ್ಚ್ 2020 ರಂದು ಸಾಲ ನಿಷೇಧವನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ, 2020 ರ ಮಾರ್ಚ್ 1 ರಿಂದ 2020 ಮೇ 31 ರವರೆಗೆ ಇಎಂಐ ಪಾವತಿಸುವುದರಿಂದ ಪರಿಹಾರವನ್ನು ನೀಡಲಾಗಿತ್ತು. ಆದರೆ, ನಂತರ ಇದನ್ನು ಆರ್‌ಬಿಐ 31 ಆಗಸ್ಟ್ 2020 ಕ್ಕೆ ಹೆಚ್ಚಿಸಿತ್ತು . ಸಾಲ ನಿಷೇಧವನ್ನು 6 ತಿಂಗಳಿಗಿಂತ ಹೆಚ್ಚು ಕಾಲ ವಿಸ್ತರಿಸುವುದರಿಂದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆರ್‌ಬಿಐ 2020 ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು.
ಇದನ್ನೂ ಓದಿ-ಬ್ಯಾಂಕ್ ಗೆ ಭೇಟಿ ನೀಡಿ ನೀವು ನಿಮ್ಮ EMI ಕಡಿತಗೊಳಿಸಬಹುದು, Cibil Score ಮೇಲೂ ಪರಿಣಾಮ ಇಲ್ಲ
ಸಂಪೂರ್ಣ ಪ್ರಕರಣ ಏನು?
ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಸಂಪೂರ್ಣ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿತ್ತು. ಈ ಕಾಲದಲ್ಲಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ವ್ಯಾಪಾರಿಗಳು ಹಾಗೂ ಕಂಪನಿಗಳಿಗೆ ಹಲವು ಸಮಸ್ಯೆಗಳು ಎದುರಾಗಿದ್ದವು. ಹಲವರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದರು. ಇಂತಹುದರಲ್ಲಿ ಅವರು ತೆಗೆದುಕೊಂಡ ಸಾಲದ EMI ಮರುಪಾವತಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಲೋನ್ ಮೊರಾಟೋರಿಯಂ ಸೌಕರ್ಯ ಒದಗಿಸಿತ್ತು. ಸರಳ ಭಾಷೆಯಲ್ಲಿ ಹೇಳುವುದಾದರೆ, ಸಾಲದ EMI ಪಾವತಿಯ ಅವಧಿಯನ್ನು ಮುಂದೂಡಿತ್ತು. ಆದರೆ, ಈ ಅವಧಿಯಲ್ಲಿನ ಬಡ್ಡಿ ಮಾತ್ರ ಸಾಲದ ಮೂಲ ಹಣಕ್ಕೆ ಸೇರ್ಪಡೆಯಾಗಲಿದೆ ಎಂದು ಸ್ಪಷ್ಟಪಡಿಸಲಾಗಿತ್ತು. ಈ ಬಡ್ಡಿಯ ಮೇಲಿನ ಬಡ್ಡಿಯ ಪ್ರಕರಣ ಇದೀಗ ಸುಪ್ರೀಂ ಮೆಟ್ಟಿಲೇರಿದೆ.
ಇದನ್ನೂ ಓದಿ- Home Loan: ನೀವು ಕೂಡ ಮನೆ ಖರೀದಿಸಲು ಯೋಚಿಸುತ್ತಿದ್ದರೆ ತಡ ಮಾಡದಿರಿ, ಕೊನೆಗೊಳ್ಳಲಿದೆ ಈ ಕೊಡುಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.