ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಯನ್ನು ವಹಿಸಿಕೊಳ್ಳಲು ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ, ಈ ಪ್ರಕರಣದ ಆರೋಪಿ ನಟಿ ರಿಯಾ ಚಕ್ರವರ್ತಿ ಅವರಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸುವ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ.


ಇದನ್ನು ಓದಿ: Sushant Singh Rajput ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್


COMMERCIAL BREAK
SCROLL TO CONTINUE READING

'ಬಿಹಾರ ಪೊಲೀಸರು ಮಾಡುತ್ತಿರುವುದು ಕಾನೂನುಬದ್ಧವಾಗಿ ಮತ್ತು ಸಾಂವಿಧಾನಿಕವಾಗಿ ಸರಿಯಾಗಿದೆ. ಸುಶಾಂತ್‌ಗೆ ನ್ಯಾಯ ದೊರಕಿಸಿಕೊಡುವ ಭರವಸೆ ಇಂದು ಇದ್ದರೆ, ಅದು ಬಿಹಾರ ಸಿಎಂ ಬೆಂಬಲದಿಂದಾಗಿ ”ಎಂದು ಅವರು ಹೇಳಿದರು.


ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ. ತನಿಖೆಗೆ ಸಹಕರಿಸುವಂತೆ ಮತ್ತು ಪ್ರಕರಣದಲ್ಲಿ ಈವರೆಗೆ ಸಂಗ್ರಹಿಸಿದ ಎಲ್ಲ ಸಾಕ್ಷ್ಯಗಳನ್ನು ತನಿಖಾ ಸಂಸ್ಥೆಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದೆ.ಸುಶಾಂತ್ ಅವರ ತಂದೆ ಕೆ ಕೆ ಸಿಂಗ್ ಅವರು ಪಾಟ್ನಾದಲ್ಲಿ ನೋಂದಾಯಿಸಿದ ಎಫ್ಐಆರ್ ಅನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.


ಇದನ್ನು ಓದಿ: Sushant Case: ಮೌನ ಮುರಿದ Rhea Chakraborty, ಆದಿತ್ಯ ಠಾಕ್ರೆ ಕುರಿತು ಹೇಳಿದ್ದೇನು?


ಪಾಟ್ನಾದಲ್ಲಿ ದಾಖಲಾದ ಎಫ್‌ಐಆರ್ ಅನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ಸುಪ್ರಿಂಕೋರ್ಟ್ ಮುಂದೆ ನೀಡಿದ ಹೇಳಿಕೆಯಲ್ಲಿ, ರಿಯಾ ಚಕ್ರವರ್ತಿ ಈ ಪ್ರಕರಣದಲ್ಲಿ ಬಿಹಾರ ಪೊಲೀಸರಿಗೆ ಯಾವುದೇ ನ್ಯಾಯವ್ಯಾಪ್ತಿ ಇಲ್ಲ ಎಂದು ಹೇಳಿದ್ದಾರೆ.'ಬಿಹಾರ ಸರ್ಕಾರದ ಪ್ರಸ್ತುತ ಕ್ರಮಗಳಿಂದ ಫೆಡರಲ್ ರಚನೆಯ ಅಡಿಪಾಯ ಅಪಾಯದಲ್ಲಿದೆ" ಎಂದು ಅವರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಾರಣ ಈ ಪ್ರಕರಣಕ್ಕೆ ರಾಜಕೀಯ ಸ್ಪಿನ್ ನೀಡಲಾಗುತ್ತಿದೆ ಎಂದು ರಿಯಾ ಹೇಳಿದ್ದಾರೆ.