ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ (Rhea Chakraborty) ಅವರ ಹೇಳಿಕೆಯನ್ನು ರಿಯಾ ಪರ ವಕೀಲರು ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯಲ್ಲಿ ರಿಯಾ ಚಕ್ರವರ್ತಿ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೆ, ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಅವರ ಹೆಸರಿನ ಬಗ್ಗೆಯೂ ಉಲ್ಲೇಖವಿದೆ.
ಹೇಳಿಕೆಯಲ್ಲಿ ರಿಯಾ ಚಕ್ರವರ್ತಿ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ತನಗೆ ಗೊತ್ತಿಲ್ಲ ಮತ್ತು ಇಲ್ಲಿಯವರೆಗೆ ಆದಿತ್ಯ ಠಾಕ್ರೆ ಅವರನ್ನು ತಾನು ಭೇಟಿ ಮಾಡಿಲ್ಲ ಎಂದುಹೇಳಿದ್ದಾರೆ. ಆದರೆ, ಡಿನೋ ಮೊರಿಯಾ ಚಿತ್ರೋದ್ಯಮದ ಹಿರಿಯ ನಟ ಆಗಿರುವ ಕಾರಣ ತಾವು ಅವರನ್ನು ಭೇಟಿಯಾಗಿರುವುದಾಗಿ ರಿಯಾ ಹೇಳಿದ್ದಾರೆ.
ರಿಯಾ ಪರ ವಕೀಲರು ಜಾರಿಗೊಳಿಸಿರುವ ಹೇಳಿಕೆಯಲ್ಲಿ, ರಿಯಾ ಚಕ್ರವರ್ತಿ ಮುಂಬೈ ಪೊಲೀಸರು ಹಾಗೂ ಇಡಿ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ರಿಯಾ ಚಕ್ರವರ್ತಿ ಬಿಹಾರ ಪೊಲೀಸರ ತನಿಖೆಯನ್ನು ಪ್ರಶ್ನಿಸಿದ್ದು, ತಾವು ಏಕೆ ಸುಪ್ರೀಂ ಕೋರ್ಟ್ ಮೊರೆಹೋಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ರಿಯಾ ಚಕ್ರವರ್ತಿ ಭಾರತೀಯ ಸೇನೆಯಲ್ಲಿ ಕಾರ್ಯನಿರತರಾಗಿದ್ದ ಸರ್ಜನ್ ಮಗಳಾಗಿದ್ದು, ಅವಳ ತಾಯಿ ಮಹಾರಾಷ್ಟ್ರದ ಗೃಹಿಣಿಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ರಿಯಾಳನ್ನು ಮಹಾರಾಷ್ಟ್ರದ ಮುಂಬೈ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯದ ಕೇಂದ್ರ ಸಂಸ್ಥೆ ಹಲವಾರು ಬಾರಿ ಕರೆಯಿಸಿ ವಿಧಾರಣೆ ನಡೆಸಿದ್ದು, ಪ್ರತಿ ಬಾರಿಯೂ ತನಿಖೆಯಲ್ಲಿ ಸಹಕರಿಸಲು ರಿಯಾ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ.
ರಿಯಾ ಮತ್ತು ಸುಶಾಂತ್ ನಡುವಿನ ಸಂಬಂಧದ ಬಗ್ಗೆ ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಮುಂಬೈ ಪೊಲೀಸರು ಮತ್ತು ಇಡಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಮತ್ತು ಇಡಿ ಎಲೆಕ್ಟ್ರಾನಿಕ್, ಫೊರೆನ್ಸಿಕ್ ಮತ್ತು ಡಿಎನ್ಎ ಮಾದರಿಗಳನ್ನು ಸಹ ತೆಗೆದುಕೊಂಡಿದ್ದಾರೆ. ಎರಡೂ ಏಜೆನ್ಸಿಗಳು ರಿಯಾ ಅವರ ಬ್ಯಾಂಕ್ ಸ್ಟೇಟ್ಮೆಂಟ್, ಐಟಿಆರ್ ಫೈಲ್, ಸಿಸಿಟಿವಿ ಫೂಟೇಜ್, ಕಾಲ್ ರೆಕಾರ್ಡ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಡೇಟಾವನ್ನು ಹೊಂದಿವೆ. ಆದರೆ ಇದುವರೆಗೂ ತಮ್ಮ ವಿರುದ್ಧ ಏನೂ ಕಂಡುಬಂದಿಲ್ಲ ಎಂದು ರಿಯಾ ಹೇಳಿದ್ದಾರೆ.