ನವದೆಹಲಿ: ಭಾರತೀಯ ಸರ್ಕಾರದ ವಿರುದ್ಧ ವಾಟ್ಸಾಪ್ ಮೊಕದ್ದಮೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರವು ನಾಗರಿಕರ ಗೌಪ್ಯತೆಯ ಹಕ್ಕನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದೆ, ಆದರೆ ಯಾವುದೇ ಮೂಲಭೂತ ಹಕ್ಕು ಸಂಪೂರ್ಣವಲ್ಲ, ಗೌಪ್ಯತೆಯ ಹಕ್ಕನ್ನು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ


ಬುಧವಾರ (ಮೇ 26) ಜಾರಿಗೆ ಬರುವ ಹೊಸದಾಗಿ ರೂಪಿಸಲಾದ ನಿಯಮಗಳನ್ನು ತಡೆಯಲು ಕೋರಿ ವಾಟ್ಸಾಪ್ (WhatsApp) ಭಾರತ ಸರ್ಕಾರದ ವಿರುದ್ಧ ಕಾನೂನು ದೂರು ದಾಖಲಿಸಿದೆ. ರಾಯಿಟರ್ಸ್ ವರದಿಯ ಪ್ರಕಾರ, ನಿಯಮಗಳು ಗೌಪ್ಯತೆ ರಕ್ಷಣೆಯನ್ನು ಮುರಿಯಲು ಕ್ಯಾಲಿಫೋರ್ನಿಯಾ ಮೂಲದ ಫೇಸ್‌ಬುಕ್ ಘಟಕವನ್ನು ಒತ್ತಾಯಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.


ಗೌಪ್ಯತೆ ವಿಚಾರಗಳ ಸುತ್ತ ಎದ್ದಿರುವ ವಿವಾದದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್, ಭಾರತ ಸರ್ಕಾರವು ತನ್ನ ಎಲ್ಲ ನಾಗರಿಕರಿಗೆ ಗೌಪ್ಯತೆಯ ಹಕ್ಕನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ. ಆದರೆ ಅದೇ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಯನ್ನು  ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಿದರು.


ಇದನ್ನು ಓದಿ- Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ


ಇದೇ ವೇಳೆ ವಾಟ್ಸಪ್ ವಿರುದ್ಧ ಕಿಡಿ ಕಾರಿರುವ ಐಟಿ ಸಚಿವಾಲಯವು, "ವಾಟ್ಸಾಪ್ ಗೌಪ್ಯತೆ ನೀತಿಯನ್ನು ಕಡ್ಡಾಯಗೊಳಿಸಲು ಪ್ರಯತ್ನಿಸುತ್ತದೆ, ಅದರಲ್ಲಿ ತನ್ನ ಎಲ್ಲ ಬಳಕೆದಾರರ ಡೇಟಾವನ್ನು ಮಾರ್ಕೆಟಿಂಗ್ ಮತ್ತು ಜಾಹೀರಾತು ಉದ್ದೇಶಗಳಿಗಾಗಿ ತನ್ನ ಮೂಲ ಕಂಪನಿಯಾದ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುತ್ತದೆ."ಎಂದು ಹೇಳಿದೆ.


"ಭಾರತದಲ್ಲಿ ನಡೆಯುತ್ತಿರುವ ಯಾವುದೇ ಕಾರ್ಯಾಚರಣೆಗಳು ಇಲ್ಲಿನ ಕಾನೂನಿನ ಅಡಿಗೆ ಒಳಪಟ್ಟಿರುತ್ತವೆ, ವಾಟ್ಸಾಪ್ ಮಾರ್ಗಸೂಚಿಗಳನ್ನು ಅನುಸರಿಸಲು ನಿರಾಕರಿಸುವುದು "ಒಂದು ಕ್ರಮವನ್ನು ಧಿಕ್ಕರಿಸುವ ಸ್ಪಷ್ಟ ಕ್ರಿಯೆಯಾಗಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.