Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ

Physical Safety Key: ಹ್ಯಾಕರ್‌ಗಳ ಕಾಟದಿಂದ ಪಾರಾಗಲು ಪ್ರಸ್ತುತ ಫೇಸ್‌ಬುಕ್ ಎರಡು-ಹಂತದ ಪರಿಶೀಲನೆ ಮತ್ತು ರಿಯಲ್ ಟೈಮ್ ಮೇಲ್ವಿಚಾರಣೆಯನ್ನು ಬಳಸುತ್ತಿದೆ, ಆದರೆ ಮುಂದಿನ ವರ್ಷದಿಂದ ಇದು 'ಭೌತಿಕ ಸುರಕ್ಷತಾ ಕೀಲಿಯನ್ನು' (Physical Saftey Key) ಸಹ ಬಳಸಲು ಮುಂದಾಗಿದೆ. ಇದು ಡೇಟಾ ಸುರಕ್ಷತೆಯನ್ನು ಹೆಚ್ಚು ಉತ್ತಮಗೊಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Written by - Nitin Tabib | Last Updated : Dec 30, 2020, 12:21 PM IST
  • ಈ ಭೌತಿಕ ಸುರಕ್ಷತಾ ಕೀಲಿಯನ್ನು ನೀವು ಖರೀದಿಸಬೇಕು
  • ಮುಂದಿನ ವರ್ಷದಿಂದ ಈ ಸೌಕರ್ಯ ಲಭ್ಯವಾಗಲಿದೆ.
  • ಇದುವರೆಗೆ ಕೇವಲ ಹೈ ಪ್ರೋವೈಲ್ ಖಾತೆಗಳಿಗೆ ಮಾತ್ರ ಈ ಸೌಕರ್ಯ ಒದಗಿಸಲಾಗುತ್ತಿತ್ತು.
Physical Safety Keyಯಿಂದ ನಿಮ್ಮ Facebook ಮಾಹಿತಿ ಇನ್ನಷ್ಟು ಸುರಕ್ಷಿತವಾಗಲಿದೆ title=
Physical Safety Key (File Image)

ವಾಷಿಂಗ್ಟನ್: Physical Safety Key: ಡೇಟಾ ಸುರಕ್ಷತೆಯನ್ನು ಮತ್ತಷ್ಟು ಸುಧಾರಿಸಲು ಮುಂದಾಗಿರುವ ಸಾಮಾಜಿಕ ಮಾಧ್ಯಮ ಕ್ಷೇತ್ರದ ದಿಗ್ಗಜ  ಕಂಪನಿ ಫೇಸ್‌ಬುಕ್ ಮುಂದಿನ ವರ್ಷದಿಂದ ವಿಶ್ವದಾದ್ಯಂತ ಬಳಕೆದಾರರಿಗೆ ಭೌತಿಕ ಭದ್ರತಾ ಕೀಗಳನ್ನು ಒದಗಿಸಲಿದೆ. ಹೆಚ್ಚುತ್ತಿರುವ ಹ್ಯಾಕಿಂಗ್ ಪ್ರಕರಣಗಳ ದೃಷ್ಟಿಯಿಂದ, ಈ ಹಂತವು ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ ಮತ್ತು ಇದರಿಂದ ಬಳಕೆದಾರರ ಡೇಟಾವನ್ನು ಉತ್ತಮವಾಗಿ ರಕ್ಷಿಸಲು ಸಾಧ್ಯವಾಗಲಿದೆ ಎಂದು ಫೇಸ್‌ಬುಕ್ ಹೇಳಿದೆ. ಆದರೆ ಬಳಕೆದಾರರು ಈ 'ಭೌತಿಕ ಕೀ' ಅಥವಾ ಟೋಕನ್ ಖರೀದಿಸಬೇಕಾಗಲಿದೆ ಎಂದು ಫೇಸ್‌ಬುಕ್‌ನ ಭದ್ರತಾ ನೀತಿಯ ಮುಖ್ಯಸ್ಥ ನಥಾನಿಯಲ್ ಗ್ಲೀಕರ್ ಹೇಳಿದ್ದಾರೆ. 

ಬಳಸುವ ಮುನ್ನ Register ಮಾಡಿಸಬೇಕು 
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ Facebook, ವಿವಿಧ ಚಿಲ್ಲರೆ ವ್ಯಾಪಾರಿಗಳು ಅಥವಾ ಆನ್ಲೈನ್ ನಲ್ಲಿ ಬಳಕೆದಾರರು ಈ ಕೀ ಅನ್ನು ಖರೀದಿಸಬಹುದು ಎಂದು ಹೇಳಿದೆ. ಬಳಿಕ ತಮ್ಮ ಫೇಸ್ ಬುಕ್ ನಲ್ಲಿ ಅವರು ತಮ್ಮ ಭೌತಿಕ ಕೀ ಯ ನೋಂದಣಿ ಮಾಡಿಸಬೇಕು. ಆಗ ಮಾತ್ರ ಅವರಿಗೆ ಈ ಕೀ ಬಳಸುವ ಅವಕಾಶ ಸಿಗಲಿದೆ.  ಪ್ರಮುಖ ವ್ಯಕ್ತಿಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹ್ಯಾಕರ್‌ಗಳು ಗುರಿಯಾಗಿಸುತ್ತಾರೆ ಎಂದು ಫೇಸ್‌ಬುಕ್ ಹೇಳಿದೆ. ನೀವು ಸೆಲೆಬ್ರಿಟಿಗಳಲ್ಲದಿದ್ದರೂ, ನಿಮ್ಮ ಡೇಟಾ ಯಾವಾಗಲೂ ಅಪಾಯದಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು 'ಭೌತಿಕ ಸುರಕ್ಷತಾ ಕೀ' ಪ್ರಸ್ತುತ ಪಡಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ಇದನ್ನು ಓದಿ-Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ

ಹ್ಯಾಕರ್ಸ್ ಗಳ ಒಳನುಸುಳುವಿಕೆಗೆ ಬೀಳಲಿದೆ ಬ್ರೇಕ್
ಹ್ಯಾಕರ್‌ಗಳ ಕಾಟದಿಂದ ಪಾರಾಗಲು ಪ್ರಸ್ತುತ ಫೇಸ್‌ಬುಕ್ ಎರಡು-ಹಂತದ ಪರಿಶೀಲನೆ ಮತ್ತು ರಿಯಲ್ ಟೈಮ್ ಮೇಲ್ವಿಚಾರಣೆಯನ್ನು ಬಳಸುತ್ತಿದೆ, ಆದರೆ ಮುಂದಿನ ವರ್ಷದಿಂದ ಇದು 'ಭೌತಿಕ ಸುರಕ್ಷತಾ ಕೀಲಿಯನ್ನು' (Physical Saftey Key) ಸಹ ಬಳಸಲಿದೆ. ಬಳಕೆದಾರರು ಈ ಕೀಲಿಯನ್ನು ಬಳಸಿ ತಮ್ಮ ಖಾತೆಗೆ ಹ್ಯಾಕರ್ ಗಳ ಒಳನುಸುಳುವಿಕೆಯನ್ನು ತಡೆಯಬಹುದು ಎಂದು ಫೇಸ್ ಬುಕ್ ಹೇಳಿದೆ. ಹ್ಯಾಕರ್ ಗಳು ಒಂದು ವೇಳೆ ಪಾಸ್ವರ್ ಕ್ರ್ಯಾಕ್ ಮಾಡಿದರೂ ಕೂಡ ಅವರಿಗೆ ಒಳನುಸುಳುವಿಕೆ ಸುಲಭದ ಮಾತಲ್ಲ ಎಂದು ಫೇಸ್ ಬುಕ್ ಹೇಳಿದೆ. ಇದುವರೆಗೆ ಅಮೆರಿಕದ ನಾಯಕರು, ಸರ್ಕಾರಿ ಸಂಸ್ಥೆಗಳಂತಹ ಉನ್ನತ ಮಟ್ಟದ ಖಾತೆಗಳಿಗೆ ಫೇಸ್‌ಬುಕ್ ಇಂತಹ ರಕ್ಷಣೆ ನೀಡುತ್ತಿದೆ. ಇದೀಗ ಮುಂದಿನ ವರ್ಷದಿಂದ, ವಿಶ್ವದ ಸಾಮಾನ್ಯ ಬಳಕೆದಾರರು ಲಾಗಿನ್ ಮಾಡುವ ಮೊದಲು ಗುರುತಿನ ಪರಿಶೀಲನೆಗಾಗಿ 'ಭೌತಿಕ ಸುರಕ್ಷತಾ ಕೀ' ಅನ್ನು ಬಳಸಲು ಸಾಧ್ಯವಾಗಲಿದೆ.

ಇದನ್ನು ಓದಿ- Facebook Launched New Collab App: ನಿಮ್ಮಲ್ಲಿರುವ Music Talent ತೋರಿಸಲು ಬಂತು Facebook ನ ಹೊಸ ಆಪ್

ಬೆಲೆ ಮಾಹಿತಿ ಲಭ್ಯವಾಗಿಲ್ಲ
'ಭೌತಿಕ ಸುರಕ್ಷತಾ ಕೀ' ಪೆನ್ ಡ್ರೈವ್‌ನಂತೆ ಇರಲಿದ್ದು, ಅದನ್ನು ಯುಎಸ್‌ಬಿ ಪೋರ್ಟ್ಗೆ ಪ್ಲಗ್ ಮಾಡಬೇಕಾಗುತ್ತದೆ ಎಂದು ಕಂಪನಿ ಹೇಳಿದೆ. ಗೂಗಲ್ ಮೊದಲ ಬಾರಿಗೆ 'ಯುಎಸ್‌ಬಿ ಸೆಕ್ಯುರಿಟಿ ಕೀ' ಅನ್ನು 2014 ರಲ್ಲಿ ಪರಿಚಯಿಸಿತ್ತು. ಇದೀಗ  ಫೇಸ್‌ಬುಕ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಕಂಪನಿಯು 'ಭೌತಿಕ ಸುರಕ್ಷತಾ ಕೀ'ಯ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಈ ಕುರಿತು ಫೇಸ್‌ಬುಕ್ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದೇ ವರ್ತಿಸಲಾಗುತ್ತಿದೆ.

ಇದನ್ನು ಓದಿ-Instagram Reels New Feature: Reels ನಲ್ಲಿ ಬಹುನಿರೀಕ್ಷಿತ ವೈಶಿಷ್ಟ್ಯ ಪರಿಚಯಿಸಿದ Instagram

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News