ಬೆಂಗಳೂರು : ಪ್ರವೀಣ್ ನೆಟ್ಟಾರು ಕೊಲೆಯ ಹಂತಕರೂ ಕೂಡ ಈ ಬಿ ಟೀಂನಲ್ಲಿ ಭಾಗಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಆಡಳಿತ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು. ಆರ್ಟಿಕಲ್ 370 ರದ್ದು , ಹಿಜಾಬ್ ,ಹಲಾಲ್ ಕಟ್ , ಯುಪಿಯಲ್ಲಿ ಉಗ್ರರ ಮನೆ ಧ್ವಂಸ,ಎಡ ಪಂಥೀಯ ಯೂ ಟ್ಯೂಬ್ ಚಾನಲ್ ಗಳು ಬ್ಯಾನ್ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು.ಮುಸಲ್ಮಾನರನ್ನ ಹತ್ತಿಕ್ಕುವ ಉದ್ದೇಶದಿಂದ ಬಲಪಂಥೀಯ ಸರ್ಕಾರಗಳು ರಚನೆಯಾಗುತ್ತಿವೆ.
 
ಬಲಪಂಥೀಯ ಸರ್ಕಾರ ಮತ್ತೆ ಬಂದರೆ ಇಸ್ಲಾಂಗೆ ಸಂಕಷ್ಟವಾಗುವ ಹಿನ್ನೆಲೆ ಮುಸ್ಲೀಮೇತರರು ರನ್ನು ಹತ್ತಿಕ್ಕುವ ಪ್ಲ್ಯಾನ್ ರೂಪಿಸಿದ್ದರು. ಹೀಗಾಗಿ ಧರ್ಮಯುದ್ಧದ ಹೆಸರಿನಲ್ಲಿ ಸಮರ ನಡೆಸಬೇಕಿದೆ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ  ಪ್ರವೀಣ್ ನೆಟ್ಟಾರೂ ಹಂತಕರು‌ ಪೋಸ್ಟ್  ವೈರಲ್ ಮಾಡಿದ್ದರು. ತಾವು ಮಾಡಿರುವ ಹತ್ಯೆ, ಹತ್ಯಾ ಯತ್ನ ಕೃತ್ಯಗಳನ್ನ ಧರ್ಮ ಯುದ್ಧಕ್ಕೆ ಹೋಲಿಸಿ ಸಮರ್ಥನೆ ಸಹ ಮಾಡಿಕೊಂಡಿದ್ದರು. ಮತ್ತಷ್ಟು ಯುವಕರು ಈ ಧರ್ಮ ಯುದ್ಧಕ್ಕೆ ಬಂದು ಕಾಫೀರರನ್ನು ಕೊಲ್ಲಬೇಕು ಎಂದು ಪ್ರಚೋದನೆ ನೀಡುತ್ತಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ತ್ರಿಪುರಾದಲ್ಲಿ ಸಸ್ಪೆನ್ಸ್ ಅಂತ್ಯ! ಮಾಣಿಕ್ ಸಹಾ ಹೊಸ ಸಿಎಂ, ಪ್ರಮಾಣ ವಚನಕ್ಕೆ ಪ್ರಧಾನಿ ಮೋದಿ 


 ಇಷ್ಟಲ್ಲದೆ ಹಿಂದೂ ಮುಖಂಡರ ಹತ್ಯೆ ನಡೆಸುವ ಮೂಲಕ ಪ್ರಜೆಗಳಲ್ಲಿ ಭಯತರಿಸಿ ಬಲಪಂಥೀಯ ಸರ್ಕಾರಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮೆಸೇಜ್ ರವಾನಿಸಬೇಕು ಎಂದು ನಿರ್ಧರಿಸಿದ್ದರು.ಸದ್ಯ ಸಿಕ್ಕಿಬಿದ್ದಿರುವ ತುಫೈಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಮಾಡಿರುವುದು ಬೆಳಕಿಗೆ ಬಂದಿದ್ದು, ಈತನ ದೇಶದ್ರೋಹಕ್ಕೆ ಸಂಬಂಧಿಸಿದಂತೆ ಹಲವು ಪೋಸ್ಟ್ ಗಳು ವೈರಲ್ ಆಗಿದ್ದವು. 


ಈಗಾಗಲೇ ಮಂಗಳೂರು ಕುಕ್ಕರ್ ಬಾಂಬ್ ಸ್ಟೋಟದ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತಿದೆ. ಸದ್ಯ ಪ್ರವೀಣ್ ನೆಟ್ಟಾರೂ ಹತ್ಯೆ ಆರೋಪಿಗಳಿಗೂ ಕೂಡ ಐಸಿಸ್ ,ಆಲ್ ಖೈದಾ ಸಂಘಟನೆಯ ಜೊತೆ ನಂಟಿರುವ ಅನುಮಾನ ಶುರುವಾಗಿದೆ. ಸದ್ಯ ಧರ್ಮ ಯುದ್ಧದ ಹೆಸರಲ್ಲಿ ಯುವಕರಿಗೆ ಪ್ರಚೋದನೆ ನೀಡಿ‌ ಉಗ್ರ ಸಂಘಟನೆಯನ್ನ ಬಲಪಡಿಸಲು ಕ್ರಿಮಿನಲ್ ಗಳು ಮುಂದಾಗಿದ್ದರು‌ ಎಂಬ ಮಾಹಿತಿ‌ ಇದೆ. ಇನ್ನೂ ತುಫೈಲ್ ಬಂಧನದ ಬಳಿಕ ಎನ್ ಐಎ ಅಧಿಕಾರಿಗಳು ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದು, ತನಿಖೆ ಮುಂದುವರೆಸಿದ್ದಾರೆ.


ಇದನ್ನೂ ಓದಿ-Viral Video: ಅಯ್ಯೋ ದುರ್ವಿಧಿಯೇ…! ಮಿತಿಮೀರಿದ ಡಿಜೆ ಸೌಂಡ್’ಗೆ ಎದೆಒಡೆದು ಮಂಟಪದಲ್ಲಿಯೇ ಪ್ರಾಣಬಿಟ್ಟ ವರ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.