ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ತನ್ನ ಮಹತ್ವಾಕಾಂಕ್ಷಿ RISAT-2BR1 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಭಾರತದ ಎರಡನೇ ಬೇಹುಗಾರಿಕಾ ಕಣ್ಣಾಗಿ ಕಣ್ಗಾವಲು ಇಡಲಿದೆ. ಇಂದು ಮಧ್ಯಾಹ್ನ 3 ಗಂಟೆ 25ನಿಮಿಷಕ್ಕೆ PSLV C-48 ರಾಕೆಟ್ ಮುಖಾಂತರ ಈ ಉಪಗ್ರಹವನ್ನು ಲಾಂಚ್ ಮಾಡಲಾಗಿದೆ. ಈ ವೇಳೆ ಇಸ್ರೋ PSLV ಮೂಲಕ ಒಟ್ಟು ಹತ್ತು ಉಪಗ್ರಹಗಳನ್ನು ಆಗಸಕ್ಕೆ ಲಾಂಚ್ ಮಾಡಿರುವುದು ಇಲ್ಲಿ ಗಮನಾರ್ಹ. ಇವುಗಳಲ್ಲಿ ದೇಶದ ಎರಡನೇ ಬೇಹುಗಾರಿಕಾ ಕಣ್ಣು ಎಂದೇ ಹೇಳಲಾಗುವ ರೇಡಾರ್ ಇಮೇಜಿಂಗ್ ಅರ್ಥ ಒಬ್ಸೆರ್ವೆಶನ್ ಸೆಟ್ಲೈಟ್ RISAT-2BR1 ಕೂಡ ಶಾಮೀಲಾಗಿದೆ.



COMMERCIAL BREAK
SCROLL TO CONTINUE READING

ಇಸ್ರೋ ನೀಡಿರುವ ಹೇಳಿಕೆ ಪ್ರಕಾರ ಈ ಉಪಗ್ರಹವನ್ನು ಆಗಸದಲ್ಲಿ ಸುಮಾರು 576 ಕಿಲೋಮೀಟರ್ ಎತ್ತರದಲ್ಲಿರುವ ಕಕ್ಷೆಯಲ್ಲಿ 37 ಡಿಗ್ರೀ ಕೋನದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಉಪಗ್ರಹವನ್ನು ಸ್ಥಾಪನೆಯ ಬಳಿಕ ದೇಶದ ಗಡಿಭಾಗದಲ್ಲಿ ಒಳನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಬಹುದಾಗಿದೆ ಎನ್ನಲಾಗಿದೆ.


ಏನಿದೆ RISAT-2BR1 ವಿಶೇಷತೆ?
RISAT-2BR1 ನಲ್ಲಿ ಅಳವಡಿಸಲಾಗಿರುವ ವಿಶೇಷ ಸೆನ್ಸಾರ್ ನಿಂದ ಗಡಿಭಾಗದಲ್ಲಿ ಭಯೋತ್ಪಾದಕರ ಜಮಾವಣೆಯ ಸೂಚನೆ ಮುಂಚಿತವಾಗಿದೆ ಸಿಗಲಿದೆ. ಮೇ.22 ರಂದು ಲಾಂಚ್ ಮಾಡಲಾಗಿರುವ RISAT-2B ಈಗಾಗಲೇ ಭಾರತೀಯ ಬೇಹುಗಾರಿಕೆಯ ಮೊದಲ ಕಣ್ಣಾಗಿ ಕಣ್ಗಾವಲು ನಡೆಸುತ್ತಿದೆ. ಈ ಉಪಗ್ರಹವನ್ನು ಹೊರತುಪಡಿಸಿದರೆ PSLV ನಿಂದ ಉಡಾವಣೆಗೊಂಡ ಇತರೆ 9 ಉಪಗ್ರಹಗಳು ವಿದೇಶಿ ಉಪಗ್ರಹಗಳಾಗಿವೆ. ಇವುಗಳಲ್ಲಿ ಅಮೇರಕದ 6, ಇಸ್ರೇಲ್ ನ 1 ಹಾಗೂ ಜಪಾನ್ ನ 1 ಉಪಗ್ರಹ ಶಾಮೀಲಾಗಿದೆ.