Lalu Prasad Yadav On Rahul Gandhi Marriage: ಪಾಟ್ನಾದಲ್ಲಿ ನಡೆದ ಪ್ರತಿಪಕ್ಷ ಮುಖಂಡರುಗಳ ಸಭೆ ಅಂತ್ಯವಾಗಿದೆ.  ಇದರಲ್ಲಿ 15ಕ್ಕೂ ಹೆಚ್ಚು ಪಕ್ಷಗಳ 30 ಮುಖಂಡರು ಭಾಗವಹಿಸಿದ್ದರು. ಪ್ರತಿ ರಾಜ್ಯದಲ್ಲೂ ವಿರೋಧ ಪಕ್ಷದ ನಾಯಕರು ಬೇರೆ ಬೇರೆ ಕೆಲಸ ಮಾಡಬೇಕು ಎಂದು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಸಭೆಯ ಎರಡನೇ ಸುತ್ತು ಜುಲೈ 10-12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಆದರೆ ರಾಷ್ಟ್ರೀಯ ವಿಚಾರಗಳ ಚರ್ಚೆಯ ನಡುವೆಯೇ ಈ ಸಭೆಯಲ್ಲೂ ನಗು, ಹಾಸ್ಯ ಚಟಾಕಿ ಹಾರಿವೆ. ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಶುಕ್ರವಾರ ತಮ್ಮ ಚಿರಪರಿಚಿತ ಶೈಲಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ತಮಾಷೆಯ ಮಾತುಗಳನ್ನು ಆಡಿದ್ದಾರೆ. ನೀವು ವಿವಾಹವಾಗಿ,  ನಾವು ಮದುವೆಯ ಮೆರವಣಿಗೆಗೆ ಬರುತ್ತೇವೆ ಎಂದು ರಾಹುಲ್‌ಗೆ ಲಾಲು ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Mohan Bhagwat: ಎಲ್ಲಿಯವರೆಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆ ಇದೆಯೋ ಅಲ್ಲಿಯವರೆಗೆ....!


ರಾಹುಲ್ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ ಲಾಲೂ
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೀವು ಹೇಳಿದ ಮೇಲೆ (ಮದುವೆ) ಆಗುತ್ತೇನೆ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ಸಭೆಯ ಬಳಿಕ, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಲಾಲು, ರಾಹುಲ್ ಅವರ  ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿ ಅವರ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.  ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅದಾನಿ ವಿಷಯ ಪ್ರಸ್ತಾಪಿಸಿದ್ದನ್ನು ಉಲ್ಲೇಖಿಸಿದ ಪ್ರಸಾದ್, ಲೋಕಸಭೆಯಲ್ಲಿ ಉತ್ತಮ ಕೆಲಸ ಮಾಡಿದ್ದೀರಿ ಎಂದಿದ್ದಾರೆ.


ಇದನ್ನೂ ಓದಿ-Lok Sabha Elections 2024: ಪಟ್ನಾದಲ್ಲಿ ವಿರೋಧ ಪಕ್ಷಗಳ ಮಹಾ ಮಂಥನ! ಏನಿರಲಿದೆ ಏಜೆಂಡಾ? ಯಾವ ವಿಷಯಗಳ ಮೇಲೆ ಚರ್ಚೆ?


'ಗಡ್ಡ ಬೆಳೆಸಬೇಡಿ'
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಗಡ್ಡದ ಕಡೆಗೆ ಸಂಕೇತಿಸುತ್ತಾ, ಮಾತನಾಡಿದ ಲಾಲೂ, ನೀವು ಸುತ್ತಾಡಲು ಆರಂಭಿಸಿದಾಗ ಗಡ್ಡ ಬೆಳೆಸಿದಿರಿ, ಅದನ್ನು ತೀರಾ ಕೆಳಕ್ಕೆ ಕೊಂಡೊಯ್ಯಬೇಡಿ ಎಂದಿದ್ದಾರೆ. ಇದಕ್ಕೂ ಮುಂದುವರೆದು ಮಾತನಾಡಿದ ಬಿಹಾರ ಮಾಜಿ ಮುಖ್ಯಮಂತ್ರಿ,  'ನೀವು ನಮ್ಮ ಸಲಹೆ ಕೇಳಲಿಲ್ಲ, ವಿವಾಹವಾಗಲಿಲ್ಲ. ಇನ್ನೂ ಸಮಯ ಮೀರಿಲ್ಲ. ನೀವು ವಿವಾಹವಾಗಿ, ನಾವು ಮೆರವಣಿಗೆಯಲ್ಲಿ ಶಾಮೀಲಾಗುತ್ತೇವೆ' ಎಂದಿದ್ದಾರೆ. 'ನಮ್ಮ ಮಾತು ಕೇಳುವುದಿಲ್ಲ ನೀವೇ ಅವನ ವಿವಾಹ ಮಾಡಿಸಿ ಎಂದು ನಿಮ್ಮ ಮಮ್ಮಿ (ಸೋನಿಯಾ ಗಾಂಧಿ) ಹೇಳುತ್ತಾರೆ. ವಿವಾಹ ಮಾಡಿಕೊಳ್ಳಿ. ಲಾಲೂ ಅವರ ಈ ಹಾಸ್ಯ ಶೈಲಿಯನ್ನು ಕಂಡು ಅಲ್ಲಿ ನೆರದವರೆಲ್ಲರೂ ಹಾಸ್ಯ ಕಡಲಲ್ಲಿ ತೇಲಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.