ಅಪ್ರಾಪ್ತ ಬಾಲಕಿ ಅತ್ಯಾಚಾರ: ಶಾಸಕ ರಾಜಬಲ್ಲಭ ಯಾದವ್ ಅಪರಾಧಿ ಎಂದು ಸಾಬೀತು
ಪಾಟ್ನಾ ನ್ಯಾಯಾಲಯವು ಶನಿವಾರದಂದು ಆರ್ಜೆಡಿ ಪಕ್ಷದ ನವಾಡಾ ಶಾಸಕ ರಾಜಬಲ್ಲಭ ಯಾದವ್ ಅವರನ್ನು ಫೆಬ್ರವರಿ 2016ರಲ್ಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ಘೋಷಿಸಿದೆ .ಈಗ ಡಿಸೆಂಬರ್ 21 ರಂದು ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ
ನವದೆಹಲಿ: ಪಾಟ್ನಾ ನ್ಯಾಯಾಲಯವು ಶನಿವಾರದಂದು ಆರ್ಜೆಡಿ ಪಕ್ಷದ ನವಾಡಾ ಶಾಸಕ ರಾಜಬಲ್ಲಭ ಯಾದವ್ ಅವರನ್ನು ಫೆಬ್ರವರಿ 2016ರಲ್ಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ಘೋಷಿಸಿದೆ .ಈಗ ಡಿಸೆಂಬರ್ 21 ರಂದು ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ
ಎಂಪಿ-ಎಂಎಲ್ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಪರಶುರಾಮ ಯಾದವ್ ಅವರು ಶಾಸಕ ಮತ್ತು ಇತರ ಐವರನ್ನು ನಳಂದಾದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ವಿಚಾರವಾಗಿ ಈಗ ಅಪರಾಧಿ ಎಂದು ಘೋಷಿಸಿದೆ. ಇದೆ ಡಿಸೆಂಬರ್ 4 ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
ಈ ವಿಚಾರಣೆ ವೇಳೆ ಒಟ್ಟು 22 ಸಾಕ್ಷಿದಾರರು ಹಾಜರಿದ್ದರು ಎಂದು ತಿಳಿದುಬಂದಿದೆ.2016 ರ ಫೆಬ್ರುವರಿ 9 ರಂದು ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಕ್ಷದಿಂದ ಅಮಾನತುಗೊಂಡಿರುವ ಯಾದವ್ ಅವರನ್ನು ಜೈಲಿನಲ್ಲಿರಿಸಲಾಗಿತ್ತು