ಚಂಡಿಗಡ್: Road Pulse - ರಸ್ತೆ ಅಪಘಾತಗಳನ್ನು ನಿಗ್ರಹಿಸುವತ್ತ ಹೆಜ್ಜೆ ಇಟ್ಟ ಚಂಡಿಗಡ್ (Chandigarh) ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಅದ್ಭುತ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದಾನೆ. ಈ ಸಾಫ್ಟ್‌ವೇರ್ ಅನ್ನು ಕಾರಿನಲ್ಲಿ ಅಳವಡಿಸುವ ಸಾಫ್ಟ್ ವೇರ್ ಆಗಿದ್ದು, ಚಾಲಕ ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ಮತ್ತು ಕುಡಿದಿದ್ದರೆ ಅದು ತಕ್ಷಣ ಸಕ್ರೀಯಗೊಳ್ಳಲಿದೆ. ಇದರಿಂದಾಗಿ ವಾಹನ ಸ್ಟಾರ್ಟ್ ಆಗುವುದಿಲ್ಲ.  ಇದಲ್ಲದೆ, ಈ ಸಾಫ್ಟ್‌ವೇರ್‌ನಲ್ಲಿ ಇಂತಹ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಇದು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಹಾಯ ಮಾಡಲಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಮದ್ಯ ಸೇವಿಸಿ ವಾಹನ ಚಲಾಯಿಸುವಂತಿಲ್ಲ
ಈ ಸಾಫ್ಟ್‌ವೇರ್‌ನ ವಿಶೇಷತೆ ಎಂದರೆ,  ಜನರು ಮದ್ಯ ಸೇವಿಸಿದ ನಂತರ ವಾಹನ ಚಲಾಯಿಸಲು ಸಾಧ್ಯವಾಗುವುದಿಲ್ಲ. ಈ ಅಪ್ಲಿಕೇಶನ್‌ನಲ್ಲಿ ಒಂದು ವೈಶಿಷ್ಟ್ಯವನ್ನು ನೀಡಲಾಗಿದೆ, ಅದು ಕಾರಿನಲ್ಲಿ ಕುಳಿತ ತಕ್ಷಣ, ಡ್ರೈವರ್ ಎಷ್ಟು ಆಲ್ಕೊಹಾಲ್ ಎಷ್ಟು ಮದ್ಯ ಸೇವನೆ ಮಾಡಿದ್ದಾನೆ ಎಂಬುದು ತಿಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಆತನಲ್ಲಿ ಆಲ್ಕೋಹಾಲ್ ಪ್ರಮಾಣ ನಿಗದಿತ ಮಾನದಂಡದ ಶೇ. 0.08 ರಷ್ಟು ಮೀರಿದ್ದರೆ, ಆಗ ಕಾರಿನ ಎಂಜಿನ್ ಸ್ಟಾರ್ಟ್ ಆಗುವುದಿಲ್ಲ.  ಡ್ರೈವರ್ ತನ್ನ ಸೀಟಿನ ಮೇಲೆ ಕುಳಿತು ಸ್ಟೀಯರಿಂಗ್ ಸ್ಪರ್ಶಿಸುತ್ತಿದ್ದಂತೆ, ಅದರಲ್ಲಿರುವ ಸೆನ್ಸರ್ ಮಾಧ್ಯಮದ ಮೂಲಕ ಆತ ಎಷ್ಟು ಮದ್ಯ ಸೇವಿಸಿದ್ದಾನೆ ಎಂಬುದು ತಿಳಿಯಲಿದೆ.


ಇದರಿಂದ ಕಾರ್ ಆಕ್ಸಿಡೆಂಟ್ ತಡೆಯಬಹುದು
ನಮ್ಮ ಅಂಗ ವೆಬ್ ತಾಣ ಝೀ ಬಿಸಿನೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಚಂಡಿಗಡ್ ವಿಶ್ವವಿದ್ಯಾಲಯದಲ್ಲಿ (Chandigarh University) ಬಿ.ಟೆಕ್ (B.Tech) ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುವ ಮೋಹಿತ್ (Mohit) ಹೆಸರಿನ ವಿದ್ಯಾರ್ಥಿ ಈ ಸಾಫ್ಟ್ ವೆಯರ್ ಅಭಿವೃದ್ಧಿಗೊಳಿಸಿದ್ದಾನೆ. ಮೋಹಿತ್ ತನ್ನೀ ಸಾಫ್ಟ್ ವೆಯರ್ ಗೆ Road Pulse ಎಂಬ ಹೆಸರನ್ನಿಟ್ಟಿದ್ದಾನೆ. ಈ ಸಾಫ್ಟ್ ವೇರ್ ಬಳಸುವುದರಿಂದ ಅಪಘಾತವೇ ಆಗುವುದಿಲ್ಲ ಎಂಬುದು ಮೋಹಿತ್ ಅಭಿಪ್ರಾಯ. 2025ರ ಬಳಿಕ ದೇಶ ಮತ್ತು ವಿಶ್ವಾದ್ಯಂತ ಕೃತಕ ಬುದ್ಧಿಮತ್ತೆಯ (Artificial Intelligence) ಹಾಗೂ ಯಾಂತ್ರಿಕ ಕಲಿಕೆ (Machine Learning) ಆಧಾರದ ಮೇಲೆಯೇ ಎಲ್ಲ ಕೆಲಸಗಳು ನಡೆಯಲಿವೆ ಎನ್ನುತ್ತಾರೆ ಮೋಹಿತ್. ಅದನ್ನೇ ಗಮನದಲ್ಲಿಟ್ಟುಕೊಂಡು ಈ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ. ಒಂದು ವೇಳೆ ಈ ಸಾಫ್ಟ್ ವೆಯರ್ ವಾಹನದಲ್ಲಿ ಅಳವಡಿಸಿದರೆ ವಾಹನ ಎಂದಿಗೂ ಕೂಡ ಅಪಘಾತಕ್ಕೆ ಒಳಗಾಗುವುದಿಲ್ಲ. ಒಂದು ವೇಳೆ ಡ್ರೈವರ್ ಬಯಸಿ ಆಕ್ಸಿಡೆಂಟ್ ಮಾಡಲು ಮುಂದಾದರೂ ಕೂಡ ಆಕ್ಸಿಡೆಂಟ್ ಆಗುವುದಿಲ್ಲ.


ಈ ರೀತಿ ಕಾರ್ಯನಿರ್ವಹಿಸುತ್ತದೆ ಈ ಸಾಫ್ಟ್ ವೇರ್
ಪ್ರಸ್ತುತ ವಾಹನಗಳಲ್ಲಿ ಚಾಲಕ ಸೀಟ್ ಬೆಲ್ಟ್  ಧರಿಸದೆ ಹೋದರೆ ಬೀಪ್ ಸದ್ದು ಕೇಳಿಸುತ್ತದೆ. ಆದರೆ, ಈ ಸಾಫ್ಟ್ ವೇರ್ ಅಳವಡಿಸಿದರೆ, ವಾಹನ ಸ್ಟಾರ್ಟ್ ಆಗುವುದಿಲ್ಲ. ವಾಹನ ಚಾಲಕ ಅಲ್ಕೋಹಾಲ್ ಸೇವಿಸಿ (Alcohol Consumption) ಸೀಟ್ ನಲ್ಲಿ ಕುಳಿತು ಉಸಿರಾಡಲು ಪ್ರಾರಂಭಿಸಿದರೆ, ಆತನು ಹೊರಸೂಸುವ ಕಾರ್ಬನ್ ಡೈಆಕ್ಸೈಡ್  ಅಣುಗಳು ಸಾಫ್ಟ್ ವೇರ್ ನ ಆಟೋ ಮೀಟರ್ ಗೆ ಹೋಗಿ ಡಿಕ್ಕಿಹೊಡೆಯಲಿವೆ ಹಾಗೂ ಈ ಇಂಟ್ರಾಡೇ ಸೆನ್ಸರ್ ಆ ವ್ಯಕ್ತಿಯಲ್ಲಿನ ಆಲ್ಕೋಹಾಲ್ ಪ್ರಮಾಣ ಸರ್ಕಾರಿ ಮಾನದಂಡಗಳಿಗಿಂತ ಎಷ್ಟು ಹೆಚ್ಚಾಗಿದೆ ಅಥವಾ ಇಲ್ಲ ಎಂಬುದನ್ನು ಪತ್ತೆಹಚ್ಚಲಿದೆ.


ಇದನ್ನೂ ಓದಿ- Covid-19 Vaccine: 'ಭಾರತದಲ್ಲಿ ಮಕ್ಕಳಿಗೂ ಕೂಡ Pfizer Corona Vaccine ಹಾಕಲಾಗುವುದು'


ತನ್ನಷ್ಟಕ್ಕೆ ತಾನೆ ಇಂಡಿಕೆಟರ್ ಗಳು ಕಾರ್ಯನಿರ್ವಹಿಸಲಿವೆ
ಅಷ್ಟೇ ಅಲ್ಲ, ರಸ್ತೆ ಮೇಲೆ ವಾಹನ ಓಡಿಸುವಾಗಲು ಕೂಡ ಜನರು ಸಾಮಾನ್ಯವಾಗಿ ಯೂ ಟರ್ನ್ ಅಥವಾ ಎಡ-ಬಲ ಇಂಡಿಕೆಟರ್ ಗಳನ್ನು ಬಳಸುವುದಿಲ್ಲ. ಇದರಿಂದ ವಾಹನಗಳು ಪರಸ್ಪರ ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ ಮತ್ತು ಇದೆ ಕಾರಣದಿಂದ ಹಲವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಇದನ್ನು ತಡೆಗಟ್ಟಲು ಮೋಹಿತ್ ತನ್ನ ಸಾಫ್ಟ್ ವೇರ್ ನಲ್ಲಿ ವೈಶಿಷ್ಟ್ಯವೊಂದನ್ನು ಜೋಡಿಸಿದ್ದು, ವಾಹನ 50 ಮೀಟರ್ ದೂರವಿರುವಾಗಲೇ ವಾಹನದ ಇಂಡಿಕೆಟರ್ ಆರಂಭವಾಗಲಿದೆ. ಇದರಲ್ಲಿ ಗೂಗಲ್ ಮ್ಯಾಪ್ ಅನ್ನು ಮಶೀನ್ ಲರ್ನಿಂಗ್ ಜೊತೆಗೆ ಜೋಡಿಸಲಾಗಿದೆ.


ಇದನ್ನೂ ಓದಿ- CSIR ಸಭೆಯಲ್ಲಿ PM Modi ನೀಡಿದ ಮುನ್ಸೂಚನೆಯ ಎಚ್ಚರಿಕೆ ಏನು?


ಮಂಜಿನ ವಾತಾವರಣದಲ್ಲಿಯೂ ಕೂಡ ಇದು ಅಪಘಾತಗಳನ್ನು ತಡೆಯಲಿದೆ 
ಚಳಿಗಾಲದ ದಿನಗಳಲ್ಲಿ ಸಾಮಾನ್ಯವಾಗಿ ಮಂಜು ಬೀಳುತ್ತದೆ. ಈ ಮಂಜು ಡ್ರೈವರ್ ವಿಸಿಬಿಲಿಟಿ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಹಲವು ಬಾರಿ ಇದು ಅಪಘಾತಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ದೂರಗೊಳಿಸಬಹುದು ಎಂಬುದು ಮೋಹಿತ್ ಅಭಿಪ್ರಾಯ. ಇದಕ್ಕಾಗಿ ಮೋಹಿತ್ ಒಂದು ಡಿವೈಸ್ (Special Device) ಅನ್ನು ಕೂಡ ಅಭಿವೃದ್ಧಿಗೊಳಿಸಿದ್ದು, ಇದನ್ನು ಕಾರಿನ ಮುಂಭಾಗದಲ್ಲಿ ಅಳವಡಿಸಬೇಕು. ಇದರಿಂದ ವಾಹನದ ಮುಂದೆ 50 ಮೀಟರ್ ದೂರದವರೆಗೆ ಏನಿದೆ ಎಂಬುದು ಡ್ರೈವರ್ ಗೆ ಗೊತ್ತಾಗಲಿದ್ದು, ಚಾಲಕ ತನ್ನ ವಾಹನವನ್ನು ನಿಯಂತ್ರಣಕ್ಕೆ ತರಬಹುದು.


ಇದನ್ನೂ ಓದಿ-NATCH Rule Changed: Weekend ನಲ್ಲಿಯೂ ಸಿಗಲಿದೆ ವೇತನ, NACH ನಿಯಮಗಳಲ್ಲಿ ಬದಲಾವಣೆ ಮಾಡಿದ RBI


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ