Covid-19 Vaccine: 'ಭಾರತದಲ್ಲಿ ಮಕ್ಕಳಿಗೂ ಕೂಡ Pfizer Corona Vaccine ಹಾಕಲಾಗುವುದು'

Covid-19 Vaccine: ಕಳೆದ ವಾರ ಕೊರೊನಾ ವೈರಸ್ ವ್ಯಾಕ್ಸಿನ್ (Coronavirus Vaccine) ಕೊರತೆಯ ಕುರಿತು ಹೇಳಿಕೆ ನೀಡಿದ್ದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಪಾಲ್, ಭಾರತದಲ್ಲಿ ಶೀಘ್ರದಲ್ಲಿಯೇ ಫೈಜರ್ ವ್ಯಾಕ್ಸಿನ್ (Pfizer Covid-19 Vaccine) ಸಿಗಲಿದೆ ಎಂದಿದ್ದರು.

Written by - Nitin Tabib | Last Updated : Jun 4, 2021, 02:37 PM IST
  • ಭಾರತದಲ್ಲಿ ಮಕ್ಕಳಿಗೂ ಕೂಡ ಫೈಜರ್ ಲಸಿಕೆ ನೀಡಲಾಗುವುದು.
  • AIIMS ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಹೇಳಿಕೆ.
  • ಅಮೇರಿಕಾ ಹಾಗೂ ಬ್ರಿಟನ್ ದತಾಂಶಗಳ ಆಧಾರದ ಮೇಲೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.
Covid-19 Vaccine: 'ಭಾರತದಲ್ಲಿ ಮಕ್ಕಳಿಗೂ ಕೂಡ Pfizer Corona Vaccine ಹಾಕಲಾಗುವುದು' title=
Pfizer Covid-19 Vaccine (File Photo-Dr.Randeep Guleria)

ನವದೆಹಲಿ: Covid-19 Vaccine - ಕೊರೊನಾ ವೈರಸ್ ನ ಎರಡನೇ ಅಲೆ (Coronavirus Second Wave) ಇದೀಗ ಭಾರತದಲ್ಲಿ ನಿಲ್ಲುವ ಸಂಕೇತಗಳು ಗೋಚರಿಸುತ್ತಿವೆ. ಆದರೆ, ಇಂದಿಗೂ ಕೂಡ ತಜ್ಞರು ಮೂರನೇ ಅಲೆಯ ಮುನ್ನೆಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ. ಮೂರನೆಯ ಅಲೆ (Coronavirus Third Wave) ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಇದರ ಹಿಂದಿನ ಪ್ರಮುಖ ಕಾರಣ ಎಂದರೆ, ಭಾರತದಲ್ಲಿ ಮಕ್ಕಳಿಗಾಗಿ ಕೊರೊನಾ (Coronavirus Update) ವ್ಯಾಕ್ಸಿನ್ ಇಲ್ಲದೆ ಇರುವುದು. ಅಮೆರಿಕಾದ ಔಷಧಿ ತಯಾರಕ ಕಂಪನಿಯಾಗಿರುವ ಫೈಜರ್ ಕಂಪನಿಯ ವ್ಯಾಕ್ಸಿನ್ (Pfizer Vaccine) ಮಾತ್ರ ವಿಶ್ವದಲ್ಲಿ ಮಕ್ಕಳಿಗೆ ನೀಡಲಾಗುವ ಏಕೈಕ ವ್ಯಾಕ್ಸಿನ್ ಆಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ AIIMS ದೆಹಲಿ ವೈದ್ಯ ಡಾ. ರಣದೀಪ್ ಗುಲೇರಿಯಾ (Dr.Randeep Guleria), ಭಾರತದಲ್ಲಿಯೂ ಕೂಡ ಮಕ್ಕಳಿಗೆ Pfizer Covid-19 Vaccine ನೀಡಲಾಗುವುದು ಎಂದಿದ್ದಾರೆ. ಶೀಘ್ರದಲ್ಲಿಯೇ ಫೈಜರ್ ಲಸಿಕೆ ಭಾರತಕ್ಕೆ ಬರಲಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

Pfizer (Pfizer Vaccine Latest News) ಮತ್ತು Moderna (Moderna Vaccine Latest News) ಲಸಿಕೆಗಳಿಗೆ  ಶೀಘ್ರದಲ್ಲೇ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗುವುದು ಎಂಬ ಸಂಕೇತಗಳನ್ನು ಈಗಾಗಲೇ ಬುಧವಾರ ಕೇಂದ್ರ ಸರ್ಕಾರ ಕೇಂದ್ರ ನೀಡಿದೆ.  ಭಾರತದಲ್ಲಿ ಯಾವುದೇ ರೀತಿಯ ಪರೀಕ್ಷೆ ನಡೆಸದೆ ಲಸಿಕೆಗೆ ಭಾರತ ಸರ್ಕಾರ ಹಸಿರು ನಿಶಾನೆ ನೀಡುತ್ತಿರುವುದು ಇದೇ ಮೊದಲಲ್ಲ ಎಂದು ಡಾ. ಗುಲೇರಿಯಾ ಹೇಳಿದ್ದಾರೆ. 'ಯುಎಸ್, ಯುಕೆ ಅಥವಾ ಇಯು ಮತ್ತು ಡಬ್ಲ್ಯುಎಚ್‌ಒ (WHO) ಏಜೆನ್ಸಿಗಳು ಅನುಮೋದಿಸಿದ ಎಲ್ಲಾ ಲಸಿಕೆಗಳಿಗೆ (Pfizer And Moderna Vaccine Latest Update) ಸರ್ಕಾರವು ತುರ್ತು ಅನುಮೋದನೆ ನೀಡಿತ್ತು ಎಂದು ಅವರು ಹೇಳಿದ್ದಾರೆ. ಅವುಗಳ ಆಧಾರದ ಮೇಲೆಯೇ ಈಗಾಗಲೇ  ಏಜೆನ್ಸಿಗಳ  ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಆದ್ದರಿಂದ, ಶೀಘ್ರದಲ್ಲೇ ಮಕ್ಕಳು ಮತ್ತು ವಯಸ್ಕರಿಗೆ ಫೈಜರ್ ಲಸಿಕೆ ಹಾಕುವ ಅವಕಾಶ ಸಿಗಲಿದೆ ಎಂಬುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಡಾ. ಗುಲೇರಿಯಾ (AIIMS Chief) ಹೇಳಿದ್ದಾರೆ.

ಇದನ್ನೂ ಓದಿ- CSIR Society Meeting 2021: CSIR ಸಭೆಯಲ್ಲಿ PM Modi ನೀಡಿದ ಮುನ್ಸೂಚನೆಯ ಎಚ್ಚರಿಕೆ ಏನು?

ವಿದೇಶಿ ವ್ಯಾಕ್ಸಿನ್ ಬರಲು ಏಕೆ ವಿಳಂಬವಾಗುತ್ತಿದೆ? (Pfizer Comming In India For Kids Too)
ಈ ಸಂದರ್ಭದಲ್ಲಿ ವಿದೇಶಿ ವ್ಯಾಕ್ಸಿನ್ ಗಳಾದಂತಹ ಫೈಜರ್ (Pfizer Vaccine) ಹಾಗೂ ಮಾಡೆರ್ನಾ (Moderna Vaccine) ಲಸಿಕೆಗಳ ಭಾರತ ಬರುವಿಕೆಯಲ್ಲಿ ವಿಳಂಬ ಏಕೆ ಉಂಟಾಗುತ್ತಿದೆ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 'ಆರಂಭಿಕ ದತ್ತಾಂಶ ಇಲ್ಲದಿರುವಿಕೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ. ಯಾವ  ವ್ಯಾಕ್ಸಿನ್ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಮೊದಲು ಪರಿಶೀಲಿಸಲಾಗುತ್ತದೆ. ಈ ಮೊದಲೂ ಕೂಡ ಯುರೋಪ್ ನಲ್ಲಿ ಲಸಿಕೆಯ ಅಡ್ಡಪರಿಣಾಮಗಳ ವರದಿಯಾಗಿದೆ. ಅಮೇರಿಕಾ ಹಾಗೂ ಬ್ರಿಟನ್ ಗಳಲ್ಲಿ ನಡೆಸಲಾಗಿರುವ ವ್ಯಾಕ್ಸಿನೆಶನ್ ಗಳ ದತ್ತಾಂಶ ಪ್ರಕಟಗೊಂಡ ಬಳಿಕ ಇದೀಗ ಭಾರತದಲ್ಲಿಯೂ ಕೂಡ ಇವುಗಳಿಗೆ ಹಸಿರು ನಿಶಾನೆ ನೀಡಲಾಗುತ್ತಿದೆ . ಭಾರತದ ನಾಗರಿಕರಿಗೂ ಕೂಡ ಈ ವ್ಯಾಕ್ಸಿನ್ ಗಳು ಸೇಫ್ ಆಗಿವೆ ಎಂದೆನೆಸಿದಾಗ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ನಾನು ಆ ಸಮೀತಿಯ ಸದಸ್ಯನಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಗುಲೇರಿಯಾ (AIIMS Chief Dr. Randeep Guleria) ಹೇಳಿದ್ದಾರೆ. 

ಇದನ್ನೂ ಓದಿ-ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

ಫೈಜರ್ ಲಸಿಕೆಯ ನಿರೀಕ್ಷೆ (Pfizer Covid-19 Vaccine News Today)
ಕಳೆದ ವಾರ ಕ್ರೋನಾ ವೈರಸ್ ವ್ಯಾಕ್ಸಿನ್ ಕೊರತೆಯ ಕುರಿತು ಹೇಳಿಕೆ ನೀಡಿದ್ದ ನೀತಿ ಆಯೋಗ ಸದಸ್ಯ ಡಾ. ವಿ.ಕೆ ಪಾಲ್ (Niti Aayog Member Dr. VK Paul), ಭಾರತದಲ್ಲಿ ಶೀಘ್ರದಲ್ಲಿಯೇ ಫೈಜರ್ ವ್ಯಾಕ್ಸಿನ್ (Pfizer Covid-19 Vaccine) ಸಿಗಲಿದೆ ಎಂದಿದ್ದರು. ಜುಲೈ 2021 ರವರೆಗೆ ಭಾರತಕ್ಕೆ ಫೈಜರ್ ಕಂಪನಿಯ ಕೋರೋನಾ ಲಸಿಕೆ ಸಿಗಲಿದೆ ಎಂಬ ನಿರೆಕ್ಷೆಯನ್ನು ಅವರು ವ್ಯಕ್ತಪಡಿಸಿದ್ದರು. ಭಾರತದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ವೇರಿಯಂಟ್ ಮೇಲೆಯೂ ಕೂಡ ತಮ್ಮ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಕಂಪನಿ ಈಗಾಗಲೇ ಭರವಸೆ ವ್ಯಕ್ತಪಡಿಸಿದೆ.  ಅಷ್ಟೇ ಅಲ್ಲ ಈಗಾಗಲೇ ಕಂಪನಿ ಈ ವ್ಯಾಕ್ಸಿನ್ ನ ಸಂಗ್ರಹದ ಕುರಿತು ಕೂಡ ಚರ್ಚೆ ನಡೆಸಿದೆ.  ಜುಲೈನಿಂದ ಅಕ್ಟೋಬರ್ ನಡುವೆ ಫೈಜರ್ ಕಂಪನಿ ಭಾರತಕ್ಕೆ ಸುಮಾರು 5 ಕೋಟಿ ಲಸಿಕೆಯ ಪ್ರಮಾಣಗಳನ್ನು ನೀಡುವುದಾಗಿ ಈಗಾಗಲೇ ಹೇಳಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ- Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News