RSS Chief On Religious Conversion:`ಧರ್ಮದ ಪ್ರತಿ ಗೌರವ ಹೆಚ್ಚಾಗಬೇಕು...` ಹಿಂದೂ ಯುವತಿಯರ ಮತಾಂತರ ಕುರಿತು RSS ಮುಖ್ಯಸ್ಥ Mohan Bhagwat ಹೇಳಿದ್ದೇನು?
RSS Chief On Religious Conversion: ಹಿಂದೂ ಯುವಕ ಯುವತಿಯರು ಮತಾಂತರಕ್ಕೆ (Religious Conversion) ಒಳಗಾಗುವುದು ತಪ್ಪು ಮತ್ತು ಹಿಂದೂ ಯುವಕ ಯುವತಿಯರು ತಮ್ಮ ಧರ್ಮ (Hindu Religion) ಹಾಗೂ ಸಂಪ್ರದಾಯಗಳ (Traditions) ಕುರಿತು ಹೆಮ್ಮೆ ಪಡಬೇಕು ಎಂದು RSS ಮುಖ್ಯಸ್ಥ (RSS Chief) ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
RSS Chief On Religious Conversion: ಹಿಂದೂ ಯುವಕ ಯುವತಿಯರು ಮತಾಂತರಕ್ಕೆ (Religious Conversion) ಒಳಗಾಗುವುದು ತಪ್ಪು ಮತ್ತು ಹಿಂದೂ ಯುವಕ ಯುವತಿಯರು ತಮ್ಮ ಧರ್ಮ (Hindu Religion) ಹಾಗೂ ಸಂಪ್ರದಾಯಗಳ (Traditions) ಕುರಿತು ಹೆಮ್ಮೆ ಪಡಬೇಕು ಎಂದು RSS ಮುಖ್ಯಸ್ಥ (RSS Chief) ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. "ಮತಾಂತರ ಹೇಗೆ ಆಗುತ್ತದೆ? ಹಿಂದೂ ಹುಡುಗಿಯರು ಮತ್ತು ಹುಡುಗರು ಇತರ ಧರ್ಮಗಳನ್ನು ಸಣ್ಣ ಸ್ವಾರ್ಥಕ್ಕಾಗಿ, ಮದುವೆಗಾಗಿ ಹೇಗೆ ಅಳವಡಿಸಿಕೊಳ್ಳುತ್ತಾರೆ? ಇದನ್ನು ಮಾಡುತ್ತಿರುವವರು ತಪ್ಪು ಆದರೆ ಅದು ಬೇರೆ ವಿಷಯ. ನಾವು ನಮ್ಮ ಮಕ್ಕಳನ್ನು ಬೆಳೆಸಬೇಕೇ? ಅಲ್ಲವೇ?" ನಾವು ಅವರಿಗೆ ಈ ಮೌಲ್ಯಗಳನ್ನು ನೀಡಬೇಕಾಗಿದೆ ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ.
ಝಾರ್ಖಂಡ್ ರಾಜ್ಯದ ಹಲ್ದ್ವಾನಿಯಲ್ಲಿ ಭಾನುವಾರ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ RSS ಕಾರ್ಯಕರ್ತರು ಹಾಗೂ ಅವರ ಕುಟುಂಬಸ್ಥರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ನಮಗಾಗಿ, ನಮ್ಮ ಧರ್ಮ ಹಾಗೂ ಪೂಜೆಯ ಪರಂಪರೆಯ ಪ್ರತಿ ಗೌರವ ಹಾಗೂ ಹೆಮ್ಮೆ ಬಿತ್ತುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಜನರು ಈ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲಕ್ಕೊಳಗಾಗದೆ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, 'ಪ್ರಶ್ನೆಗಳು ಬಂದರೆ ಉತ್ತರಿಸಿ. ಗೊಂದಲಕ್ಕೆ ಒಳಗಾಗಬೇಡಿ. ನಾವು ನಮ್ಮ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ ಮತ್ತು ಇದಕ್ಕಾಗಿ ನಾವು ಮೊದಲು ಸಿದ್ಧಗೊಳ್ಳಬೇಕು" ಎಂದು ಅವರು ಹೇಳಿದ್ದಾರೆ.
"ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳು ಹಾಗೂ ಪರಂಪರೆಗಳನ್ನು ರಕ್ಷಿಸಲು ಜನರು ಭಾರತೀಯ ಪ್ರವಾಸಿ ತಾಣಗಳ ಪ್ರವಾಸ ಕೈಗೊಳ್ಳಬೇಕು. ಮನೆಯಲ್ಲಿ ತಯಾರಿಸಲಾದ ಊಟ ಮಾಡುವುದು ಹಾಗೂ ಸಾಂಪ್ರದಾಯಿಕ ಉಡುಗೆಗಳನ್ನು ಕೂಡ ತೊಡಬೇಕು" ಎಂದು ಭಾಗವತ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ-RSS Chief: ಭಾರತದಲ್ಲಿ ವಾಸಿಸುವ ಹಿಂದೂ-ಮುಸ್ಲಿಮರ ಪೂರ್ವಜರು ಒಂದೇ
"ಭಾರತೀಯ ಸಂಸ್ಕೃತಿಯ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಇರುವ ಆರು ಮಂತ್ರಗಳಲ್ಲಿ ಭಾಷೆ, ಆಹಾರ, ಭಕ್ತಿಗೀತೆಗಳು, ಪ್ರಯಾಣ, ಉಡುಗೆ ಮತ್ತು ಮನೆ ಶಾಮೀಲಾಗಿವೆ. ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸಬೇಕು. ಅಸ್ಪೃಶ್ಯತೆಯನ್ನು ತ್ಯಜಿಸಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ-Mohan Bhagwat : ಮುಸ್ಲಿಂ ಭಾಂದವರು CAA ಗೆ ಹೆದರುವ ಅಗತ್ಯವಿಲ್ಲ : RSS ಮುಖ್ಯಸ್ಥ
"ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಬೇಡಿ. ಅಸ್ಪೃಶ್ಯತೆ ಇರಬಾರದು. ಸಮಾಜವು ಧರ್ಮವನ್ನು ಹೆಸರುಗಳಿಂದ ಊಹಿಸುವ ಅಭ್ಯಾಸವನ್ನು ಹೊಂದಿದೆ. ಜನರು ತಮ್ಮ ಹೃದಯದಿಂದ ತಾರತಮ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು." ಎಂದು ಅವರು ಹೇಳಿದ್ದಾರೆ. ನೀರನ್ನು ಉಳಿಸಲು ಮತ್ತು ಹೆಚ್ಚು ಗಿಡಗಳನ್ನು ನೆಡಲು ಸಂಬಂಧಿಸಿದ ಪರಿಸರ ಸಮಸ್ಯೆಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಜನರು ಚರ್ಚಿಸಬೇಕು ಎಂದು ಭಾಗವತ್ ಆಗ್ರಹಿಸಿದ್ದಾರೆ.
ಕೊನೆಯದಾಗಿ 'ಹಿಂದೂ ಎಚ್ಚೆತ್ತುಕೊಂಡರೆ ಮಾತ್ರ ಜಗತ್ತು ಎಚ್ಚೆತ್ತುಕೊಳ್ಳಲಿದೆ' ಎಂದು RSS ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ-Twitter Blue Tick : ಉಪರಾಷ್ಟ್ರಪತಿ ಬೆನ್ನಲ್ಲೇ RSS ಪ್ರಮುಖ ನಾಯಕರ ಟ್ವಿಟ್ ಖಾತೆ 'ಬ್ಲೂ ಟಿಕ್' ರದ್ದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ