RSS Chief: ಭಾರತದಲ್ಲಿ ವಾಸಿಸುವ ಹಿಂದೂ-ಮುಸ್ಲಿಮರ ಪೂರ್ವಜರು ಒಂದೇ

RSS Chief On Hindu-Muslim- ಪುಣೆಯಲ್ಲಿ ಗ್ಲೋಬಲ್ ಸ್ಟ್ರೆಟಜಿಕ್ ಪಾಲಸಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ RSS ಸರಸಂಘಚಾಲಕ್ (RSS Chief) ಮೋಹನ್ ಭಾಗವತ್ (Mohan Bhagwat), ದೇಶದ ಮುಸ್ಲಿಂ ನಾಯಕರು ಮೂಲಭೂತವಾದಿಗಳ ವಿರುದ್ಧ ದೃಢವಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

Written by - Nitin Tabib | Last Updated : Sep 7, 2021, 10:38 AM IST
  • ಭಾರತದ ಹಿಂದೂ-ಮುಸ್ಲಿಮರ ಪೂರ್ವಜರು ಒಂದೇ ಆಗಿದ್ದಾರೆ
  • ಪುಣೆಯಲ್ಲಿ ವಿಚಾರಗೋಷ್ಠಿ ಉದ್ದೇಶಿಸಿ ಮಾತನಾಡಿದ RSS ಮುಖಂಡ ಮೋಹನ್ ಭಾಗವತ್.
  • ನಮ್ಮ ಪಾಲಿಗೆ ಪ್ರತಿಯೊಬ್ಬ ಭಾರತೀಯ ಹಿಂದೂ ಮತ್ತು ಅವನು ಯಾರೊಂದಿಗೂ ಕೂಡ ದ್ವೇಷ ಕಟ್ಟಿಕೊಳ್ಳುವುದಿಲ್ಲ.
RSS Chief: ಭಾರತದಲ್ಲಿ ವಾಸಿಸುವ ಹಿಂದೂ-ಮುಸ್ಲಿಮರ ಪೂರ್ವಜರು ಒಂದೇ title=
RSS Chief On Hindu-Muslim (File Photo)

ನವದೆಹಲಿ: RSS Chief On Hindu-Muslim - ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹಿಂದೂ ಮತ್ತು ಮುಸ್ಲಿಮರ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತದಲ್ಲಿ ವಾಸಿಸುವ ಹಿಂದುಗಳು (Hindu) ಮತ್ತು ಮುಸ್ಲಿಮರ (Muslim) ಪೂರ್ವಜರು ಒಂದೇ ಆಗಿದ್ದಾರೆ ಎಂದು ಅವರು ಹೇಳಿದ್ದು, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹಿಂದೂ ಎಂದಿದ್ದಾರೆ. ಪುಣೆಯಲ್ಲಿ (Pune) ಗ್ಲೋಬಲ್ ಸ್ಟ್ರಾಟೆಜಿಕ್ ಪಾಲಿಸಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ದೇಶದ ಸಂವೇದನಾಶೀಲ ಮುಸ್ಲಿಂ ನಾಯಕರು ಮೂಲಭೂತವಾದಿಗಳ ವಿರುದ್ಧ ದೃಢವಾಗಿ ಎದ್ದು ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.

ಹಿಂದೂಗಳು ಯಾರೊಂದಿಗೂ ಕೂಡ ವೈರತ್ವ ಕಟ್ಟಿಕೊಳ್ಳುವುದಿಲ್ಲ
ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಹಿಂದೂಗಳು ಯಾರೊಂದಿಗೂ ಕೂಡ ದ್ವೇಷ ಕಟ್ಟಿಕೊಳ್ಳುವುದಿಲ್ಲ ಎಂದಿದ್ದಾರೆ. 'ಹಿಂದೂ ಪದವು ಮಾತ್ರಭೂಮಿ, ಪೂರ್ವಜ ಮತ್ತು ಭಾರತೀಯ ಸಂಸ್ಕೃತಿಗೆ ಸಮನಾಗಿದೆ ಮತ್ತು ಇದು ಇತರರ ದೃಷ್ಟಿಕೋನಕ್ಕೆ ಅಗೌರವ ಅಲ್ಲ .  ನಾವು ಮುಸ್ಲಿಂ ಪ್ರಾಬಲ್ಯದ ಬಗ್ಗೆ ಯೋಚಿಸಬೇಕಾಗಿಲ್ಲ. ಆದರೆ, ಭಾರತದ ಪ್ರಾಬಲ್ಯದ ಬಗ್ಗೆ ಖಂಡಿತವಾಗಿ ಯೋಚಿಸಬೇಕಾಗಿದೆ. ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರು ಒಟ್ಟಾಗಿ ಶ್ರಮಿಸಬೇಕಾಗಿದೆ' ಎಂದು ಭಾಗವತ್ ಹೇಳಿದ್ದಾರೆ. 

ಅನಾವಶ್ಯಕ ವಿಷಯಗಳನ್ನು ಮುಸ್ಲಿಂ ಮುಖಂಡರು ತಿರಸ್ಕರಿಸಬೇಕು
'ಇಸ್ಲಾಂ ಎಂಬುವುದು ಭಾರತಕ್ಕೆ ಆಕ್ರಮಣಕಾರರೊಂದಿಗೆ ಬಂದಿತು ಮತ್ತು ಇದು ಇತಿಹಾಸ ಕೂಡ ಹೌದು, ಅದನ್ನು ಹಾಗೆಯೇ ಹೇಳಬೇಕು. ಬುದ್ಧಿವಂತ ಮುಸ್ಲಿಂ ನಾಯಕರು ಅನಗತ್ಯ ಸಮಸ್ಯೆಗಳನ್ನು ವಿರೋಧಿಸಬೇಕು ಮತ್ತು ಮೂಲಭೂತವಾದಿಗಳು ಹಾಗೂ ಉಗ್ರರ ವಿರುದ್ಧ ದೃಢವಾಗಿ ಎದ್ದು ನಿಲ್ಲಬೇಕು. ಏಕೆಂದರೆ ನಾವು ಎಷ್ಟು ಇದನ್ನು ಬೇಗ ಮಾಡುತ್ತೇವೆಯೋ ಅಷ್ಟೇ ನಮ್ಮ ಸಮಾಜಕ್ಕೆ ಕಡಿಮೆ ಹಾನಿಯಾಗುತ್ತದೆ' ಎಂದು ಮೊಹನಜೀ ಭಾಗವತ್ (Mohan Bhagwat) ಹೇಳಿದ್ದಾರೆ.

ಇದನ್ನೂ ಓದಿ-Narendra Modi: ಟೀಂ ಇಂಡಿಯಾಗೆ ವಿಭಿನ್ನ ರೀತಿಯಲ್ಲಿ ಅಭಿನಂದಿಸಿದ ಪ್ರಧಾನಿ ಮೋದಿ

ನಮ್ಮ ಪಾಲಿಗೆ ನಾವು ಹಿಂದೂಗಳಾಗಿದ್ದೇವೆ
ಒಂದು ಮಹಾ ಶಕ್ತಿಯ ರೂಪದಲ್ಲಿ ಭಾರತ ಯಾರನ್ನು ಕೂಡ ಬೆದರಿಸುವುದಿಲ್ಲ ಎಂದು ಭಾಗವತ್ ಹೇಳಿದ್ದಾರೆ. ರಾಷ್ಟ್ರ ಮೊದಲ ಮತ್ತು ರಾಷ್ಟ್ರದ ಪರಮೋಚ್ಛ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿರುವ ಅವರು, 'ಹಿಂದೂ ಎಂಬ ಪದವು ನಮ್ಮ ಮಾತೃಭೂಮಿ, ಪೂರ್ವಜ ಮತ್ತು ಸಂಸ್ಕೃತಿಯ ಶ್ರೀಮಂತ ಪರಂಪರೆಗೆ ಸಮಾನಾರ್ಥಕವಾಗಿದೆ. ಈ ಸಂದರ್ಭದಲ್ಲಿ ನಮಗೆ ಪ್ರತಿಯೊಬ್ಬ ಭಾರತೀಯನೂ ಒಬ್ಬ ಹಿಂದೂ, ಆತನ ಧಾರ್ಮಿಕ, ಭಾಷಿಕ ಮತ್ತು ಜನಾಂಗೀಯ ದೃಷ್ಟಿಕೋನವನ್ನು ಲೆಕ್ಕಿಸದೆ. ಭಾರತೀಯ ಸಂಸ್ಕೃತಿ ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿದೆ ಮತ್ತು ಇತರ ಧರ್ಮಗಳನ್ನು ಗೌರವಿಸುತ್ತದೆ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಸೆ.9 ರಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಎಲ್ಲರನ್ನು ಸಮಾನ ಎಂದು ಭಾವಿಸುತ್ತದೆ ಭಾರತೀಯ ಸಂಸ್ಕೃತಿ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಕೂಡ ಈ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ , ಆರಿಫ್ ಮೊಹಮ್ಮದ್ ಖಾನ್, ಹೆಚ್ಚು ವೈವಿಧ್ಯತೆಯು ಸಮೃದ್ಧ ಸಮಾಜವನ್ನು ಸೃಷ್ಟಿಸುತ್ತದೆ ಮತ್ತು ಭಾರತೀಯ ಸಂಸ್ಕೃತಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ. ಭಾರತೀಯ ಮುಸ್ಲಿಮರನ್ನು ಗುರಿಯಾಗಿಸುವ ಪಾಕಿಸ್ತಾನದ ಪ್ರಯತ್ನವನ್ನು ಮುಸ್ಲಿಂ ಬುದ್ಧಿಜೀವಿಗಳು ವಿಫಲಗೊಳಿಸಬೇಕು ಎಂದು ಹಸ್ನೈನ್ ಹೇಳಿದ್ದಾರೆ. 

ಇದನ್ನೂ ಓದಿ-Madhya Pradesh: ಮಳೆ ಬರುವ ನಂಬಿಕೆ ಮೇಲೆ ಬಾಲಕಿಯರ ಬೆತ್ತಲೆ ಮೆರವಣಿಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News