ಸಮೂಹ ಹತ್ಯೆಯಂತಹ ಘಟನೆಗಳನ್ನು ಆರೆಸೆಸ್ಸ್ ಸಹಿಸುವುದಿಲ್ಲ -ಮೋಹನ್ ಭಾಗವತ್
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂಗಳವಾರ ಜನ ಸಮೂಹ ಹತ್ಯೆ ಸೇರಿದಂತೆ ಎಲ್ಲಾ ರೀತಿಯ ಹಿಂಸಾಚಾರಗಳಿಗೆ ವಿರುದ್ಧವಾಗಿರುವುದಾಗಿ ಹೇಳಿದ್ದಾರೆ.
ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಂಗಳವಾರ ಜನ ಸಮೂಹ ಹತ್ಯೆ ಸೇರಿದಂತೆ ಎಲ್ಲಾ ರೀತಿಯ ಹಿಂಸಾಚಾರಗಳಿಗೆ ವಿರುದ್ಧವಾಗಿರುವುದಾಗಿ ಹೇಳಿದ್ದಾರೆ.
ದೆಹಲಿಯಲ್ಲಿ ವಿದೇಶಿ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು ಇಂತಹ ಘಟನೆಗಳನ್ನು ತಡೆಯಲು ಸಂಘಟನೆಯ ಸದಸ್ಯರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಒಂದು ವೇಳೆ ಆರ್‌ಎಸ್‌ಎಸ್‌ನ ಯಾವುದೇ ಸದಸ್ಯರು ಜನಸಮೂಹ ಹತ್ಯೆ ತರಹದ ಘಟನೆಗಳಲ್ಲಿ ಭಾಗಿಯಾಗಿದ್ದರೆ, ಅವರನ್ನು ನಿರಾಕರಿಸಲಾಗುವುದು ಮತ್ತು ಕಾನೂನು ಅಂತವರ ವಿರುದ್ದ ಕ್ರಮ ತೆಗೆದುಕೊಳ್ಳಲಿದೆ ಎಂದು ಭಗವತ್ ಹೇಳಿದ್ದಾರೆ.
ಸುಮಾರು 30 ದೇಶಗಳ ಕನಿಷ್ಠ 80 ಪತ್ರಕರ್ತರ ಜೊತೆ ಸಂವಾದ ನಡೆಸಿದ ಮೋಹನ್ ಭಾಗವತ್ 'ಆರ್ಎಸ್ಎಸ್ ನ ದೃಷ್ಟಿಕೋನವನ್ನು ವಿದೇಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು. ಈ ಸಂವಾದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸದಸ್ಯರಾದ ಸುರೇಶ್ ಜೋಶಿ, ಮನಮೋಹನ್ ವೈದ್ಯ, ಡಾ. ಕ್ರಿಶನ್ ಗೋಪಾಲ್, ಡಾ.ಬಜ್ರಾನ್ ಲಾಲ್ ಗುಪ್ತ್ ಮತ್ತು ಕುಲಭೂಷಣ್ ಅಹುಜಾ ಉಪಸ್ಥಿತರಿದ್ದರು. ಈ ಹಿಂದೆ 2018 ರ ಸೆಪ್ಟಂಬರ್ ತಿಂಗಳಲ್ಲಿ ಅವರು ಭಾರತದ ಮಾಧ್ಯಮಗಳ ಪ್ರತಿನಿಧಿಗಳ ಜೊತೆ ಮೂರು ದಿನಗಳ ಉಪನ್ಯಾಸ ಸರಣಿಯನ್ನು ನಡೆಸಿದ್ದರು.
ಕಳೆದ ಕೆಲವು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಿಂದ ಜನಸಮೂಹ ಹತ್ಯಾಕಾಂಡದ ಹಲವಾರು ಘಟನೆಗಳು ವರದಿಯಾಗಿರುವುದರಿಂದ ಭಗವತ್ ಅವರ ಹೇಳಿಕೆ ಮಹತ್ವದ್ದಾಗಿದೆ. ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸರ್ಕಾರ ಭರವಸೆ ನೀಡಿದೆ. ಇಂತಹ ಘಟನೆಗಳು ನಡೆಯದಂತೆ ತಡೆಯಲು ರಾಜ್ಯ ಸರ್ಕಾರಗಳಿಗೂ ನಿರ್ದೇಶನ ನೀಡಲಾಗಿದೆ.
ಇಂತಹ ಘಟನೆಗಳಿಗೆ ಕಾರಣವಾಗುವ ಸುಳ್ಳು ವದಂತಿಗಳ ಪ್ರಸಾರವನ್ನು ಪರಿಶೀಲಿಸಲು ವಾಟ್ಸಾಪ್, ಫೇಸ್‌ಬುಕ್‌ನೊಂದಿಗೆ ಕೇಂದ್ರವು ಈ ವಿಷಯವನ್ನು ಕೈಗೆತ್ತಿಕೊಂಡಿದೆ. ಇತ್ತೀಚೆಗೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಜನಸಮೂಹ ಹತ್ಯಾಕಾಂಡದಂತಹ ಘಟನೆಗಳನ್ನು ತಡೆಗಟ್ಟಲು ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ತರಲು ನಿರ್ಧರಿಸಿತು.