ನಿಮ್ಮ ಪ್ರಾವಿಡೆಂಟ್ ಫಂಡ್ ಹಾಗೂ ಪೆನ್ಷನ್ ಗಳ ನಿಯಮಗಳಲ್ಲಿ ಮತ್ತೊಮ್ಮೆ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಘಟನೆ EPFನ ಪೆನ್ಷನ್ ಅಂದರೆ ಎಂಪ್ಲಾಯಿ ಪೆನ್ಷನ್ ಸ್ಚೀಮ್ ನಿಯಮಗಳನ್ನು ಬದಲಾಯಿಸುವ ಸಾಧ್ಯತೆ ಇದೆ.  ಪೆನ್ಷನ್ ಮರಳಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಒಂದು ಪ್ರಸ್ತಾಪವನ್ನು ತರಲು ಸಿದ್ಧತೆ ನಡೆಸುತ್ತಿದೆ. ಮೂಲಕಗಳ ಪ್ರಕಾರ EPFO ಶೀಘ್ರದಲ್ಲಿಯೇ ಪೆನ್ಷನ್ ಅವಧಿಯನ್ನು ಎರಡು ವರ್ಷಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಸದ್ಯ ಇದನ್ನು 58 ವರ್ಷಗಳಿಗೆ ನಿಗದಿಪಡಿಸಲಾಗಿದೆ. EPFO, PF ಕಾಯ್ದೆ 1952ರಲ್ಲಿ ಬದಲಾವಣೆಯನ್ನು ತರುವ ತಯಾರಿಯಲ್ಲಿದೆ.


COMMERCIAL BREAK
SCROLL TO CONTINUE READING

ಪೆನ್ಷನ್ ಅವಧಿ ಹೆಚ್ಚಾಗುವ ಸಾಧ್ಯತೆ ಇದೆ
EPFO ಪೆನ್ಷನ್ ವಾಪಸ್ ಪಡೆಯುವ ಅವಧಿಯನ್ನು ಹೆಚ್ಚಿಸುವ ಸಿದ್ಧತೆಯಲ್ಲಿ ತೊಡಗಿದೆ ಎನ್ನಲಾಗಿದೆ. ಇದಕ್ಕಾಗಿ ಸಂಸ್ಥೆ ಈಗಾಗಲೇ ಒಂದು ಪ್ರಸ್ತಾವನೆಯನ್ನೂ ಕೂಡ ಸಿದ್ಧಪಡಿಸಿದೆ ಎನ್ನಲಾಗಿದೆ. ಆದರೆ, ಇದುವರೆಗೆ ಅದನ್ನು ಜಾರಿಗೊಲಿಸಲಾಗಿಲ್ಲ. ಸರಳ ಭಾಷೆಯಲ್ಲಿ ಹೇಳುವುದಾದರೆ ಪೆನ್ಷನ್ ಹಿಂಪಡೆಯುವ ಅವಧಿಯನ್ನು 58 ವರ್ಷಗಳಿಂದ ಹೆಚ್ಚಿಸಿ 60ವರ್ಷಗಳಿಗೆ ನಿಗದಿಪಡಿಸುವ ಸಾಧ್ಯತೆ ಇದೆ. ಅಂದರೆ, ಈ ಮೊದಲು 58 ವರ್ಷಗಳ ಬಳಿಕ ನಿಮಗೆ ಸಿಗುತ್ತಿದ್ದ ಪೆನ್ಷನ್ ಇನ್ಮುಂದೆ 60 ವರ್ಷಗಳ ಬಳಿಕ ಸಿಗುವ ಸಾಧ್ಯತೆ ಇದೆ.


ಇದೊಂದು ವಿಕಲ್ಪ ವ್ಯವಸ್ಥೆಯಾಗಿರಲಿದೆ
ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯ ಅಡಿ ಪೆನ್ಷನ್ ಧಾರಕರು 58 ವರ್ಷಗಳ ಬಳಿಕ ಪೆನ್ಷನ್ ಹಣವನ್ನು ಪಡೆಯಬಹುದು. ಆದರೆ, ಇದೀಗ ಪೆನ್ಷನ್ ಗಾಗಿ ಎರಡು ವರ್ಷಗಳ ಎಕ್ಸಟೆನ್ಶನ್ ನೀಡುವ ಸಾಧ್ಯತೆ ಇದೆ. ಆದರೆ, ಈ ಸಂಪೂರ್ಣ ವ್ಯವಸ್ಥೆ ವೈಕಲ್ಪಿಕ ವ್ಯವಸ್ಥೆಯಾಗಿರಲಿದೆ. ಒಂದು ವೇಳೆ ಪೆನ್ಷನ್ ಧಾರಕರು ಬಯಸಿದರೆ ಮಾತ್ರ ಅವರು 60 ವರ್ಷಗಳ ಬಳಿಕ ಪೆನ್ಷನ್ ಪಡೆಯಬಹುದು. ಇಲ್ಲದೆ ಹೋದಲ್ಲಿ 58 ವರ್ಷಗಳಿಗೂ ಕೂಡ ಅವರು ಪೆನ್ಷನ್ ಪಡೆಯಬಹುದು.


ಪೆನ್ಷನ್ ಗೆ ಸಂಬಂಧಿಸಿದ EPFO ನಿಯಮ ಏನು ಹೇಳುತ್ತದೆ?
ವಿವಿಧ ಕಡೆಗಗಳಲ್ಲಿ ನೌಕರಿ ಮಾಡುತ್ತಾ ಒಂದು ವೇಳೆ ನೀವು 10 ವರ್ಷಗಳ ಸೇವಾವಧಿಯನ್ನು ಪೂರೈಸಿದರೆ ಹಾಗೂ ಈ ಮಧ್ಯೆ ನೀವು ಪೆನ್ಷನ್ ಹಣ ಮರಳಿ ಪಡೆಯದೇ ಹೋದಲ್ಲಿ, ನಿಮ್ಮ ಪೆನ್ಷನ್ ಸುರಕ್ಷಿತವಾಗಿರಲಿದೆ. ಇದನ್ನು ನೀವು 58 ವರ್ಷಗಳ ಸೇವೆ ಪೂರೈಸಿದ ಬಳಿಕ ಮಾಸಿಕ ಪೆನ್ಷನ್ ರೂಪದಲ್ಲಿ ವಾಪಸ್ ಪಡೆಯಬಹುದಾಗಿದೆ. ಈ ಅವಧಿಯನ್ನು EPFO 58 ರಿಂದ 60ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.


ಈಗಾಗಲೇ ಈ ಪ್ರಸ್ತಾವನೆ ತರಲಾಗಿದೆ
ಈ ಕ್ರಮದಿಂದ ಪೆನ್ಷನ್ ಫಂಡ್ ನಲ್ಲಾಗುತ್ತಿರುವ ನಷ್ಟವನ್ನು ಸುಮಾರು 30 ಸಾವಿರ ಕೋಟಿ ರೂ.ಗಳಷ್ಟು ತಡೆಯಬಹುದು ಎಂದು EPFO ಅಂದಾಜಿಸಿದೆ. EPFO ಈ ಅವಧಿಯನ್ನು ಹೆಚ್ಚಿಸುವ ಪ್ರಯತ್ನ ನಡೆಸುತ್ತಿರುವುದು ಇದೆ ಮೊದಲ ಬಾರಿ ಅಲ್ಲ. ವರ್ಷ 2015ರಲ್ಲಿಯೂ ಕೂಡ EPFO ಈ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಆದರೆ, ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈ ಕುರಿತಾದ ಪ್ರಸ್ತಾವನೆಗೆ EPFO, ಕೇಂದ್ರ ಸರ್ಕಾರ ಸೇರಿದಂತೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಜ್, ಕಾಮಿಕ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯದ ಅನುಮತಿ ಪಡೆಯಬೇಕು.


ಪೆನ್ಷನ್ ನಿಯಮಗಳಿಗೆ ಬದಲಾವಣೆ ಏಕೆ ತರಲಾಗುತ್ತಿದೆ?
ಮೂಲಗಳ ಪ್ರಕಾರ EPFO, PF ಕಾಯ್ದೆ 1952ಕ್ಕೆ ತಿದ್ದುಪಡಿ ತರುವ ಸಿದ್ಧತೆಯಲ್ಲಿ ತೊಡಗಿದೆ ಎನ್ನಲಾಗಿದೆ. ವಿಶ್ವಾದ್ಯಂತ ಜಾರಿಯಲ್ಲಿರುವ ಪೆನ್ಷನ್ ಫಂಡ್ ಗಳಲ್ಲಿ ಪೆನ್ಷನ್ ಮರುಪಡೆಯುವ ಅವಧಿಯನ್ನು 65 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಪಿಎಫ್ ಕಾಯ್ದೆಗೆ ಬದಲಾವಣೆಯನ್ನು ತರುವ ಮೂಲಕ ಭಾರತದಲ್ಲಿಯೂ ಕೂಡ ಪೆನ್ಷನ್ ಅವಧಿಯನ್ನು ಹೆಚ್ಚಿಸುವ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಆದರೆ, 65ರ ಬದಲಾಗಿ 60 ವರ್ಷಕ್ಕೆ ನಿಗಗಿಯಾಗುವ ಸಾಧ್ಯತೆ ಇದೆ.


ಹಲವು ಅನುಮತಿಗಳನ್ನು ಪಡೆಯಬೇಕು
EPFOನ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಜ್ ನ ಸಭೆಯಲ್ಲಿ ಈ ಪ್ರಸ್ತಾವನೆಯ ಸಮೀಕ್ಷೆಯಾಗುವ ಸಾಧ್ಯತೆ ಇದೆ. ಮೊದಲು ಕೇಂದ್ರೀಯ ಮಂಡಳಿ ಈ ಕುರಿತು ವಿಚಾರ ವಿಮರ್ಶೆ ನಡೆಸಲಿದೆ. ಮಂಡಳಿಯಿಂದ ಅನುಮತಿ ಪಡೆದ ಬಳಿಕ ಈ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯಕ್ಕೆ ಕಳುಹಿಸಲಾಗುವುದು. ಅಲ್ಲಿಯೂ ಒಂದು ವೇಳೆ ಈ ಪ್ರಸ್ತಾವನೆಗೆ ಅನುಮತಿ ದೊರಕಿದ್ದೇ ಆದಲ್ಲಿ, ವಿತ್ತ ಸಚಿವಾಲಯದಿಂದ ಅನುಮತಿ ಪಡೆದು ಇದನ್ನು ಕೇಂದ್ರ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು.


EPSನ ಪೆನ್ಷನ್ ನಿಯಮ ಏನು ಹೇಳುತ್ತದೆ?
ಪ್ರತಿ ತಿಂಗಳು ನೌಕರರು ತಮ್ಮ ಸಂಬಳದ ನಿಸ್ಚಿತ ರಾಶಿಯನ್ನು ತಮ್ಮ PF ಖಾತೆಗೆ ಠೇವಣಿ ಮಾಡುತ್ತಾರೆ. ಇನ್ನೊಂದೆಡೆ ನೌಕರಿದ್ದರೂ ಕೂಡ ಅಷ್ಟೇ ಮೊತ್ತದ ಹಣವನ್ನು ನೌಕರರ ಪಿಎಫ್ ಖಾತೆಗೆ ಜಮೆ ಮಾಡುತ್ತಾರೆ. ಆದರೆ, ಇಲ್ಲಿ ನೌಕರರು ನೀಡುವ ಶೇ.12ರಷ್ಟು ಮೊತ್ತ ಅವರ PF ಖಾತೆಗೆ ಜಮೆ ಆಗುತ್ತದೆ. ಇನ್ನೊಂದೆಡೆ ನೌಕರಿದಾತರು ನೀಡುವ ಶೇ.12ರಷ್ಟು ಹಣದಲ್ಲಿ ಶೇ.8.33ರಷ್ಟು ಹಣ ಮಾತ್ರ ನೌಕರರ ಪಿಎಫ್ ಖಾತೆಗೆ ಠೇವಣಿಯಾದರೆ ಉಳಿದ ಶೇ.3.67ರಷ್ಟು ಹಣ ನೌಕರರ ಪೆನ್ಷನ್ ಖಾತೆಗೆ ಠೇವಣಿ ಮಾಡಲಾಗುತ್ತದೆ.