ಎರಡು ಮೂರು ತಿಂಗಳಲ್ಲಿ ರಷ್ಯಾದಿಂದ ಭಾರತಕ್ಕೆ ರಕ್ಷಣಾ ಸಾಮಗ್ರಿ ಹಸ್ತಾಂತರ
ಭಾರತದ ಕೋರಿಕೆ ಮೇರೆಗೆ ಎರಡು ಮೂರು ತಿಂಗಳಲ್ಲಿ ರಕ್ಷಣಾ ಸಾಮಗ್ರಿಗಳನ್ನು ರಷ್ಯಾ ಹಸ್ತಾಂತರಿಸಲಿದೆ ಎನ್ನಲಾಗಿದೆ.
ನವದೆಹಲಿ: ಭಾರತದ ಕೋರಿಕೆ ಮೇರೆಗೆ ಎರಡು ಮೂರು ತಿಂಗಳಲ್ಲಿ ರಕ್ಷಣಾ ಸಾಮಗ್ರಿಗಳನ್ನು ರಷ್ಯಾ ಹಸ್ತಾಂತರಿಸಲಿದೆ ಎನ್ನಲಾಗಿದೆ.
ಈ ವಾರದ ಆರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಷ್ಯಾ ಭೇಟಿಯ ಸಂದರ್ಭದಲ್ಲಿ, ಭಾರತವು ರಕ್ಷಣಾ ಸಾಮಗ್ರಿಗಳನ್ನು ಕೋರಿತ್ತು, ರಷ್ಯಾದ ಸರ್ಕಾರದ ಮೂಲಗಳು ಹೇಳುವಂತೆ, ನಾವು ಶೀಘ್ರದಲ್ಲೇ ನಿಖರವಾದ ಪಟ್ಟಿಯನ್ನು ಪಡೆಯುತ್ತೇವೆ ಮತ್ತು ಬಹುಶಃ 2-3 ತಿಂಗಳುಗಳಲ್ಲಿ ಬೇಗನೆ ತಲುಪಿಸಲು ನಾವು ಪ್ರಯತ್ನಿಸುತ್ತೇವೆ,' ಎಂದು ರಷ್ಯಾ ಮೂಲಗಳು ಹೇಳಿವೆ.
ಇದನ್ನೂ ಓದಿ: China ಜೊತೆಗಿನ ಉದ್ವಿಗ್ನತೆಯ ನಡುವೆ ಭಾರತಕ್ಕೆ ಸಾಥ್ ನೀಡಿದ Russia ಹೇಳಿದ್ದೇನು ಗೊತ್ತಾ?
ಎಸ್ -400 ಅಥವಾ ಎಸ್‌ಯು -30 ವಿತರಣೆಗೆ ಭಾರತದಿಂದ ಯಾವುದೇ ತುರ್ತು ವಿನಂತಿಯಿಲ್ಲ ಎಂದು ಮೂಲಗಳು ತಿಳಿಸಿವೆ. ರಷ್ಯಾದ ಕಡೆಯವರು ಈಗಾಗಲೇ ವಿತರಣೆಯನ್ನು ಸಾಧ್ಯವಾದಷ್ಟು ಹೆಚ್ಚಿಸಿದ್ದಾರೆ "ಆದರೆ ಆ ರೀತಿಯ" ಅತ್ಯಾಧುನಿಕ ವ್ಯವಸ್ಥೆಗಾಗಿ, ನಾವು ಅದನ್ನು ಸಾಧ್ಯವಾದಷ್ಟು ಬೇಗ ತಯಾರಿಸುತ್ತಿದ್ದೇವೆ, ಏಕೆಂದರೆ ಭಾರತದ ರಕ್ಷಣಾ ಸಚಿವಾಲಯವು ಬಹಳ ಹಿಂದೆಯೇ ನಮಗೆ ಬೇಗ ಕಳಿಸಲು ವಿನಂತಿಸಿದೆ, ' ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Chinaಗೆ ಭಾರಿ ಮುಖಭಂಗ, ಭಾರತಕ್ಕೆ ಈ ಬ್ರಹ್ಮಾಸ್ತ್ರ ಶೀಘ್ರವೇ ನೀಡುವುದಾಗಿ ಹೇಳಿದ Russia
ಭೇಟಿಯ ಸಮಯದಲ್ಲಿ, ಸಿಂಗ್ ರಷ್ಯಾದ ಉಪ ಪ್ರಧಾನ ಮಂತ್ರಿ ಯೂರಿ ಬೊರಿಸೊವ್ ಅವರನ್ನು ಭೇಟಿ ಮಾಡಿದ್ದರು. ಸಭೆಯ ನಂತರ, 'ನಮ್ಮ ಎಲ್ಲಾ ಪ್ರಸ್ತಾಪಗಳಿಗೆ ರಷ್ಯಾದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ನನ್ನ ಚರ್ಚೆಗಳಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ" ಎಂದು ಸಿಂಗ್ ಹೇಳಿದ್ದಾರೆ. ಇನ್ನೊಂದೆಡೆಗೆ ರಷ್ಯಾ ಭಾರತದ ಜೊತೆಗಿನ ಒಪ್ಪಂದಗಳನ್ನು ಕಾರ್ಯಗತಗೋಳಿಸಲಾಗುವುದು, ಹಲವಾರು ಸಂದರ್ಭಗಳಲ್ಲಿ ಕಡಿಮೆ ಸಮಯದಲ್ಲಿ ಮುಂದೆ ತೆಗೆದುಕೊಳ್ಳಲಾಗುವುದು" ಎಂದು ಅವರು ಭರವಸೆ ನೀಡಿದೆ
ವಿಶ್ವಯುದ್ಧದ ವಿಕ್ಟರಿ ಡೇ ಪೆರೇಡ್‌ನ 75 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ರಷ್ಯಾದ ರಕ್ಷಣಾ ಸಚಿವರ ಆಹ್ವಾನದ ಮೇರೆಗೆ ಜೂನ್ 22 ರಿಂದ ರಕ್ಷಣಾ ಸಚಿವರು ಮೂರು ದಿನಗಳ ಮಾಸ್ಕೋ ಪ್ರವಾಸದಲ್ಲಿದ್ದರು. ಮೆರವಣಿಗೆಯಲ್ಲಿ ಭಾರತೀಯ ತುಕಡಿಯ 75 ಸದಸ್ಯರು ಭಾಗವಹಿಸಿದ್ದರು.