ನವ ದೆಹಲಿ: ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಮಾತನಾಡಲು ಸಚಿನ್ ತೆಂಡೂಲ್ಕರ್ ಮಾಡಿದ ಪ್ರಯತ್ನ ವಿಫಲವಾಗಿದೆ. 2012ರ ಏಪ್ರಿಲ್ನಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ಭಾರತದಲ್ಲಿ ಕ್ರೀಡೆಯ ಭವಿಷ್ಯದ ಕುರಿತು ಮಾತನಾಡಲು ಪ್ರಯತ್ನಿಸುತ್ತಿದ್ದಂತೆ ಕಾಂಗ್ರೇಸ್ನ ರಾಜ್ಯಸಭಾ ಸದಸ್ಯರು ಪ್ರಧಾನಿ ನರೇಂದ್ರ ಮೋದಿ, 2 ಜಿ ಹಗರಣ ಮುಂದಿಟ್ಟು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿರುದ್ಧ ಮಾಡಿದ ಆರೋಪಕ್ಕೆ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು. ಕಾಂಗ್ರೇಸ್ ಗದ್ದಲಕ್ಕೆ ಚಳಿಗಾಲದ ನಾಲ್ಕನೇ ದಿನದ ಕಲಾಪ ಬಲಿಯಾಯಿತು.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಮಾಜಿ ಕ್ರಿಕೆಟಿಗ ಮತ್ತು ರಾಜ್ಯಸಭಾ ಸಂಸದ ಸಚಿನ್ ತೆಂಡೂಲ್ಕರ್ ಸಂಸತ್ ಕಲಾಪದಲ್ಲಿ ಹಾಜರಾಗಲು ಬಂದಿದ್ದರು. ಗದ್ದಲದ ನಡುವೆ ಕಲಾಪವನ್ನು ಒಂದು ಬಾರಿ ಮುಂದೂಡಲ್ಪಟ್ಟ ನಂತರ ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಈ ಸಭೆಯು ಮತ್ತೆ ಪ್ರಾರಂಭವಾಯಿತು. ಆದರೆ ಕಾಂಗ್ರೆಸ್ ಸದಸ್ಯರ ಆಗ್ರಹವು ಕಲಾಪದಲ್ಲಿ ಮುಂದುವರೆಯಿತು. ಸಭಾಧ್ಯಕ್ಷ, ವೆಂಕಯ್ಯ ನಾಯ್ಡು ಎಲ್ಲರಿಗೂ ಶಾಂತಗೊಳಿಸಲು ಮನವಿ ಮಾಡಿದರು. ಅವರು ಕಲಾಪದಲ್ಲಿ ಕ್ರೀಡೆಗೆ ಹಕ್ಕನ್ನು ಮತ್ತು ಭಾರತದಲ್ಲಿ ಭವಿಷ್ಯದ ಕ್ರೀಡೆಗಳ ಕುರಿತು ಅಲ್ಪಾವಧಿಯ ಚರ್ಚೆ ನಡೆಯುತ್ತಿದೆ, ಭಾರತ ರತ್ನ ಪ್ರಶಸ್ತಿ ಮತ್ತು ಯುವ ನಾಯಕ (ಐಕಾನ್) ಸಚಿನ್ ತೆಂಡುಲ್ಕರ್ ಈ ವಿಷಯದ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರೂ ಕಾಂಗ್ರೇಸ್ ಸಂಸದರು ಬಿಗಿ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.



ಅದರ ನಂತರ, ಸಂಸತ್ತಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸಂಸದೆ ಜಯ ಬಚ್ಚನ್ ಅವರು ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು 'ಭಾರತದಲ್ಲಿ ಸಚಿನ್ ತೆಂಡೂಲ್ಕರ್ ಹೆಸರುವಾಸಿಯಾಗಿದ್ದಾರೆ. ಅವರು ಮಾತನಾಡುವುದನ್ನು ತಡೆದಿರುವುದು ಮುಜುಗರಕ್ಕೊಳಗಾಗುತ್ತಿದೆ ... ಇಂದಿನ ಎಲ್ಲ ಕಾರ್ಯಸೂಚಿಗಳೂ ಸಹ ಎಲ್ಲರೂ ತಿಳಿದಿವೆ'. ಎಂದು ಹೇಳಿದರು.