Sakshi Maharaj Compared Yogi With Ram and Krishna - uಉತ್ತರ ಪ್ರದೇಶದ ಉನ್ನಾವೋದಿಂದ ಬಿಜೆಪಿ ಸಂಸದರಾಗಿರುವ ಸಾಕ್ಷಿ ಮಹಾರಾಜ್ ಶನಿವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು 'ರಾಮ ಮತ್ತು ಕೃಷ್ಣ'ರಿಗೆ ಹೋಲಿಸಿದ್ದಾರೆ. ಮಂಗಳ ಕಾರ್ಯವೊಂದರಲ್ಲಿ ಪಾಲ್ಗೊಳ್ಳಲು ಕನೌಜ್‌ಗೆ ಆಗಮಿಸಿದ್ದ ಸಾಕ್ಷಿ ಮಹಾರಾಜ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು, ಈ ಸಂದರ್ಭದಲ್ಲಿ ಅವರು ಶ್ರೀರಾಮನಿಗೆ ಬಿಲ್ಲು ಮತ್ತು ಶ್ರೀಕೃಷ್ಣನಿಗೆ ಸುದರ್ಶನ ಚಕ್ರವಿರುವಂತೆ ನಮ್ಮ ಬಾಬಾ ಬಳಿ ಭೂಮಾಫಿಯಾ ವಿರುದ್ಧ ಹೋರಾಡಲು ಬುಲ್ಡೋಜರ್ ಇದೆ ಮತ್ತು ಅದನ್ನು ಅವರು ಚಲಾಯಿಸುತ್ತಿದ್ದಾರೆ ಎಂದಿದ್ದಾರೆ.

COMMERCIAL BREAK
SCROLL TO CONTINUE READING

ಸಾಕ್ಷಿ ಮಹಾರಾಜ್ ಹೇಳಿದ್ದೇನು
ಮಾಫಿಯಾ ವಿರುದ್ಧ ನಡೆಸುತ್ತಿರುವ ಬುಲ್ಡೋಜರ್ ಅಭಿಯಾನದಿಂದ ರಾಜ್ಯದ 99% ಜನರು ಸಂತಸಗೊಂಡಿದ್ದಾರೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. "ಶ್ರೀರಾಮ ಮತ್ತು ಕೃಷ್ಣನ ಬಳಿ ಧನುಷ್ ಮತ್ತು ಸುದರ್ಶನ ಚಕ್ರದಂತಹ ಅಸ್ತ್ರಗಳಿದ್ದರೆ, ನಮ್ಮ ಬಾಬಾ (ಯೋಗಿ ಆದಿತ್ಯನಾಥ್) ಬುಲ್ಡೋಜರ್ ಅನ್ನು ಹೊಂದಿದ್ದು ಅದನ್ನು ಭೂ ಮಾಫಿಯಾ ವಿರುದ್ಧ ಬಳಸಲಾಗುತ್ತಿದೆ" ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಕ್ರಮ ಆಸ್ತಿಗಳ ನೆಲಸಮ
ರಾಜ್ಯದ ಈ ಒತ್ತುವರಿ ವಿರೋಧಿ ಅಭಿಯಾನದಲ್ಲಿ, ರಾಜ್ಯ ಸರ್ಕಾರವು ಸರ್ಕಾರಿ ಭೂಮಿಯಿಂದ ಅಕ್ರಮ ಆಸ್ತಿಯನ್ನು ತೆಗೆದುಹಾಕಲು ಬುಲ್ಡೋಜರ್‌ಗಳನ್ನು ಬಳಸುತ್ತಿದೆ ಮತ್ತು ಉತ್ತರ ಪ್ರದೇಶದಾದ್ಯಂತ ಮಾಫಿಯಾಗಳ  ಅಕ್ರಮ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಹೇಳಿದ್ದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-RBI Report: ಕೊವಿಡ್ ಕಾಲದಲ್ಲಿ ಭಾರತೀಯ ಆರ್ಥಿಕತೆಗೆ ಭಾರಿ ಹಾನಿ

'ಬುಲ್ಡೋಜರ್ ಬಾಬಾ' ಖ್ಯಾತಿಯ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಸರ್ಕಾರದ ಈ ಕ್ರಮದಿಂದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ‘ಬುಲ್ಡೋಜರ್ ಬಾಬಾ’ ಎಂಬ ಖ್ಯಾತಿ ಬಂದಿದೆ. ವಿವಾದಾತ್ಮಕ ಹೇಳಿಕೆಗೆ ಹೆಸರಾದ ಸಾಕ್ಷಿ ಮಹಾರಾಜ್ ಅವರು 2014 ರಿಂದ ಸತತ ಎರಡು ಬಾರಿ ಉನ್ನಾವೊದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.


ಇದನ್ನೂ ಓದಿ-ಈ ಅಕ್ಷರದಿಂದ ಆರಂಭವಾಗುವ ಹೆಸರಿನ ಪುತ್ರಿ ತಂದೆಯ ಪಾಲಿಗೆ ಲಕ್ಕಿ ಸಾಬೀತಾಗುತ್ತಾಳೆ

ಸೀತಾಪುರ ಜೈಲಿನಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ಮುಖಂಡ ಅಜಂ ಖಾನ್ ಅವರನ್ನು ಭೇಟಿ ಮಾಡಲು ವಿರೋಧ ಪಕ್ಷದ ನಾಯಕರು ಇತ್ತೀಚೆಗೆ ಜೈಲಿಗೆ ಭೀತಿ ನೀಡಿರುವುದರ ಕುರಿತು ಮಾತನಾಡಿದ ಮಹಾರಾಜ್, "ನಾನು ಅದನ್ನು ಗಮನಿಸುತ್ತಿದ್ದೇನೆ ಮತ್ತು ಸರ್ಕಾರವೂ ಅದರ ಮೇಲೆ ಕಣ್ಣಿಟ್ಟಿದೆ" ಎಂದು ಹೇಳಿದ್ದಾರೆ. ಮಧ್ಯಾಹ್ನ ತಿರ್ವಾ ಕನ್ನೌಜ್ ರಸ್ತೆಯಲ್ಲಿರುವ ಅತಿಥಿ ಗೃಹದಲ್ಲಿ ನಡೆದ ಬಿಜೆಪಿ ಮುಖಂಡರೊಬ್ಬರ ಕಿರಿಯ ಸಹೋದರನ ವಿವಾಹ ಸಮಾರಂಭದಲ್ಲಿ ಸಾಕ್ಷಿ ಮಹಾರಾಜ್ ಭಾಗವಹಿಸಿದ್ದರು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.