RBI Report: ಕೊವಿಡ್ ಕಾಲದಲ್ಲಿ ಭಾರತೀಯ ಆರ್ಥಿಕತೆಗೆ ಭಾರಿ ಹಾನಿ

RBI Report on Indian Economy - ಭಾರತೀಯ ಆರ್ಥಿಕತೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ವರದಿ ಭಾರಿ ಅಚ್ಚರಿ ಮೂಡಿಸಿದೆ. ಮಹಾಮಾರಿಯ ಕಾಲದಲ್ಲಿ ಭಾರತದ ಆರ್ಥಿಕತೆಯು ಸುಮಾರು 52 ಲಕ್ಷ ಕೋಟಿ ರೂಪಾಯಿಗಳ ಉತ್ಪಾದನಾ ನಷ್ಟವನ್ನು ಅನುಭವಿಸಿದೆ ಎಂದು ವರದಿ ಹೇಳಿದೆ.  

Written by - Nitin Tabib | Last Updated : Apr 30, 2022, 06:40 PM IST
  • ಭಾರತದ ಆರ್ಥಿಕತೆಯ ಕುರಿತು ಅಚ್ಚರಿಯ ವರದಿ ನೀಡಿದ RBI
  • ಕೊವಿಡ್ 19 ಆರ್ಥಿಕತೆಗೆ ಭಾರಿ ಪೆಟ್ಟು ನೀಡಿದೆ ಎಂದ ವರದಿ
  • ಚೇತರಿಸಿಕೊಳ್ಳಲು ಸುದೀರ್ಘ 12 ವರ್ಷಗಳೇ ಬೇಕಾಗಲಿವೆ ಎಂದ ವರದಿ
RBI Report: ಕೊವಿಡ್ ಕಾಲದಲ್ಲಿ ಭಾರತೀಯ ಆರ್ಥಿಕತೆಗೆ ಭಾರಿ ಹಾನಿ title=
RBI Report

RBI Report on Indian Economy -  ಕೋವಿಡ್-19 ಮಹಾಮಾರಿ ಮನುಷ್ಯರ ಆರೋಗ್ಯಕ್ಕೆ ಹಾನಿ ಮಾಡಿರುವುದು ಮಾತ್ರವಲ್ಲದೆ ದೇಶದ ಆರ್ಥಿಕತೆಯನ್ನು ಭಾರಿ ಹಿಂದಕ್ಕೆ ತಳ್ಳಿದೆ. ಹೌದು, ಕೋವಿಡ್ -19 ಮಹಾಮಾರಿಯ ಕಾರಣ ಉಂಟಾದ ಹಾನಿಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಭಾರತೀಯ ಆರ್ಥಿಕತೆಯು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಹೇಳಿದೆ.

52 ಲಕ್ಷ ಕೋಟಿ ಉತ್ಪಾದನೆ ನಷ್ಟವಾಗಿದೆ
ಆರ್ಥಿಕತೆಯ ಮೇಲೆ ಕೋವಿಡ್-19 ಮಹಾಮಾರಿಯ ಪ್ರಭಾವವನ್ನು ಆರ್‌ಬಿಐ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಭಾರತದ ಆರ್ಥಿಕತೆಯು ಸುಮಾರು 52 ಲಕ್ಷ ಕೋಟಿ ರೂಪಾಯಿಗಳ ಉತ್ಪಾದನಾ ನಷ್ಟವನ್ನು ಅನುಭವಿಸಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಕೊವಿಡ್ -19 ಪದೇ ಪದೇ ಮರಳಿದ್ದೆ ಈ ತೊಂದರೆಗೆ ಕಾರಣ
ರಿಸರ್ವ್ ಬ್ಯಾಂಕ್‌ನ 2021-22ನೇ ಸಾಲಿನ 'ಕರೆನ್ಸಿ ಮತ್ತು ಹಣಕಾಸು ವರದಿ'ಯ 'ಸಾಂಕ್ರಾಮಿಕ ಗುರುತುಗಳು' ಅಧ್ಯಯನದಲ್ಲಿ ಈ ಅಂದಾಜನ್ನು ವರ್ತಿಸಲಾಗಿದೆ. ವರದಿಯ ಪ್ರಕಾರ, ಕೋವಿಡ್ -19 ರ ಪುನರಾವರ್ತಿತ ವಾಪಸಾತಿಯಿಂದ ಉಂಟಾಗಿರುವ ಅವ್ಯವಸ್ಥೆಯು ಆರ್ಥಿಕತೆಗೆ ಭಾರಿ ಅಡೆತಡೆ ಉಂಟುಮಾಡಿದೆ ಮತ್ತು ಇದರಿಂದಾಗಿ, ಜಿಡಿಪಿಯ ತ್ರೈಮಾಸಿಕ ಪ್ರವೃತ್ತಿಯಲ್ಲಿ ಭಾರಿ ಏರಿಳಿತ ಉಂಟಾಗಿದೆ.

ಮೂರನೇ ಅಲೆಯು ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ
ವರದಿಯ ಪ್ರಕಾರ, 2020-21ರ ಮೊದಲ ತ್ರೈಮಾಸಿಕದಲ್ಲಿ ಮಹಾಮಾರಿಯ ಮೊದಲ ಅಲೆಯ ಸಮಯದಲ್ಲಿ, ಆರ್ಥಿಕತೆಯಲ್ಲಿ ಆಳವಾದ ಕುಸಿತ ಕಂಡುಬಂದಿದೆ. ಆದಾಗ್ಯೂ, ಅದರ ನಂತರ ಆರ್ಥಿಕತೆಯು ವೇಗವನ್ನು ಪಡೆದುಕೊಂಡಿದೆ. ಆದರೆ 2021-22ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬಂದ ಸಾಂಕ್ರಾಮಿಕದ ಎರಡನೇ ಅಲೆಯು ಅದರ ಮೇಲೆ ಗಂಭೀರ ಪ್ರಭಾವ ಬೀರಿದೆ. ಇದಾದ ಬಳಿಕ 2022 ರ ಜನವರಿಯಲ್ಲಿ ಬಂದ ಮೂರನೇ ಅಲೆಯೂ ಕೂಡ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ.

ಇದನ್ನೂ ಓದಿ-Petrol-Diesel Price: ಇಂಧನ ಬೆಲೆ ಸ್ಥಿರ: ಸಾರ್ವಜನಿಕರಿಗೆ ಕೊಂಚ ರಿಲೀಫ್‌

ಪ್ರಿ-ಕೊವಿಡ್ ಅವಧಿಯಲ್ಲಿ ಬೆಳವಣಿಗೆ ದರ ಶೇ.6.6ರಷ್ಟಿತ್ತು
'ಮಹಾಮಾರಿ ಅತಿ ದೊಡ್ಡ ವಿಷಯವಾಗಿ ಮಾರ್ಪಟ್ಟಿದೆ' ಎಂದು ಆರ್.ಬಿ.ಐ ತನ್ನ ವರದಿಯಲ್ಲಿ ಹೇಳಿದೆ. ಕೋವಿಡ್ ಪೂರ್ವ ಅವಧಿಯಲ್ಲಿ ಬೆಳವಣಿಗೆಯ ದರವು ಸುಮಾರು ಶೇ.6.6 ರಷ್ಟಿತ್ತು (2012-13 ರಿಂದ 2019-20 ರವರೆಗೆ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ). ಆರ್ಥಿಕ ಹಿಂಜರಿತದ ಸಮಯವನ್ನು ಹೊರತುಪಡಿಸಿ, ಇದು ಶೇ. 7.1 ರಷ್ಟಿದೆ (2012-13 ರಿಂದ 2016-17 ರವರೆಗೆ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ).

ಇದನ್ನೂ ಓದಿ-Gold-Silver Price: ಚಿನ್ನ ಪ್ರಿಯರಿಗೆ ಶಾಕ್‌: ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ

'2020-21ರ ನೈಜ ಬೆಳವಣಿಗೆ ದರವನ್ನು ಋಣಾತ್ಮಕ ಶೇಕಡಾ 6.6, 2021-22ಕ್ಕೆ ಶೇಕಡಾ 8.9 ಮತ್ತು 2022-23ಕ್ಕೆ ಶೇಕಡಾ 7.2 ರಷ್ಟನ್ನು ಗಮನಿಸಿದರೆ, ಕೋವಿಡ್ -19 ನಿಂದ ಉಂಟಾದ ನಷ್ಟವನ್ನು ಭಾರತವು ಸರಿದೂಗಿಸಲಿದೆ ಎಂದು ಅಂದಾಜಿಸಲಾಗಿದೆ. ಆದರೆ, 2034-35ರ ವೇಳೆಗೆ ಇದನ್ನು ಸಾಧಿಸಲು ಸಾಧ್ಯವಾಗಲಿದೆ. 2020-21, 2021-22 ಮತ್ತು 2022-23ರಲ್ಲಿನ ಉತ್ಪಾದನೆಯಲ್ಲಿನ ನಷ್ಟವು ಕ್ರಮವಾಗಿ 19.1 ಲಕ್ಷ ಕೋಟಿ, 17.1 ಲಕ್ಷ ಕೋಟಿ ಮತ್ತು 16.4 ಕೋಟಿ ರೂಪಾಯಿಯಾಗಿದೆ ಎಂದು ವರದಿ ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News