ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಶನಿವಾರದಂದು ಪ್ರತಿಭಟನಾಕಾರರು ಮಂಡಿಸಿದ ಎಂಎಸ್‌ಪಿ ಮತ್ತು ಇತರ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಮಾತುಕತೆಯಲ್ಲಿ ರೈತರನ್ನು ಪ್ರತಿನಿಧಿಸುವ ಐದು ನಾಯಕರ ಹೆಸರನ್ನು ಪ್ರಕಟಿಸಿದರು.


COMMERCIAL BREAK
SCROLL TO CONTINUE READING

ರೈತರ ಆರು ಬೇಡಿಕೆಗಳ ಕುರಿತು ರೈತರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಸ್ಪಷ್ಟಪಡಿಸಿದ ಕೇಂದ್ರವು, ಹೆಚ್ಚಿನ ಚರ್ಚೆಗಾಗಿ ರೈತ ಮುಖಂಡರ ಐದು ಹೆಸರುಗಳನ್ನು ಸಂಯುಕ್ತ ಕಿಸಾನ್ ಮೋರ್ಚಾದಿಂದ ಕೋರಿದ ದಿನಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ.


ಇದನ್ನೂ ಓದಿ : Vicky Kaushal-Katrina Kaif ಮದುವೆಗೆ ಹಾಜರಾಗುವುದಿಲ್ಲ ಎಂದು ಹೇಳಿದ ಗಜರಾಜ್ ರಾವ್..!


ಮುಂದಿನ ಸುತ್ತಿನ ಮಾತುಕತೆಗಾಗಿ, ರೈತ ಸಂಘಗಳನ್ನು ಪ್ರತಿನಿಧಿಸುವ ಛತ್ರಿ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾವು ರೈತರ ಕಡೆಯಿಂದ ಮಾತುಕತೆಯಲ್ಲಿ ಭಾಗವಹಿಸುವ ಸಮಿತಿಯನ್ನು ರಚಿಸಿದೆ. ಸಮಿತಿಯಲ್ಲಿ ಬಲ್ಬೀರ್ ಸಿಂಗ್ ರಾಜೇವಾಲ್, ಶಿವಕುಮಾರ್ ಕಾಕ್ಕಾ, ಗುರ್ನಾಮ್ ಸಿಂಗ್ ಚಾರುಣಿ, ಯುದ್ವೀರ್ ಸಿಂಗ್ ಮತ್ತು ಅಶೋಕ್ ಧವಳೆ ಇರುತ್ತಾರೆ.


ಇದನ್ನೂ ಓದಿ :ವಿಮಾನದಲ್ಲಿಯೇ ಅಮೇರಿಕಾ ಪ್ರಯಾಣಿಕನ ಸಾವು, ದೆಹಲಿಗೆ ಹಿಂತಿರುಗಿದ ಏರ್ ಇಂಡಿಯಾ


“ಸಂಯುಕ್ತ ಕಿಸಾನ್ ಮೋರ್ಚಾ ಭಾರತ ಸರ್ಕಾರದೊಂದಿಗೆ ಮಾತನಾಡಲು 5 ಸದಸ್ಯರ ಸಮಿತಿಯನ್ನು ರಚಿಸಿದೆ.ಇದು ಸರ್ಕಾರದೊಂದಿಗೆ ಮಾತನಾಡಲು ಅಧಿಕೃತ ಸಂಸ್ಥೆಯಾಗಿದೆ.ಸಮಿತಿಯಲ್ಲಿ ಬಲ್ಬೀರ್ ಸಿಂಗ್ ರಾಜೇವಾಲ್, ಶಿವಕುಮಾರ್ ಕಾಕ್ಕಾ,ಗುರ್ನಾಮ್ ಸಿಂಗ್ ಚಾರುಣಿ, ಯುದ್ವೀರ್ ಸಿಂಗ್ ಮತ್ತು ಅಶೋಕ್ ಧಾವಲೆ ಇರುತ್ತಾರೆ ಎಂದು ಟಿಕಾಯತ್  ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ : ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ.. Baby bump ಪೋಟೋ ಹಂಚಿಕೊಂಡ ತಾರೆ


ಮುಂದಿನ ಕ್ರಮ ಹಾಗೂ ಪ್ರತಿಭಟನೆಯ ಬಗ್ಗೆ ಡಿ.7ರಂದು ನಡೆಯಲಿರುವ ಎಸ್‌ಕೆ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.


ನವೆಂಬರ್ 19 ರಂದು, ರೈತರಲ್ಲಿ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದಲ್ಲದೆ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ.


ನವೆಂಬರ್ 26, 2020 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.