Savitribai Phule Death Anniversary: ಭಾರತದ ಮೊದಲ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯನ್ನು ಪ್ರತಿ ವರ್ಷ ಮಾರ್ಚ್ 10 ರಂದು ಆಚರಿಸಲಾಗುತ್ತದೆ. ಸಾವಿತ್ರಿಬಾಯಿ ಫುಲೆ - ಮಹಾರಾಷ್ಟ್ರದ ಭಾರತೀಯ ಸಮಾಜ ಸುಧಾರಕಿ, ಶಿಕ್ಷಣತಜ್ಞ ಮತ್ತು ಕವಿ, ಬುಬೊನಿಕ್ ಪ್ಲೇಗ್‌ನೊಂದಿಗೆ ಹೋರಾಡಿದ ಬಳಿಕ  ಮಾರ್ಚ್ 10, 1897 ರಂದು ನಿಧನರಾದರು. ದೇಶದ ಮೊದಲ ಆಧುನಿಕ ಸ್ತ್ರೀವಾದಿ ಎಂದು ಪ್ರಶಂಸಿಸಲ್ಪಟ್ಟ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿ. ಇಂದು ನಮ್ಮ ದೇಶದ ಬಹುತೇಕ ಮಹಿಳೆಯಾರು ವಿದ್ಯಾವಂತರಾಗಿದ್ದರೆ, ಉದ್ಯೋಗಕ್ಕೆ ಅರ್ಹರಾಗಿದ್ದರೆ, ಸಮಾಜದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ದನಿಯಾಗಿದ್ದಾರೆ. ಆದರೆ, ಇದೆಲ್ಲಾ ಯಾರ ಪ್ರಯತ್ನದಿಂದ ಸಾಧ್ಯವಾಯಿತು ಎಂಬ ಸತ್ಯ ಇಂದಿಗೂ ದೇಶದ ಬಹುತೇಕ ಮಹಿಳೆಯರಿಗೆ ತಿಳಿದಿಲ್ಲ. ನಿಮಗೂ ಗೊತ್ತಿಲ್ಲ ಎಂದರೆ, ಆ ಆದರ್ಶ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ಕುರಿತಾದ 10 ಸಂಗತಿಗಳು ಇಲ್ಲಿವೆ.


COMMERCIAL BREAK
SCROLL TO CONTINUE READING

ಸಾವಿತ್ರಿ ಬಾಯಿ ಫುಲೆ ಅವರ ಆದರ್ಶ ವ್ಯಕ್ತಿತ್ವವನ್ನು ತೋರಿಸುವ 10 ಫ್ಯಾಕ್ಟ್ಸ್ ಇಲ್ಲಿವೆ
1. ಸಾವಿತ್ರಿಬಾಯಿ ಫುಲೆ ಅವರು ಜನವರಿ 3, 1831 ರಂದು ಮಹಾರಾಷ್ಟ್ರದ ನೈಗಾಂವ್ ಗ್ರಾಮದಲ್ಲಿ ಜನಿಸಿದರು. ಅವರು ಲಕ್ಷ್ಮಿ ಮತ್ತು ಖಂಡೋಜಿ ನೆವೇಶೆ ಪಾಟೀಲ್ ಅವರ ಹಿರಿಯ ಮಗಳಾಗಿದ್ದರು. 9 ನೇ ವಯಸ್ಸಿನಲ್ಲಿ, ಫುಲೆ ಅವರು 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು. ಮಹಾರಾಷ್ಟ್ರದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು.


2. ದೇಶದ ಮೊದಲ ಕ್ರಾಂತಿಕಾರಿ ಸ್ತ್ರೀವಾದಿ ಎಂದು ಕರೆಯಲ್ಪಡುವ ಸಾವಿತ್ರಿಬಾಯಿ ಅವರು ಓದಲು ಮತ್ತು ಬರೆಯಲು ಕಲಿತರು ಮತ್ತು ಶೀಘ್ರದಲ್ಲೇ ಪುಣೆಯ ಮಹರ್ವಾಡದಲ್ಲಿ ತಮ್ಮ ಪತಿ ಜ್ಯೋತಿರಾವ್ ಅವರ ಮಾರ್ಗದರ್ಶಕರಾಗಿದ್ದ ಸಗುಣಾಬಾಯಿ ಅವರೊಂದಿಗೆ ಹುಡುಗಿಯರಿಗೆ ಕಲಿಸಲು ಪ್ರಾರಂಭಿಸಿದರು.


3. ಫುಲೆ ಅವರು ತಮ್ಮ ಪತಿಯೊಂದಿಗೆ 1848 ರಲ್ಲಿ ಭಿಡೆವಾಡದಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಪ್ರಾರಂಭಿಸಿದರು. ಶಾಲೆಯ ಪಠ್ಯಕ್ರಮವು ಪಾಶ್ಚಿಮಾತ್ಯ ಶಿಕ್ಷಣವನ್ನು ಆಧರಿಸಿತ್ತು. ಇದು ಗಣಿತ, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳನ್ನು ಒಳಗೊಂಡಿತ್ತು. 1851 ರ ಹೊತ್ತಿಗೆ ಸಾವಿತ್ರಿಬಾಯಿ ಮತ್ತು ಜ್ಯೋತಿರಾವ್ ಫುಲೆಯವರು ಪುಣೆಯಲ್ಲಿ ಸುಮಾರು 150 ಹುಡುಗಿಯರ ಸಾಮರ್ಥ್ಯದೊಂದಿಗೆ ಮೂರು ಶಾಲೆಗಳನ್ನು ನಡೆಸುತ್ತಿದ್ದರು, ಅಂದಿನ ಸಮಾಜದ ಪ್ರತಿರೋಧದ ನಡುವೆಯೂ ಅವರು ತಮ್ಮ ಪತಿ, ಕ್ರಾಂತಿಕಾರಿ ನಾಯಕ ಜ್ಯೋತಿರಾವ್ ಫುಲೆ ಅವರೊಂದಿಗೆ ಹುಡುಗಿಯರಿಗಾಗಿ 18 ಶಾಲೆಗಳನ್ನು ತೆರೆದರು. ಮೊದಲ ಶಾಲೆಯನ್ನು 1848 ರಲ್ಲಿ ತೆರೆಯಲಾಯಿತು, ಅದುವೇ ಪುಣೆ ಬಾಲಿಕಾ ವಿದ್ಯಾಲಯ.


4. ಸಾವಿತ್ರಿಬಾಯಿ ಫುಲೆ ಅವರು ವರದಕ್ಷಿಣೆ ಮತ್ತು ಮಹಿಳಾ ಸಬಲೀಕರಣಕ್ಕೆ ಅಡ್ಡಿಯಾಗುವ ಇತರ ಸಾಮಾಜಿಕ ಅನಿಷ್ಟಗಳ ವಿರುದ್ಧವೂ ಹೋರಾಡಿದರು.ಸಾವಿತ್ರಿಬಾಯಿ ಅವರು ಹತ್ತೊಂಬತ್ತನೇ ಶತಮಾನದಲ್ಲಿ ಅಸ್ಪೃಶ್ಯತೆ, ಸತಿ ಪದ್ಧತಿ, ಬಾಲ್ಯವಿವಾಹ ಮತ್ತು ವಿಧವಾ ಪುನರ್ವಿವಾಹದ ನಿಷೇಧದಂತಹ ಅನಿಷ್ಟಗಳ ವಿರುದ್ಧ ತಮ್ಮ ಪತಿಯೊಂದಿಗೆ ಒಟ್ಟಾಗಿ ಕೆಲಸ ಮಾಡಿದರು.


5. ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಸೇರಿದಂತೆ ಇತರ ಹಿಂದುಳಿದ ವರ್ಗಗಳ ಜಾತಿಗಳ ಮಹಿಳೆಯರು ಮತ್ತು ಮಕ್ಕಳಿಗೆ ಫುಲೆ ಕಲಿಸಲು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ವಿವಿಧ ಜಾತಿಯ ಮಕ್ಕಳಿಗಾಗಿ 18 ಶಾಲೆಗಳನ್ನು ತೆರೆದರು. ಅವರು ತಮ್ಮ ಪತಿಯೊಂದಿಗೆ ಎರಡು ಶೈಕ್ಷಣಿಕ ಟ್ರಸ್ಟ್‌ಗಳನ್ನು ಸ್ಥಾಪಿಸಿದರು. ಅವುಗಳೆ ಸ್ಥಳೀಯ ಸ್ತ್ರೀ ಶಾಲೆ, ಪುಣೆ ಮತ್ತು ಸೊಸೈಟಿ ಫಾರ್ ದಿ ಪ್ರಮೋಶನ್ ಆಫ್ ಎಜುಕೇಶನ್ ಆಫ್ ಮಹಾರ್.


6. 1852 ರಲ್ಲಿ, ಬ್ರಿಟಿಷ್ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಫುಲೆ ಕುಟುಂಬವನ್ನು ಗೌರವಿಸಿತು ಮತ್ತು ಸಾವಿತ್ರಿಬಾಯಿ ಅವರನ್ನು ಅತ್ಯುತ್ತಮ ಶಿಕ್ಷಕಿ ಎಂದು ಹೆಸರಿಸಿತು. 1855 ರಲ್ಲಿ ದಂಪತಿಗಳು ರೈತರು ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿದರು.


7. 28 ಜನವರಿ 1853 ರಂದು, ಅವರು ಗರ್ಭಿಣಿ ಅತ್ಯಾಚಾರ ಸಂತ್ರಸ್ತರಿಗಾಗಿ ಶಿಶುಹತ್ಯೆ ನಿಷೇಧ ಮನೆಯನ್ನು ಸ್ಥಾಪಿಸಿದರು.


8. ಸಾವಿತ್ರಿಬಾಯಿ ಕೂಡ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ  1854 ರಲ್ಲಿ ಪ್ರಕಟಗೊಂಡ  'ಕಾವ್ಯಾ ಫುಲೆ' ಮತ್ತು 1892 ರಲ್ಲಿ  ಪ್ರಕಟಗೊಂಡ 'ಬವನ್ ಕಾಶಿ ಸುಬೋಧ ರತ್ನಾಕರ್' ಶಾಮೀಲಾಗಿವೆ.


ಇದನ್ನೂ ಓದಿ-CISF Raising Day 2023: ಸಿಐಎಸ್ಎಫ್ ರೈಸಿಂಗ್ ಡೇ ಬಗ್ಗೆ ನಿಮಗೆಷ್ಟು ಗೊತ್ತು?


9. ವಿಧವೆಯರ ತಲೆ ಬೋಳಿಸುವ ಪದ್ಧತಿಯನ್ನು ವಿರೋಧಿಸಿ ಸಾವಿತ್ರಿಬಾಯಿ ಮುಂಬೈ ಮತ್ತು ಪುಣೆಯಲ್ಲಿ ಕ್ಷೌರಿಕರ ಮುಷ್ಕರವನ್ನು ಆಯೋಜಿಸಿದರು.


ಇದನ್ನೂ ಓದಿ-Viral Video: ಮದುವೆಯ ಡಾನ್ಸ್ ಫ್ಲೋರ್ ನಲ್ಲಿ ಕುಣಿಯುವುದರಲ್ಲಿ ಮಗ್ನರಾದ ಅತಿಥಿಗಳು, ನಂತರ ನಡೆದಿದ್ದು ನೀವೇ ನೋಡಿ


10. ಸಾವಿತ್ರಿಬಾಯಿ ಮತ್ತು ಅವರ ಪತಿಗೆ ಮಕ್ಕಳಿರಲಿಲ್ಲ ಆದರೆ ಅವರು ಯಶವಂತರಾವ್ ಎಂಬ ಹುಡುಗನನ್ನು ದತ್ತು ಪಡೆದರು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.