ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‍ಬಿಐ) ಆನ್ ಲೈನ್  ಬ್ಯಾಂಕಿಂಗ್ ಬಳಕೆದಾರರು ಕೂಡಲೇ ತಮ್ಮ ಮೊಬೈಲ್ ಸಂಖ್ಯೆಯಲ್ಲಿ ಬ್ಯಾಂಕಿಗೆ ತೆರಳಿ ನೊಂದಾಯಿಸಿಕೊಳ್ಳಲು ಬ್ಯಾಂಕ್ ತಿಳಿಸಿದೆ. ಒಂದು ವೇಳೆ ನವೆಂಬರ್ 30ರ ಒಳಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡದಿದ್ದರೆ ಎಲ್ಲಾ ಆನ್‍ಲೈನ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಬ್ಯಾಂಕ್ ವಹಿವಾಟಿನ ಎಲ್ಲ ವಿವರಗಳನ್ನು ಅರಿಯಲು, ಪ್ರತಿಯೊಂದು ಮಾಹಿತಿಯನ್ನು ಸಂದೇಶದ ಮೂಲಕ ಪಡೆಯಲು, ಖಾತೆಯ ಸುರಕ್ಷತೆಗಾಗಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 30ರ ಒಳಗೆ ಮೊಬೈಲ್ ಸಂಖ್ಯೆ ನೊಂದಾಯಿಸಿಕೊಳ್ಳುವಂತೆ ತನ್ನ ಗ್ರಾಹಕರಿಗೆ ಎಸ್​ಬಿಐ ಸೂಚಿಸಿದೆ. 


ನವೆಂಬರ್ 30ರೊಳಗೆ ಗ್ರಾಹಕರು ಮಾಡಲೇಬೇಕಾದ ಕಾರ್ಯಗಳು
* ಮೊಬೈಲ್ ಸಂಖ್ಯೆಯನ್ನು ಖಾತೆಯೊಂದಿಗೆ ಲಿಂಕ್ ಮಾಡದ ಗ್ರಾಹಕರು ನೇರವಾಗಿ ಬ್ಯಾಂಕ್‌ಗೆ ತೆರಳಿ ಅಥವಾ ಎಟಿಎಂ ಮೂಲಕ ತಮ್ಮ ಮೊಬೈಲ್​ನ ಅಧಿಕೃತ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಿ.
*ಎಸ್​ಬಿಐನ ಇಂಟರ್​ನೆಟ್ ಬಳಕೆದಾರ ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್​​ಸೈಟ್​ www.onlinesbi.comಗೆ ಭೇಟಿ ನೀಡಿಯೂ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬಹುದು. 
* ಬ್ಯಾಂಕ್ ಗೆ ತೆರಳಿ ಹಳೆ ಡೆಬಿಟ್ (ಮ್ಯಾಗ್‌ಸ್ಟ್ರೆಪ್) ಕಾರ್ಡ್‌ಗಳಿಂದ ಹೊಸ (ಇವಿಎಂ ಚಿಪ್) ಕಾರ್ಡ್‌ಗಳಿಗೆ ಬದಲಾಯಿಸಿಕೊಳ್ಳಿ. ಈ ಸೇವೆ ಉಚಿತ.
* ನಿಮ್ಮ ಇ-ಮೇಲ್ ವಿಳಾಸ ಮತ್ತು ಮನೆ ವಿಳಾಸವನ್ನು ಅಪ್ಡೇಟ್ ಮಾಡಿ.