ಶೀಘ್ರದಲ್ಲೇ ನಿಮ್ಮ ಡೆಬಿಟ್ ಕಾರ್ಡ್ ಬದಲಿಸಿ; ಗ್ರಾಹಕರಿಗೆ ಮತ್ತೆ SBI ಸೂಚನೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರಿಗೆ SBI ಮತ್ತೆ ಶೀಘ್ರದಲ್ಲೇ ಡೆಬಿಟ್ ಕಾರ್ಡ್ ಬದಲಿಸುವಂತೆ ಸೂಚನೆ ನೀಡಿದೆ.
ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಬ್ಯಾಂಕ್ ನಲ್ಲಿ ಖಾತೆ ಹೊಂದಿರುವಿರೇ. ಹಾಗಾದರೆ ಈ ಸುದ್ದಿ ನಿಮಗೆ ಅತ್ಯಂತ ಮುಖ್ಯ. ಎಸ್ಬಿಐ ತನ್ನ ಹಳೆಯ ಮ್ಯಾಜಿಸ್ಟ್ರೇಟ್ (ಮ್ಯಾಗ್ನೆಟಿಕ್) ಡೆಬಿಟ್ ಕಾರ್ಡ್ ಅನ್ನು ಶೀಘ್ರದಲ್ಲೇ ಬಂದ್ ಮಾಡುವ ಬಗ್ಗೆ ಮತ್ತೊಮ್ಮೆ ಗ್ರಾಹಕರನ್ನು ಎಚ್ಚರಿಸಿದೆ. ಮ್ಯಾಗ್ನೆಟಿಕ್ ಸ್ಟ್ರೈಪ್ ಹೊಂದಿರುವ ಕಾರ್ಡ್ ಅನ್ನು ಬ್ಯಾಂಕ್ ಗಳು ಡಿಸೆಂಬರ್ 31ಕ್ಕೆ ಸ್ಥಗಿತಗೊಳಿಸಲಿವೆ. ಇದರ ಬದಲಾಗಿ ಇಎಂವಿ ಚಿಪ್ ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ನೀಡಲಿದೆ. ಹೊಸ ಮೆಗ್ನೆಟಿಕ್ ಡೆಬಿಟ್ ಕಾರ್ಡ್ ನ್ನು ಡಿಸೆಂಬರ್ 31 ,2018 ರವರೆಗೆ ಪಡೆಯಲು ಅವಕಾಶ ನೀಡಲಾಗಿದೆ. ಅವಧಿ ನಂತರ ಹಳೆ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ. ಎಟಿಎಂಗಳಲ್ಲೂ ಕಾರ್ಡ್ ನ್ನು ಸ್ವೀಕರಿಸಲಾಗುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಕೇವಲ ಚಿಪ್ ಆಧಾರಿತ ಮತ್ತು ಪಿನ್ ಹೊಂದಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ನೀಡುವಂತೆ ಬ್ಯಾಂಕ್ ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.
ಹೊಸ ಕಾರ್ಡ್ ಪಡೆಯಲು ಹೀಗೆ ಮಾಡಿ:
ಡಿಸೆಂಬರ್ 31ರ 2018 ರೊಳಗಾಗಿ ಇಎಂವಿ ಚಿಪ್ ಕಾರ್ಡ್ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಹೊಸ ಡೆಬಿಟ್ ಕಾರ್ಡ್ ಪಡೆಯಲು ಎಸ್ಬಿಐನ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವೇ ಬ್ಯಾಂಕಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 2017 ರಿಂದ ಬ್ಯಾಂಕ್ ಕೆಲವು ಹಳೆಯ ಕಾರ್ಡ್ ಅನ್ನು ಸ್ಥಗಿತಗೊಳಿಸಿದೆ. ಡಿಸೆಂಬರ್ 31, 2018 ರಿಂದ ಹಳೆಯ ಕಾರ್ಡ್ ಗಳು ಸಂಪೂರ್ಣವಾಗಿ ಬಂದ್ ಆಗಲಿವೆ.
ಇವಿಎಂ ಚಿಪ್ ಆಧಾರಿತ ಕಾರ್ಡುಗಳು ನಕಲಿ ಕಾರ್ಡುಗಳ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುತ್ತದೆ. ವಂಚನೆ, ಕಾರ್ಡು ಕಳೆದುಹೋಗುವುದು ಮತ್ತು ಕದ್ದು ಹೋದರೆ ವಂಚನೆಯಾಗುವುದನ್ನು ಇಎಂವಿ ಚಿಪ್ ಆಧಾರಿತ ಕಾರ್ಡುಗಳು ರಕ್ಷಿಸಿ ಪಿನ್ ಸಂಖ್ಯೆಯನ್ನು ರಕ್ಷಿಸುತ್ತದೆ.
ಹೊಸ ಕಾರ್ಡ್ಗಳನ್ನು ಪಡೆಯಲು ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ. ಬದಲಾಗಿ ಹಳೆಯ ಕಾರ್ಡ್ನ್ನು ನೀಡಿ ಹೊಸ ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ನ್ನು ಪಡೆಯಬಹುದಾಗಿದೆ. ಗ್ರಾಹಕನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಕಾರ್ಡ್ ಬದಲಿಸಲು ಇಚ್ಛಿಸಿದರೆ ಅದಕ್ಕೂ ಅವಕಾಶ ನೀಡಲಾಗಿದೆ. SBIನ ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಇ-ಸರ್ವೀಸ್ ಟ್ಯಾಬ್ನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ನೀಡಲಾಗಿರುವ ಮಾರ್ಗಸೂಚಿಗಳ ಅನುಸಾರ ಎಟಿಎಂ ಕಾರ್ಡ್ನ್ನು ಬದಲಾಯಿಸಿಕೊಳ್ಳಬಹುದು.