ನವದೆಹಲಿ: ನೀವು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)  ಗ್ರಾಹಕರಾಗಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ವಾಸ್ತವವಾಗಿ ಕೊರೊನಾವೈರಸ್ನ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ತನ್ನ ಶಾಖೆಗಳಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ತನ್ನ ಅನೇಕ ಶಾಖೆಗಳ ಆರಂಭಿಕ ಮತ್ತು ಮುಕ್ತಾಯದ ಸಮಯವನ್ನು ಬದಲಾಯಿಸಿದೆ.


COMMERCIAL BREAK
SCROLL TO CONTINUE READING

ಶಾಖೆಗಳಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಕೂಡ ಕಡಿಮೆ ಬರುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಬ್ಯಾಂಕಿಗೆ ಹೋಗಬೇಕಾದರೆ ಬ್ಯಾಂಕಿನ ಸಮಯದ ಬಗ್ಗೆ ಕಾಳಜಿ ವಹಿಸಿ. ಅನಿವಾರ್ಯವಲ್ಲದ ಕೆಲಸಗಳಿಗೆ ಬ್ಯಾಂಕಿಗೆ ಹೋಗಬೇಡಿ. ಅಲ್ಲದೆ ಹಣದ ವಹಿವಾಟಿಗಾಗಿ ನೀವು ಬ್ಯಾಂಕ್ ಒದಗಿಸುವ ಡಿಜಿಟಲ್ ಸೇವೆಗಳನ್ನು ಬಳಸಬಹುದು.


ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ತಪ್ಪದೇ ತಿಳಿಯಿರಿ ಈ ಮಾಹಿತಿ


ಎಸ್‌ಬಿಐ ನೀಡಿದ ಮಾಹಿತಿಯ ಪ್ರಕಾರ, ಬ್ಯಾಂಕ್ ಶಾಖೆಗಳನ್ನು ತೆರೆಯುವ ಸಮಯವನ್ನು ಬದಲಾಯಿಸಿದೆ. ಬ್ಯಾಂಕ್ ಶಾಖೆಗಳು ಈಗ ದೇಶದ ಎಲ್ಲಾ ಭಾಗಗಳಲ್ಲಿ ಬೆಳಿಗ್ಗೆ 11: 30 ಕ್ಕೆ ತೆರೆಯುತ್ತಿವೆ.


ನಿಮ್ಮ ಶಾಖೆಯ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ ಬ್ಯಾಂಕಿನ ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ನಗರದ ಹೆಸರನ್ನು ಹುಡುಕುವ ಮೂಲಕ ನಿಮ್ಮ ಶಾಖೆಯ ಸಮಯದ ಬಗ್ಗೆ ಇಲ್ಲಿ ನೀವು ತಿಳಿದುಕೊಳ್ಳಬಹುದು. https://www.sbi.co.in/documents/136/1364568/Working+Branches+22052020.pdf/588d3aef-426d-8bbd-2c1a-e3159a2854d1?t=1590133498748


ಸುರಕ್ಷಿತ ಬ್ಯಾಂಕಿಂಗ್‌ಗಾಗಿ ಇಲ್ಲಿದೆ ವಿಶೇಷ ಸಲಹೆಗಳು!


ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ ಬ್ಯಾಂಕ್ ಅನೇಕ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯವನ್ನು ಬದಲಾಯಿಸಿದೆ. ಕೆಲವು ರಾಜ್ಯಗಳಲ್ಲಿ, ಬೆಳಿಗ್ಗೆ 7 ರಿಂದ 10 ರವರೆಗೆ ಶಾಖೆಗಳು ತೆರೆಯುತ್ತಿವೆ. ಆದ್ದರಿಂದ ಕೆಲವು 8 ರಿಂದ 11 ಗಂಟೆಯ ನಡುವೆ ತೆರೆಯುತ್ತಿದೆ. ಕೆಲವು ಸ್ಥಳಗಳಲ್ಲಿ ಶಾಖೆಗಳ ಸಮಯವು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಇರುತ್ತದೆ.


ಎಸ್‌ಬಿಐನ ಈ ಖಾತೆಯಲ್ಲಿ ಸಿಗಲಿದೆ ಹಲವು ಸೌಲಭ್ಯ


ಇದಲ್ಲದೆ ಎಸ್‌ಬಿಐ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಿದೆ. ನಗದು ಪಿಕಪ್, ನಗದು ವಿತರಣೆ, ಚೆಕ್ ಪಿಕಪ್, ಚೆಕ್ ರಿಜೆಕ್ಷನ್ ಸ್ಲಿಪ್ ಪಿಕಪ್, ಫಾರ್ಮ್ 15 ಹೆಚ್ ಪಿಕಪ್, ಡ್ರಾಫ್ಟ್ಸ್ ಡೆಲಿವರಿ, ಟರ್ಮ್ ಠೇವಣಿ ಸಲಹೆ ವಿತರಣೆ, ಲೈಫ್ ಸರ್ಟಿಫಿಕೇಟ್ ಪಿಕಪ್ ಮತ್ತು ಕೆವೈಸಿ ಡಾಕ್ಯುಮೆಂಟ್ಸ್ ಪಿಕಪ್ ಮುಂತಾದ ಸೇವೆಗಳನ್ನು ಇದು ಒಳಗೊಂಡಿದೆ.


ನೀವು ಎಸ್‌ಬಿಐ ಖಾತೆದಾರರೇ? ಈ ಕೆಲಸಕ್ಕಾಗಿ ಇನ್ಮುಂದೆ ಬ್ಯಾಂಕಿಗೆ ಹೋಗಬೇಕಿಲ್ಲ


ಈ ಸೇವೆಯನ್ನು ಪಡೆಯಲು, ನೀವು ಕೆಲಸದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಟೋಲ್ ಫ್ರೀ ಸಂಖ್ಯೆ 1800111103 ಗೆ ಕರೆ ಮಾಡಬೇಕು. ನೋಂದಣಿಗಾಗಿ ಸೇವಾ ವಿನಂತಿಯನ್ನು ಹೋಂ ಶಾಖೆಯಲ್ಲಿ ಮಾಡಲಾಗುತ್ತದೆ. ಡೈಸ್ಟೆಪ್ ಬ್ಯಾಂಕಿಂಗ್ ಸೇವೆ ಕೆವೈಸಿ ಮಾಡಿದ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. ಹಣಕಾಸಿನೇತರ ವಹಿವಾಟುಗಳಿಗೆ ಸೇವಾ ಶುಲ್ಕ 60 ರೂ. ಮತ್ತು ಜಿಎಸ್ಟಿ ಮತ್ತು ಹಣಕಾಸು ವಹಿವಾಟುಗಳಿಗೆ ಸೇವಾ ಶುಲ್ಕ 100 ರೂ. ಆಗಿರುತ್ತದೆ.