ನವದೆಹಲಿ: ಕರೋನಾ ಯುಗದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗೃಹ ಸಾಲ ಪಡೆಯುವ ಗ್ರಾಹಕರಿಗಾಗಿ ಗ್ರಾಹಕರಿಗೆ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದಡಿಯಲ್ಲಿ, ಈಗ ಗ್ರಾಹಕರಿಗೆ ಬಡ್ಡಿ ಪ್ರಮಾಣಪತ್ರ ಸಿಗಲಿದೆ. ಐಟಿಆರ್ ಅನ್ನು ಭರ್ತಿ ಮಾಡುವಾಗ ಈ ಪ್ರಮಾಣಪತ್ರದ ಅಗತ್ಯವಿದೆ, ಏಕೆಂದರೆ ಇದು ಆದಾಯ ತೆರಿಗೆಯಲ್ಲಿ ವಿನಾಯಿತಿ ಗ್ರಾಹಕರಿಗೆ ನೀಡುತ್ತದೆ.


COMMERCIAL BREAK
SCROLL TO CONTINUE READING

ಬಡ್ಡಿ ಪ್ರಮಾಣಪತ್ರವನ್ನು ನೀವು ಈ ರೀತಿ ಡೌನ್ಲೋಡ್ ಮಾಡಬಹುದಾಗಿದೆ
- ಗೃಹ ಸಾಲ ಬಡ್ಡಿ ಪ್ರಮಾಣಪತ್ರಕ್ಕಾಗಿ, ಮೊದಲು ನೀವು ನಿಮ್ಮ ಖಾತೆಗೆ ಲಾಗಿನ್ ಆಗಬೇಕು.
- ಲಾಗಿನ್ ಮಾಡಿದ ನಂತರ, ನೀವು 'ಇ ಸರ್ವಿಸೆಸ್' ಆಯ್ಕೆ ಮಾಡಬೇಕು.
- ಇ-ಸರ್ವಿಸೆಸ್'ಗೆ ಭೇಟಿ ನೀಡುವ ಮೂಲಕ, ನೀವು ಮೈ ಸರ್ಟಿಫಿಕೆಟ್  ಆಯ್ಕೆಯನ್ನು ಆಯ್ದುಕೊಳ್ಳಬೇಕು.
- ಇಲ್ಲಿ ನೀವು ನಿಮ್ಮ ಗೃಹ ಸಾಲ ಖಾತೆ ಸಂಖ್ಯೆಯನ್ನು ಆಯ್ಕೆಮಾಡಬೇಕು.
- ಇದರ ನಂತರ, ಗೃಹ ಸಾಲ ಬಡ್ಡಿ ಪ್ರಮಾಣಪತ್ರವು ನಿಮ್ಮ ಮುಂದೆ ಪರದೆಯ ಮೇಲೆ ಸ್ವಯಂಚಾಲಿತವಾಗಿ ಕಾಣಿಸಿಕೊಳ್ಳಲಿದೆ.
- ಈ ಪ್ರಮಾಣಪತ್ರದ ಪಿಡಿಎಫ್ ಕಾಪಿ ಯನ್ನು ನೀವು ಡೌನ್‌ಲೋಡ್ ಮಾಡಬಹುದು.
- ಇದಕ್ಕೂ ಮೊದಲು ಗ್ರಾಹಕರು ಈ ಪ್ರಮಾಣಪತ್ರ ಪಡೆಯಲು ತಮ್ಮ ಹೋಮ್ ಶಾಖೆಗಳಿಗೆ ಭೇಟಿ ನೀಡಬೇಕಾಗಿತ್ತು.


ನೀವು ನಿಮ್ಮ ಡಿಜಿಟಲ್ ಸೇವಿಂಗ್ ಖಾತೆಯನ್ನು ತೆರೆಯಬಹುದು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್‌ಬಿಐ ತನ್ನ ಗ್ರಾಹಕರಿಗೆ ಡಿಜಿಟಲ್ ಉಳಿತಾಯ ಖಾತೆ ತೆರೆಯಲು ಅನುಮತಿ ನೀಡುತ್ತದೆ. ಎಸ್‌ಬಿಐನ ಅಧಿಕೃತ ವೆಬ್‌ಸೈಟ್ - onlinesbi.com ಅಥವಾ sbi.co.in ಗೆ ಭೇಟಿ ನೀಡುವ ಮೂಲಕ  ನೀವು ಡಿಜಿಟಲ್ ಖಾತೆಯನ್ನು ತೆರೆಯಬಹುದು. ಯೋನೊ ಎಸ್‌ಬಿಐ ಅಪ್ಲಿಕೇಶನ್‌ನಲ್ಲಿ ಲಾಗ್ ಇನ್ ಮಾಡುವ ಮೂಲಕವೂ ಕೂಡ ನೀವು ನಿಮ್ಮ ಡಿಜಿಟಲ್ ಖಾತೆಯನ್ನು ತೆರೆಯಬಹುದು.


ಈ ಖಾತೆಯನ್ನು ಯಾರು ತೆರೆಯಬಹುದು?
ಎಸ್‌ಬಿಐ ಡಿಜಿಟಲ್ ಉಳಿತಾಯ ಖಾತೆಯನ್ನು ಭಾರತದಲ್ಲಿ ಅನ್ವಯವಾಗುವ ಕಾನೂನುಗಳ ಪ್ರಕಾರ ವ್ಯವಹರಿಸುವ ಸಾಮರ್ಥ್ಯವನ್ನು ಹೊಂದಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಭಾರತದ ನಾಗರಿಕರು ಹಾಗೂ  ದೇಶದ ಹೊರಗೆ ಯಾವುದೇ ತೆರಿಗೆ ಹೊಣೆಗಾರಿಕೆ ಇಲ್ಲದೆ ಇರುವವರು ಕೂಡ ಎಸ್‌ಬಿಐ ಡಿಜಿಟಲ್ ಖಾತೆ ತೆರೆಯಲು ಅರ್ಹರಾಗಿದ್ದಾರೆ.