ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಮ್ಯಾಗ್ನೆಟಿಕ್ ಸ್ಟ್ರಿಪ್ ಎಟಿಎಂ ಕಮ್ ಡೆಬಿಟ್ ಕಾರ್ಡ್ ಅನ್ನು ಇಎಮ್ವಿ ಚಿಪ್ ಆಧಾರಿತ ಕಾರ್ಡಿನೊಂದಿಗೆ ಡಿಸೆಂಬರ್ 31, 2018ರೊಳಗೆ ಬದಲಾಯಿಸಿಕೊಳ್ಳುವಂತೆ ಕೋರಿದೆ. ಅಲ್ಲದೆ, ಕಾರ್ಡ್ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ, ಚಿಪ್ ಆಧಾರಿತ ಮತ್ತು ಪಿನ್ ಸಶಕ್ತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಮಾತ್ರ ಗ್ರಾಹಕರಿಗೆ ಒದಗಿಸುವಂತೆ ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್  ಆದೇಶಿಸಿದೆ.


COMMERCIAL BREAK
SCROLL TO CONTINUE READING

ಚಿಪ್ ಕಾರ್ಡ್ ವಂಚನೆಯಿಂದ ರಕ್ಷಿಸುತ್ತದೆ
ನಕಲಿ ಕಾರ್ಡ್ಗಳನ್ನು ತಯಾರಿಸಿ, ವಂಚಿಸುವುದರಿಂದ ಇಎಂವಿ ಚಿಪ್ ಕಾರ್ಡ್ ರಕ್ಷಿಸುತ್ತದೆ. ಒಂದು ವೇಳೆ ಕಾರ್ಡ್ ಕಳೆದುಹೋದರೂ ಅಥವಾ ಕಳ್ಳತನವಾದರೂ ಸಹ ನಕಲಿ ಕಾರ್ಡ್ಗಳನ್ನು ತಯಾರಿಸಿ ವಂಚಿಸುವುದನ್ನು EMPV ಕಾರ್ಡ್ ಮತ್ತು PIN ವೈಶಿಷ್ಟ್ಯ ತಡೆಯುತ್ತದೆ. 


ಈ ಬಗ್ಗೆ SBI ಟ್ವೀಟ್ ಮಾಡಿದ್ದು, "ಪ್ರಿಯ ಗ್ರಾಹಕರೇ, ಇದು ಬದಲಾವಣೆಯ ಸಮಯ. ಆರ್ಬಿಐ ಮಾರ್ಗದರ್ಶಿಗಳ ಪ್ರಕಾರ, 2018 ರ ಅಂತ್ಯದ ಒಳಗೆ, ನಿಮ್ಮ ಮ್ಯಾಗ್ಸ್'ಸ್ಟ್ರಿಪ್ ಡೆಬಿಟ್ ಕಾರ್ಡ್ ಅನ್ನು ಇಎಂವಿ ಚಿಪ್ ಡೆಬಿಟ್ ಕಾರ್ಡ್ನೊಂದಿಗೆ ಬದಲಿಸಿಕೊಳ್ಳಬೇಕಿದೆ. ಇದಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. 'ಜೂನ್ ಅಂತ್ಯದ ವೇಳೆಗೆ, ಎಸ್ಬಿಐ 28.9 ದಶಲಕ್ಷ ಎಟಿಎಂ ಕಮ್ ಡೆಬಿಟ್ ಕಾರ್ಡ್ಗಳನ್ನು ವಿತರಿಸಿದೆ. ಇವುಗಳಲ್ಲಿ ಹೆಚ್ಚಿನವು ಚಿಪ್ ಆಧಾರಿತ ಕಾರ್ಡ್ಗಳಾಗಿವೆ. ಇತರ ಬ್ಯಾಂಕುಗಳೂ ಸಹ ಮ್ಯಾಗ್ಸ್'ಸ್ಟ್ರಿಪ್ ಡೆಬಿಟ್ ಕಾರ್ಡ್ ಅನ್ನು ಇಎಂವಿ ಕಾರ್ಡ್ನೊಂದಿಗೆ ಬದಲಾಯಿಸುತ್ತಿವೆ" ಎಂದು ತಿಳಿಸಿದೆ. 


ನಿಮ್ಮ ಡೆಬಿಟ್ ಕಾರ್ಡ್ ಸುರಕ್ಷಿತವಾಗಿರಲು ಈ ಅಂಶಗಳನ್ನು ಪಾಲಿಸಿ...


  • ಎಟಿಎಂ ಕಾರ್ಡ್ಗಳನ್ನು ಗೌಪ್ಯವಾಗಿ ಮತ್ತು ಸುರಕ್ಷಿತವಾಗಿ ಇರಿಸಿ.

  • ಡೆಬಿಟ್ ಕಾರ್ಡ್ ಮರೆತೂ ಕೂಡ ಪಾಸ್ವರ್ಡ್ ಬರೆಯಬೇಡಿ. 

  • ಪ್ರತಿ ಟ್ರಾನ್'ಸ್ಯಾಕ್ಷನ್ ಪೂರ್ಣಗೊಂಡ ಅಥವಾ ಅಪೂರ್ಣವಾದ ನಂತರ ಎಟಿಎಂನಲ್ಲಿ ನೀಡಲಾದ 'ಕ್ಯಾನ್ಸೆಲ್' ಬಟನ್ ಒತ್ತಿ.

  • ಪ್ರತಿ ಟ್ರಾನ್'ಸ್ಯಾಕ್ಷನ್(ವಹಿವಾಟು)ನೊಂದಿಗೆ ಮಿನಿ ಸ್ಟೇಟ್ಮೆಂಟ್ ಪಡೆಯಿರಿ. ಇದರಿಂದಾಗಿ ನೀವು ದಾಖಲೆಯನ್ನು ಹೊಂದುತ್ತೀರಿ.

  • ಬ್ಯಾಂಕ್ನ ಎಸ್ಎಂಎಸ್ ಅಲರ್ಟ್ ಸೇವೆಗೆ ಚಂದಾದಾರರಾಗಿ.

  • ಎಟಿಎಂ ಕಾರ್ಡ್ ಕೆಲಸ ಮಾಡದ ಸಂದರ್ಭದಲ್ಲಿ ಬೇರೆ ಬೇರೆ ಎತಿಎಮ್ ಮೆಷಿನ್'ಗಳಲ್ಲಿ ಪ್ರಯತ್ನಿಸಬೇಡಿ.

  • ಕಾಲಕಾಲಕ್ಕೆ ಪಾಸ್ವರ್ಡ್ ಬದಲಾಯಿಸಿ.

  • ಪಾಸ್ವರ್ಡ್ ನಮೂದಿಸುವಾಗ ಯಾರಾದರೂ ಅದನ್ನು ಗಮನಿಸುತ್ತಿದ್ದಾರೆಯೇ ಎಂದು ಪರಿಶೀಲಿಸಿ. ಮೆಶೀನ್ ಮುಂದೆ ನಿಂತು, ಸ್ವಲ್ಪ ಮುಂದಕ್ಕೆ ಬಾಗಿ ನಿಂತು ಪಾಸ್ವರ್ಡ್ ಬದಲಾಯಿಸಿ. 

  • ಅಪರಿಚಿತರಿಗೆ ಎಂದಿಗೂ ಕಾರ್ಡ್ಗಳನ್ನು ನೀಡಬೇಡಿ.

  • ಕಾರ್ಡ್ ಕಳೆದುಹೋದಾಗ ಅಥವಾ ಕಳವಾದಾಗ, ತಕ್ಷಣವೇ ಅದನ್ನು ಬ್ಲಾಕ್ ಮಾಡಿ. 

  • ಎಟಿಎಂ ಬಳಕೆ ಸಮಯದಲ್ಲಿ ಅಪರಿಚಿತರಿಗೆ ಸಹಾಯ ಮಾಡಬೇಡಿ.

  • ಯಾವುದೇ ಬೆಳಕು ಇಲ್ಲದ, ಭದ್ರತೆಯ ಕೊರತೆ ಇರುವಂತಹ ಸ್ಥಳದಲ್ಲಿ ಇರುವ ಎಟಿಎಂಗಳನ್ನು ಬಳಸಬೇಡಿ.

  • ಸುರಕ್ಷಿತವಾಗಿರುವ ಎಟಿಎಂಗಳಲ್ಲಿ ಮಾತ್ರ ಅಂತಹ ಎಟಿಎಂಗಳಲ್ಲಿ ಮಾತ್ರ ಕಾರ್ಡ್ ಬಳಸಿ.