ಬ್ಯಾಂಕ್ ನಲ್ಲಿ ಈ ವರ್ಷ ಬಂಪರ್ ಉದ್ಯೋಗಾವಕಾಶ, ಕೇವಲ SBI ನಿಂದ 14,000 ಯುವಕರಿಗೆ ಉದ್ಯೋಗಾವಕಾಶ
ಬ್ಯಾಂಕ್ ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್) ಸಿದ್ಧಪಡಿಸಿದೆ. ಈ ವಿಆರ್‌ಎಸ್ ಸ್ಕೀಮ್ ನಲ್ಲಿ ಸುಮಾರು 30,190 ಉದ್ಯೋಗಿಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.
ನವದೆಹಲಿ: ಸರ್ಕಾರಿ ವಲಯದಲ್ಲಿ ಕೆಲಸ ಹುಡುಕುತ್ತಿರುವ ಯುವಕರಿಗೆ ಒಳ್ಳೆಯ ಸುದ್ದಿ ಯೊಂದು ಪ್ರಕಟವಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಲ್ಲಿ ದೊಡ್ಡ ಪ್ರಮಾಣದ ನೇಮಕಾತಿ ಶೀಘ್ರದಲ್ಲೇ ನಡೆಯಲಿದೆ. ಈ ವರ್ಷ ಸುಮಾರು 14,000 ಹುದ್ದೆಗಳನ್ನು ನೇಮಕ ಮಾಡುವುದಾಗಿ ಎಸ್‌ಬಿಐ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈ ದಿನಗಳಲ್ಲಿ ವಿಆರ್‌ಎಸ್ ಹಿನ್ನೆಲೆ ಚರ್ಚೆಯಲ್ಲಿದೆ. ಬ್ಯಾಂಕ್ ತನ್ನ ಖಾಯಂ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಪರಿಚಯಿಸುತ್ತಿದೆ. ವಿಆರ್‌ಎಸ್ ಕುರಿತು ಈಗಾಗಲೇ ಸ್ಪಷ್ಟೀಕರಣ ನೀಡಿರುವಬ್ಯಾಂಕ್ , ಬ್ಯಾಂಕಿನ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಸಿಬ್ಬಂದಿಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ವಿಆರ್‌ಎಸ್ ಅನ್ನು ಪರಿಚಯಿಸಲಾಗುತ್ತಿಲ್ಲ ಎಂದು ಬ್ಯಾಂಕ್ ಹೇಳಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಬ್ಯಾಂಕ್, ಬ್ಯಾಂಕಿನ ಸಿಬ್ಬಂದಿಗಳೇ ಬ್ಯಾಂಕ್ ನ ಗುರುತು ಮತ್ತು ಬ್ಯಾಂಕ್ ತನ್ನ ಸಿಬ್ಬಂದಿಯನ್ನು ಸರಿಯಾಗಿ ನೋಡಿಕೊಳ್ಳುವ ಸಂಸ್ಥೆ ಎಂದು ಕರೆಯಲಾಗುತ್ತಿದೆ ಎಂದು ಹೇಳಿದೆ.
ಬ್ಯಾಂಕ್ ತನ್ನ ಉದ್ಯೋಗಿಗಳಿಗೆ ಸ್ವಯಂ ಪ್ರೇರಿತ ನಿವೃತ್ತಿ ಯೋಜನೆ ಸಿದ್ಧಪಡಿಸುತ್ತಿದೆ. ಈ VRS ಸುಮಾರು 30, 190 ನೌಕರರನ್ನು ಒಳಗೊಂಡಿರುವ ಸಾಧ್ಯತೆ ಇದೆ. ಬ್ಯಾಂಕಿನಲ್ಲಿ 25ವರ್ಷ ಸೇವೆ ಸಲ್ಲಿಸಿರುವ ನೌಕರರು ಅಥವಾ 55 ವರ್ಷ ಪೂರೈಸಿದ ಅಧಿಕಾರಿಗಳು ಮತ್ತು ಉದ್ಯೋಗಿಗಳು ಈ ಯೋಜನೆಯಲ್ಲಿ ಬರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಆದರೆ, ಈ ಯೋಜನೆ ಬ್ಯಾಂಕ್ ನ ವೆಚ್ಚಗಳನ್ನು ತಗ್ಗಿಸಲು ನಡೆಸಲಾಗುತ್ತಿದೆ ಎಂಬ ಅರ್ಥವನ್ನು ಒಳಗೊಂಡಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಪ್ರಸ್ತುತ ಬ್ಯಾಂಕ್ ಬಳಿ ಸುಮಾರು 2.5 ಲಕ್ಷ ಉದ್ಯೋಗಿಗಳಿದ್ದು, ಈ ವರ್ಷ ಮತ್ತೆ 14 ಸಾವಿರ ಹೊಸ ನೇಮಕಾತಿ ನಡೆಸಲಾಗುವುದು ಎಂದು ಬ್ಯಾಂಕ್ ಹೇಳಿದೆ.