SBI ಗ್ರಾಹಕರಿಗೆ ಸಿಹಿ ಸುದ್ದಿ; ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿ ದರ ಹೆಚ್ಚಳ!
ಈ ದರ ಜುಲೈ 30ರಿಂದಲೇ ಜಾರಿಗೆ ಬರಲಿದ್ದು, 1 ಕೋಟಿ ರೂ. ಒಳಗಿನ ಠೇವಣಿಗಳಿಗೆ ಮಾತ್ರ ಅನ್ವಯಿಸಲಿದೆ.
ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಅವಧಿಯ ಠೇವಣಿ(ಫಿಕ್ಸೆಡ್ ಡೆಪಾಸಿಟ್)ಗಳ ಮೇಲಿನ ಬಡ್ಡಿದರವನ್ನು 10 ಬೇಸಿಕ್ ಪಾಯಿಂಟ್ಗಳವರೆಗೆ ಹೆಚ್ಚಿಸಿದೆ. ಈ ದರ ಜುಲೈ 30ರಿಂದಲೇ ಜಾರಿಗೆ ಬರಲಿದ್ದು, 1 ಕೋಟಿ ರೂ. ಒಳಗಿನ ಠೇವಣಿಗಳಿಗೆ ಮಾತ್ರ ಅನ್ವಯಿಸಲಿದೆ.
ಈ ಪರಿಷ್ಕೃತ ಬಡ್ಡಿ ದರ ರಚನೆಯಡಿಯಲ್ಲಿ, 1 ವರ್ಷದಿಂದ 2 ವರ್ಷಗಳವರೆಗಿನ ಠೇವಣಿಗಳಿಗೆ ಇದ್ದ ಶೇ.6.65 ಬಡ್ಡಿ ದರ, ಶೇ.6.7ರಷ್ಟು ಹೆಚ್ಚಾಗಲಿದೆ. ಹಿರಿಯ ನಾಗರಿಕರಿಗೆ ಈ ಹಿಂದೆ ಇದ್ದ ಶೇ.7.15 ಬಡ್ಡಿ ದರ, ಪರಿಷ್ಕರಣೆ ನಂತರ ಶೇ.7.2ರಷ್ಟು ಹೆಚ್ಚಾಗಲಿದೆ. 2 ವರ್ಷದಿಂದ 3 ವರ್ಷಗಳವರೆಗೆ ಹೂಡಿಕೆಯಲ್ಲಿ ಬಡ್ಡಿಯ ದರವನ್ನು ಶೇ.7.15 ರಿಂದ ಶೇ.7.3ಕ್ಕೆ ಪರಿಷ್ಕರಿಸಲಾಗಿದೆ.
ಅವಧಿ | 28.05.2018ರಿಂದ ಅನ್ವಯವಾಗಿರುವ ಪ್ರಸ್ತುತ ಬಡ್ಡಿ ದರ | ಪರಿಷ್ಕೃತ ಬಡ್ಡಿದರ-30.07.2018ರಿಂದ ಅನ್ವಯ |
7 ದಿನಗಳಿಂದ 45 ದಿನಗಳವರೆಗೆ | 5.75 | 5.75 |
46 ದಿನಗಳಿಂದ 179 ದಿನಗಳವರೆಗೆ | 6.25 | 6.25 |
180 ದಿನಗಳಿಂದ 210 ದಿನಗಳವರೆಗೆ | 6.35 | 6.35 |
211 ದಿನಗಳಿಂದ 1 ವರ್ಷದ ವರೆಗೆ | 6.40 | 6.40 |
1 ವರ್ಷದಿಂದ 2 ವರ್ಷಗಳ ಒಳಗೆ | 6.65 | 6.70 |
2 ವರ್ಷಗಳಿಂದ 3 ವರ್ಷಗಳವರೆಗೆ | 6.65 | 6.75 |
3 ವರ್ಷಗಳಿಂದ 5 ವರ್ಷಗಳ ಒಳಗೆ | 6.70 | 6.80 |
5 ವರ್ಷಗಳಿಂದ 10 ವರ್ಷಗಳವರೆಗೆ | 6.75 | 6.85 |
ಹಿರಿಯ ನಾಗರಿಕರ ನಿಶ್ಚಿತ ಠೇವಣಿ ಮೇಲಿನ ಪರಿಷ್ಕೃತ ಬಡ್ಡಿ ದರ
ಅವಧಿ | 28.05.2018ರಿಂದ ಅನ್ವಯವಾಗಿರುವ ಪ್ರಸ್ತುತ ಬಡ್ಡಿ ದರ | ಪರಿಷ್ಕೃತ ಬಡ್ಡಿದರ-30.07.2018ರಿಂದ ಅನ್ವಯ |
7 ದಿನಗಳಿಂದ 45 ದಿನಗಳವರೆಗೆ | 6.25 | 6.25 |
46 ದಿನಗಳಿಂದ 179 ದಿನಗಳವರೆಗೆ | 6.75 | 6.75 |
180 ದಿನಗಳಿಂದ 210 ದಿನಗಳವರೆಗೆ | 6.85 | 6.85 |
211 ದಿನಗಳಿಂದ 1 ವರ್ಷದ ವರೆಗೆ | 6.90 | 6.90 |
1 ವರ್ಷದಿಂದ 2 ವರ್ಷಗಳ ಒಳಗೆ | 7.15 | 7.20 |
2 ವರ್ಷಗಳಿಂದ 3 ವರ್ಷಗಳವರೆಗೆ | 7.15 | 7.25 |
3 ವರ್ಷಗಳಿಂದ 5 ವರ್ಷಗಳ ಒಳಗೆ | 7.20 | 7.30 |
5 ವರ್ಷಗಳಿಂದ 10 ವರ್ಷಗಳವರೆಗೆ | 7.25 | 7.35 |