ನವದೆಹಲಿ: SC On Oxygen Crisis - ದೆಹಲಿಯಲ್ಲಿ ಆಮ್ಲಜನಕದ ಕೊರತೆಯ (Oxygen Crisis) ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ಗೆ ತಲುಪಿದೆ. ಅಧಿಕಾರಿಗಳನ್ನು ಜೈಲಿಗೆ ಹಾಕುವ ಮೂಲಕ ಅಥವಾ ಅವರ ಮೇಲೆ ನ್ಯಾಯಾಂಗ ನಿಂದನೆ  ಕ್ರಮ ಕೈಗೊಳ್ಳುವ ಮೂಲಕ ಆಕ್ಸಿಜನ್ ಬರುವುದಿಲ್ಲ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ (Supreme Court)ಬುಧವಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಆಮ್ಲಜನಕದ ಕೊರತೆಯ ಬಿಕ್ಕಟ್ಟನ್ನು ನಿವಾರಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂಬುದರ ಮಾಹಿತಿ ನೀಡಿ ಎಂದು ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ವಿಚಾರಣೆಯ ವೇಳೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ದೆಹಲಿಗೆ ಎಷ್ಟು ಆಮ್ಲಜನಕವನ್ನು ಕಳುಹಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಷಾ, ಇದೊಂದು ರಾಷ್ಟ್ರೀಯ ವಿಪತ್ತು ಎಂದು ಹೇಳಿದ್ದು, ಆಮ್ಲಜನಕದ ಕೊರತೆಯಿಂದ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಹೈಕೋರ್ಟ್ ವತಿಯಿಂದ ಕೇಂದ್ರ ಸರ್ಕಾರಕ್ಕೆ (Central Government) ಜಾರಿಗೊಳಿಸಲಾಗಿರುವ ನೋಟಿಸ್ ಕುರಿತು ಮಾತನಾಡಿರುವ ನ್ಯಾಯಪೀಠ (SC), ಅಧಿಕಾರಿಗಳನ್ನು ಜೈಲಿಗೆ ಅಟ್ಟುವುದರಿಂದ ನಗರದಲ್ಲಿ ಆಕ್ಸಿಜನ್ ಬರುವುದಿಲ್ಲ. ಪ್ರಾಣಗಳು ಉಳಿಯಬೇಕು ಎಂಬುದನ್ನು ನಾವು ಸುನೀಶ್ಚಿತಗೊಳಿಸಬೇಕಾಗಿದೆ ಎಂದಿದೆ. ಕಳೆದ ಮೂರು ದಿನಗಳಲ್ಲಿ ನೀವು ದೆಹಲಿಗೆ ಎಷ್ಟು ಆಕ್ಸಿಜನ್ ಪೂರೈಸಿರುವಿರಿ ಎಂಬುದನ್ನು ನಮಗೆ ತಿಳಿಸಿ. ಏಕೆಂದರೆ ದೆಹಲಿಯಲ್ಲಿ ಜಾಗತಿಕ ಕೊವಿಡ್ (Corona) ಮಹಾಮಾರಿ ತೀರಾ ಗಂಭೀರ ಹಂತದಲ್ಲಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.


ಇದನ್ನೂ ಓದಿ- Corona Pandemic: ದೇಶದ 80 ಕೋಟಿ ಬಡ ಜನರಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ Modi Cabinet


ಇದಾದ ಬಳಿಕ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್, ಈ ರೀತಿ ವಾದ ವಿವಾದದಲ್ಲಿ ತೊಡಗುವುದು ಸರಿಯಲ್ಲ. ಏಕೆಂದರೆ ದೆಹಲಿ ಹಾಗೂ ಕೇಂದ್ರದಲ್ಲಿ ಜನರಿಂದ ಚುನಾಯಿತಗೊಂಡ ಸರ್ಕಾರಗಳಿವೆ ಮತ್ತು ಎರಡು ಸರ್ಕಾರಗಳು ಕೊವಿಡ್ -19 ರೋಗಿಗಳ ಸೇವೆಗಾಗಿ ಸಂಪೂರ್ಣ ಪ್ರಯತ್ನ ನಡೆಸುತ್ತಿವೆ. ಆಕ್ಸಿಜನ್ ಕೊರತೆ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ತಲುಪಿದೆ. ಇದಕ್ಕೂ ಮೊದಲು ಉಚ್ಛ ನ್ಯಾಯಾಲಯ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಕಾರಣ ನೀಡಿ ನೋಟಿಸ್ ಜಾರಿ ಮಾಡಿ, ಕೊವಿಡ್ 19 ರೋಗಿಗಳ ಚಿಕಿತ್ಸೆಯಲ್ಲಿ ಆಕ್ಸಿಜನ್ ಪೂರಕೆಯ ಕುರಿತು ದೆಹಲಿ ಉಚ್ಛನ್ಯಾಯಾಲಯದ ಆದೇಶದ ಪಾಲನೆ ಮಾಡಲು ವಿಫಲವಾದ ಕಾರಣ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಯಾಕೆ ಕೈಗೊಳ್ಳಬಾರದು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.


ಇದನ್ನೂ ಓದಿ-RBI Governor PC: ಕೊರೊನಾ ಸಂಕಷ್ಟಕ್ಕೆ RBI 'ಆರ್ಥಿಕ ಲಸಿಕೆ', ಇಲ್ಲಿವೆ 10 ಪ್ರಮುಖಾಂಶಗಳು


ಬಳಿಕ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಪ್ರಕರಣವನ್ನು ಸುಪ್ರೀಂ ಮುಖ್ಯನ್ಯಾಯಮೂರ್ತಿ ಎನ್. ವಿ. ರಾಮನ್ ಅವರ ಅಧ್ಯಕ್ಷತೆಯಲ್ಲಿನ ಪೀಠದ ಮುಂದೆ ಪ್ರಸ್ತಾಪಿಸಿದ್ದರು. ಏಕೆಂದರೆ ಕೊವಿಡ್-19 ವ್ಯವಸ್ಥೆಯ ಕುರಿತು ಸ್ವಯಂಪ್ರೇರಣೆಯಿಂದ ವಿಚಾರಣೆ ಆರಂಭಿಸಿರುವ ನ್ಯಾಯಮೂರ್ತಿ ಡಿ.ವೈ ಚಂದ್ರ ಚೂಡ್ ಅವರ ಪೀಠ ಬುಧವಾರ ಲಭ್ಯವಿರಲಿಲ್ಲ. ಈ ವೇಳೆ ಮುಖ್ಯ ನ್ಯಾಯಮೂರ್ತಿಗಳ ಪೀಠ, ಕೇಂದ್ರ ಸರ್ಕಾರದ ಅರ್ಜಿಯನ್ನು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಅಧ್ಯಕ್ಷತೆಯ ಪೀಠದ ಅಡಿಯಲ್ಲಿಯೇ ವಿಚಾರಣೆಗೆ ಸೂಚಿಬದ್ಧಗೊಳಿಸಲು ನಿರ್ದೇಶನಗಳನ್ನು ನೀಡಿದೆ. ತುಷಾರ್ ಮೆಹ್ತಾ ಈ ಪ್ರಕರಣದಲ್ಲಿ ಬುಧವಾರವೇ ತೀರ್ಪನ್ನು ಬಯಸುತ್ತಿದ್ದರು. ಆದರೆ, ನ್ಯಾಯಪೀಠ ಇದನ್ನು ಜಸ್ಟಿಸ್ ಚಂದ್ರಚೂಡ್ ಅವರ ವಿವೇಚನೆಗೆ ಬಿಟ್ಟುಕೊಟ್ಟಿದೆ.


ಇದನ್ನೂ ಓದಿ- Corona Variant: ಕರೋನಾ ರೂಪಾಂತರದ ಮೊದಲ ಫೋಟೋ ಬಹಿರಂಗ, ಇದು ಭಾರತದ ಎರಡನೇ ತರಂಗಕ್ಕೆ ಕಾರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.