ನವದೆಹಲಿ: ಉತ್ತರಪ್ರದೇಶ(Uttar Pradesh)ದ ರಾಂಪುರದ ಪ್ರತಿಷ್ಠಿತ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಹಿಡಿದುಕೊಂಡು ಬಲವಂತವಾಗಿ ಆಕೆಯ ಮುಖಕ್ಕೆ ಕೇಕ್ ಹಚ್ಚಿರುವ ಘಟನೆ ನಡೆದಿದೆ. ಶಿಕ್ಷಕನ ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆತನ ವಿರುದ್ಧ  ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಆರೋಪಿ ಶಿಕ್ಷಕ ನಡೆಸುತ್ತಿರುವ ಕೋಚಿಂಗ್ ಸೆಂಟರ್ ನಲ್ಲಿ ಶಿಕ್ಷಕರ ದಿನಾಚರಣೆ(Teachers Day) ಆಚರಿಸುವ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪ್ರಾಪ್ತೆಯನ್ನು ಹಿಡಿದು ಎಳೆದಾಡಿ ಆಕೆಯ ಮುಖಕ್ಕೆ ಶಿಕ್ಷಕ ಕೇಕ್ ಮೆತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಬಾಲಕಿಯ ತಂದೆ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದರು.


ಇದನ್ನೂ ಓದಿ: EPFO Updates: EPFO ಚಂದಾದಾರರಿಗೊಂದು ನೆಮ್ಮದಿಯ ಸುದ್ದಿ, UAN-Aadhaar ಜೋಡಣೆಯ ಗಡುವು ವಿಸ್ತರಣೆ


ವಿಡಿಯೋ(Viral Video) ಕ್ಲಿಪ್ ವೀಕ್ಷಿಸಿದ ಬಳಿಕ ಪೊಲೀಸರು ಶಿಕ್ಷಕ ಅಲೋಕ್ ಸಕ್ಸೇನಾ(57) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ಬಲವಂತವಾಗಿ ಹಿಡಿದು ಎಳೆದಾಡಿದ ಶಿಕ್ಷಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಕುಂದು ತರುವುದು) ರಡಿ ಪ್ರಕರಣ ದಾಖಲಿಸಲಾಗಿದೆ.


‘ಸಂತ್ರಸ್ತ ಬಾಲಕಿಯು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ದೂರು ನೀಡಿರುವ ವ್ಯಕ್ತಿಯ ಪುತ್ರಿಯಾಗಿದ್ದು, ಆರೋಪಿ ಶಿಕ್ಷಕ ಅಲೋಕ್ ಸಕ್ಸೇನಾ ಆಕೆಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ಮುಖಕ್ಕೆ ಕೇಕ್ ಹಚ್ಚಿದ್ದಾರೆಂದು ದೂರಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 354ರ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮುಂದಿನ ವಿಚಾರಣೆ ನಡೆಯುತ್ತಿದೆ’ ಎಂದು ರಾಂಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಸಾರ್ ಸಿಂಗ್ ಹೇಳಿದ್ದಾರೆ.


ಇದನ್ನೂ ಓದಿ: UP Assembly Election 2022: ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧೆ, ಮೈತ್ರಿ ಕೂಡಾ ಸಾಧ್ಯತೆ ; ಶಿವಸೇನೆ


ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಮತ್ತು ಇತ್ತೀಚೆಗೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ವೈರಲ್ ವಿಡಿಯೋ(Viral Video)ದಲ್ಲಿ ಶಿಕ್ಷಕನು ಬಾಲಕಿಯನ್ನು ಹಿಡಿದುಕೊಂಡು ಆಕೆಯ ಮುಖಕ್ಕೆ ಬಲವಂತವಾಗಿ ಕೇಕ್ ಮೆತ್ತಿದ್ದಾನೆ. ಈ ವೇಳೆ ಬಾಲಕಿ ಶಿಕ್ಷಕನ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಶಿಕ್ಷಕ ಈ ವೇಳೆ ನಿನ್ನನ್ನು ಯಾರು ನನ್ನಿಂದ ಉಳಿಸಿಕೊಳ್ಳುತ್ತಾರೆ..? ಯಾರಾದರೂ ಬರುತ್ತಾರಾ..? ಅಂತಾ ಅಪ್ರಾಪ್ತೆಗೆ ಪ್ರಶ್ನಿಸಿದ್ದಾನೆ. ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದು, ಆರೋಪಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದರು.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.