ನವದೆಹಲಿ : UP Assembly Election 2022: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮುಂದಿನ ವರ್ಷ 2022 ರ ಆರಂಭದಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲ ರಾಜಕೀಯ ಪಕ್ಷಗಳು ಬಿರುಸಿನ ಚಟುವಟಿಕೆಗಳಲ್ಲಿ ತೊಡಗಿವೆ. ಇವೆಲ್ಲದರ ಮಧ್ಯೆ ಇದೀಗ, ಶಿವಸೇನೆ (Shivasena) ಕೂಡ ಉತ್ತರ ಪ್ರದೇಶದ ಚುನಾವಣಾ ಅಖಾಡಕ್ಕಿಳಿದಿದೆ. ಎಲ್ಲಾ 403 ಸ್ಥಾನಗಳಲ್ಲಿ ಪಕ್ಷಡ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಶಿವಸೇನೆ ಸ್ಪಷ್ಟಪಡಿಸಿದೆ. ಯುಪಿ ವಿಧಾನಸಭಾ ಚುನಾವಣೆಯಲ್ಲಿ (UP assembly election) ಶಿವಸೇನೆ ಕಣಕ್ಕಿಳಿದರೆ ಬಿಜೆಪಿಯ ಕಷ್ಟ ಹೆಚ್ಚಬಹುದು ಎನ್ನಲಾಗಿದೆ.
ಯುಪಿಯಲ್ಲಿ 403, ಗೋವಾದಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧೆ :
ಉತ್ತರ ಪ್ರದೇಶದಲ್ಲಿ ಶಿವಸೇನೆ (Shivasene) ಎಲ್ಲಾ ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ (Sanjay Raut) ಹೇಳಿದ್ದಾರೆ. ಅಲ್ಲದೆ, ಗೋವಾ ಚುನಾವಣೆಯಲ್ಲೂ 20 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಚುನಾವಣೆಗಳಲ್ಲಿ ಮೈತ್ರಿ ಕೂಡಾ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇನ್ನು ಗುಜರಾತ್‌ನಲ್ಲಿ ಸಿಎಂ ರೂಪಾನಿ (Gujrat CM) ರಾಜೀನಾಮೆ ಬಿಜೆಪಿಯ ಆಂತರಿಕ ವಿಷಯ ಎಂದು ಹೇಳಿದ್ದಾರೆ.
This is BJP's internal matter (Gujarat CM's resignation). We'll contest the elections in Uttar Pradesh on around 100 seats (total 403 seats), which will take place next year. In Goa, we'll contest elections on more than 20 seats, we may form an alliance: Sanjay Raut, Shiv Sena pic.twitter.com/im5V399A5n
— ANI (@ANI) September 12, 2021
ಇದನ್ನೂ ಓದಿ : Patiala: ಮನೆಯಲ್ಲಿನ ಸ್ಪೋಟದಿಂದ 12 ವರ್ಷದ ಬಾಲಕಿ ಸಾವು, 3 ಮಕ್ಕಳಿಗೆ ಗಾಯ
ಚುನಾವಣೆಯಲ್ಲಿ ಮೈತ್ರಿ ಸಾಧ್ಯತೆ :
ಯುಪಿ ಮತ್ತು ಗೋವಾದಲ್ಲಿ ಚುನಾವಣೆಗೆ (Goa election) ಸ್ಪರ್ಧಿಸುವ ಘೋಷಣೆಮಾಡಿದೆ. ಆದರೆ ಯಾವ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವುದನ್ನು ಮಾತ್ರ ಹೇಳಿಲ್ಲ. ಆದರೆ ಮೈತ್ರಿ ಮಾಡಿಕೊಳ್ಳುವ ಸುಳಿವನ್ನು ಮಾತ್ರ ನೀಡಿದ್ದಾರೆ.
Shiv Sena to contest for all 403 seats in Uttar Pradesh Assembly elections in 2022. The party has not allied with any other political party as of now but has signaled the possibility of an alliance. pic.twitter.com/qqdZz6FQXH
— ANI (@ANI) September 11, 2021
ಯೋಗಿ ಸರ್ಕಾರದ ಮೇಲೆ ಆಪಾದನೆ :
ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಶಿವಸೇನೆಯ ರಾಜ್ಯ ಮುಖ್ಯಸ್ಥ ಠಾಕೂರ್ ಅನಿಲ್ ಸಿಂಗ್ ಆಪಾದಿಸಿದ್ದಾರೆ. . ರಾಜ್ಯದಲ್ಲಿ ಜಂಗಲ್ ರಾಜ್ ಇದೆ ಎಂದು ಪಕ್ಷದ ಮುಖ್ಯಸ್ಥರು ಆರೋಪಿಸಿದ್ದಾರೆ. ಇನ್ನು ರಾಜ್ಯ ಸರ್ಕಾರವು ಬ್ರಾಹ್ಮಣರೊಂದಿಗೆ ಅನುಚಿತವಾಗಿ ವರ್ತಿಸುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ : ಬಿಜೆಪಿ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಮತಾಂತರಗಳಾಗಿವೆ- ಭೂಪೇಶ್ ಬಘೇಲ್
ಯುಪಿ ಸರ್ಕಾರದ (UP Government) ಮೇಲೆ ದಾಳಿ ಮಾಡಿದ ಅವರು, ಶಿಕ್ಷಣದ ಹೆಸರಿನಲ್ಲಿ ರಾಜ್ಯಾದ್ಯಂತ ಶಾಲೆಗಳು ಅನಿಯಂತ್ರಿತ ಶುಲ್ಕವನ್ನು ಸಂಗ್ರಹಿಸಿವೆ. ಸರ್ಕಾರವು ಶಿಕ್ಷಣ ಮಾಫಿಯಾದೊಂದಿಗೆ ಕೈ ಜೋಡಿಸಿವೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ (Supreme court) ಆದೇಶದ ನಂತರವೂ, ರಾಜ್ಯಾದ್ಯಂತ ಶಾಲೆಗಳಲ್ಲಿ ಶೇ .15 ರಷ್ಟು ಶುಲ್ಕವನ್ನು ಮನ್ನಾ ಮಾಡಿಲ್ಲ ಎಂದವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.