ಈ ರಾಜ್ಯದಲ್ಲಿ ಅಕ್ಟೋಬರ್ 19ರಿಂದ ಶಾಲೆಗಳು ತೆರೆಯಲಿದ್ದು, ಹೊಸ ಮಾರ್ಗಸೂಚಿ ಬಿಡುಗಡೆ
ಅಕ್ಟೋಬರ್ 19 ರಿಂದ 9ನೇ ತರಗತಿಯಿಂದ 12ನೇ ತರಗತಿ ಶಾಲೆಗಳನ್ನು ಪುನರಾರಂಭಿಸಲು ಉತ್ತರ ಪ್ರದೇಶ ಸರ್ಕಾರ ಅನುಮೋದನೆ ನೀಡಿದೆ.
ನವದೆಹಲಿ : ಸುಮಾರು ಏಳು ತಿಂಗಳ ನಂತರ ಅಕ್ಟೋಬರ್ 19ರಂದು ರಾಜ್ಯಾದ್ಯಂತ 9 ರಿಂದ 12ನೇ ತರಗತಿ ಶಾಲೆಗಳನ್ನು ಪುನರಾರಂಭಿಸಲು ಉತ್ತರ ಪ್ರದೇಶ ಸರ್ಕಾರ (Uttar pradesh Government) ಅನುಮೋದನೆ ನೀಡಿದೆ. 8ನೇ ತರಗತಿ ಮತ್ತು ಕೆಳಗಿನ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ (Online Classes) ಮುಂದುವರಿಯುತ್ತದೆ ಎಂದು ತಿಳಿಸಲಾಗಿದೆ.
ಶಾಲೆ (Schools) ತೆರೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು. ಈ ಮಾರ್ಗಸೂಚಿಗಳ ಪ್ರಕಾರ ತರಗತಿಗಳು ಎರಡು ಪಾಳಿಯಲ್ಲಿ ನಡೆಯುತ್ತವೆ ಮತ್ತು ಪೋಷಕರಿಂದ ಲಿಖಿತ ಒಪ್ಪಿಗೆಯ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.
ಮಾರ್ಗಸೂಚಿಗಳ ಅನ್ವಯ ಗೇಟ್‌ಗಳು, ತರಗತಿ ಕೊಠಡಿಗಳು ಮತ್ತು ವಾಶ್‌ರೂಮ್‌ಗಳ ಬಳಿ ಶಾಲೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುವುದು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ಫೇಸ್ ಮಾಸ್ಕ್ (Mask) ಧರಿಸಲು ಮತ್ತು ತಮ್ಮ ನಡುವೆ ಸುರಕ್ಷಿತ ಅಂತರವನ್ನು ಇಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ.
ಶಾಲೆ ತೆರೆಯುವ ಬಗ್ಗೆ, ಶಿಕ್ಷಕರ ಬಗ್ಗೆ ನಿಕೃಷ್ಟವಾಗಿ ನಡೆದುಕೊಳ್ಳುತ್ತಿರುವ ರಾಜ್ಯ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ
ಶಾಲೆಗಳು ಒಂದು ತರಗತಿಯಲ್ಲಿ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರಬೇಕು ಮತ್ತು ಬೆಳಿಗ್ಗೆ ಪ್ರಾರ್ಥನಾ ಸಭೆಗಳು ನಡೆಯುವುದಿಲ್ಲ. ಯಾವುದೇ ಟಿಫಿನ್ ಮತ್ತು ನೀರಿನ ಬಾಟಲಿಯನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಶಾಲೆ ತೆರೆಯುವ ಬಗ್ಗೆ ಆರೋಗ್ಯ ಇಲಾಖೆಯ ಸಲಹೆ ಕೇಳಿದ ಶಿಕ್ಷಣ ಇಲಾಖೆ
ಆಗ್ರಾದಲ್ಲಿ 19ರಿಂದ ಶಾಲೆಗಳು ತೆರೆಯಲಿವೆ :
ಕೆಲವು ಷರತ್ತುಗಳೊಂದಿಗೆ ಹಿರಿಯ ಮಾಧ್ಯಮಿಕ ಶಾಲೆಗಳನ್ನು ಅಕ್ಟೋಬರ್ 19 ರಿಂದ ತೆರೆಯಲು ಆಗ್ರಾದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ಸಿಂಗ್ ಅನುಮತಿ ನೀಡಿದ್ದಾರೆ. ಆದರೆ ಪ್ರಾಥಮಿಕ ಹಂತದ ಶಾಲೆಗಳು ಇನ್ನೂ ಕೆಲವು ವಾರಗಳವರೆಗೆ ಕಾಯಬೇಕಾಗುತ್ತದೆ. 50ರಷ್ಟು ಹಾಜರಾತಿಯೊಂದಿಗೆ ಶಾಲೆಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುವುದು ಎಂದು ಅವರು ಹೇಳಿದರು.