ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(Jawaharlal Nehru University) ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಈ ಬಾರಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘ ಪ್ರದರ್ಶಿಸಿದ ಸಾಕ್ಷ್ಯಚಿತ್ರದಿಂದ ವಿವಾದ ಎದ್ದಿದೆ. ವಾಸ್ತವವಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟ (JNUSU) ಮತ್ತು ಎಐಎಸ್‌ಎ ನಿನ್ನೆ ರಾತ್ರಿ(ಡಿ.4)ಜೆಎನ್‌ಯು ಕ್ಯಾಂಪಸ್‌ನಲ್ಲಿ ‘ರಾಮ್ ಕೆ ನಾಮ್’ ಹೆಸರಿನ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದವು. ಆದರೆ ವಿಶ್ವವಿದ್ಯಾಲಯದ ಆಡಳಿತಮಂಡಳಿಯು ಇಂತಹ ಯಾವುದೇ ರೀತಿಯ ಸಾಕ್ಷ್ಯಚಿತ್ರ ಪದರ್ಶನಕ್ಕೆ ಅನುಮತಿ ನೀಡಿರಲಿಲ್ಲ. ಈ ರೀತಿಯ ಕಾರ್ಯಕ್ರಮ ಆಯೋಜನೆಗೆ ನಿಷೇಧವನ್ನು ಹೇರಲಾಗಿದೆ.     


COMMERCIAL BREAK
SCROLL TO CONTINUE READING

ಸಾಕ್ಷ್ಯಚಿತ್ರದ ಪ್ರದರ್ಶನದ ವಿವಾದ


ಇಂತಹ ಕಾರ್ಯಕ್ರಮಗಳು ಅಥವಾ ಸಾಕ್ಷ್ಯಚಿತ್ರಗಳ ಪ್ರದರ್ಶನವು ಕೋಮು ಸೌಹಾರ್ದತೆಗೆ ಭಂಗ ತರಬಹುದು ಎಂದು ಜೆಎನ್‌ಯು ಆಡಳಿತವು ಇದಕ್ಕೆ ಕಡಿವಾಣ ಹಾಕಿತ್ತು. ಈ ಸಾಕ್ಷ್ಯಚಿತ್ರದ ಪ್ರದರ್ಶನ(Lord Ram Documentary In Jnu)ದ ಕಾರ್ಯಕ್ರಮವನ್ನು ಆಯೋಜಿಸಲು ತೊಡಗಿದ್ದ ವಿದ್ಯಾರ್ಥಿಗಳಿಗೆ ಆಡಳಿತವು ಛೀಮಾರಿ ಹಾಕಿದೆ.


ಇದನ್ನೂ ಓದಿ: Omicron variant: ಹೊಸ ರೂಪಾಂತರದ ರೋಗಲಕ್ಷಣಗಳ ಬಗ್ಗೆ ತಜ್ಞರು ಹೇಳುವುದೇನು?


ಜೆಎನ್‌ಯು ಆಡಳಿತದ ಅನುಮತಿ ಇಲ್ಲದೆ ಕಾರ್ಯಕ್ರಮ  


ವಿಶ್ವವಿದ್ಯಾಲಯದ ಆಡಳಿತದ ಪ್ರಕಾರ, ಯಾವುದೇ ವಿದ್ಯಾರ್ಥಿ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಇಂತಹ ಯಾವುದೇ ಕಾರ್ಯಕ್ರಮಕ್ಕೆ ವಿಶ್ವವಿದ್ಯಾನಿಲಯ(JNU University) ಆಡಳಿತದಿಂದ ಅನುಮತಿಯನ್ನೂ ಪಡೆದಿಲ್ಲ ಅಥವಾ ಅನುಮತಿಯನ್ನೂ ನೀಡಿಲ್ಲ ಎಂದು ಜೆಎನ್‌ಯು ಆಡಳಿತ ಸ್ಪಷ್ಟಪಡಿಸಿದೆ.


ಇದೇ ಸಮಯದಲ್ಲಿ ಜೆಎನ್‌ಯು ಪರಂಪರೆಯನ್ನು ಉಳಿಸಲು ‘ರಾಮ್ ಕೇ ನಾಮ್’ ಸಾಕ್ಷ್ಯಚಿತ್ರ(Ram Ke Naam Documentary) ದ ಪ್ರದರ್ಶನವನ್ನು ಮಾಡಲಾಗಿದೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟ ಹೇಳಿದೆ.


ಇದನ್ನೂ ಓದಿ: ಕಾರು ಖರೀದಿದಾರರಿಗೆ ಸಿಹಿಸುದ್ದಿ!: ಸರ್ಕಾರ 3 ಲಕ್ಷದವರೆಗೆ ಸಹಾಯಧನ ನೀಡುತ್ತಿದೆ, ವಿವರಗಳನ್ನು ನೋಡಿ


ವಿವಾದಿತ ಸಾಕ್ಷ್ಯಚಿತ್ರದಲ್ಲಿ ರಾಮಮಂದಿರದ ಪ್ರಸ್ತಾಪವಿದೆ


ಜೆಎನ್‌ಯು ಆಡಳಿತದಿಂದ ಅನುಮತಿ ಪಡೆಯದಿದ್ದರೂ ಶನಿವಾರ ರಾತ್ರಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಇದೀಗ ಈ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ವಿವಾದ ಎದ್ದಿದೆ. ಈ ಸಾಕ್ಷ್ಯಚಿತ್ರವನ್ನು ಆನಂದ್ ಪಟವರ್ಧನ್(Anand Patwardhan) ನಿರ್ದೇಶಿಸಿದ್ದಾರೆ ಮತ್ತು ಈ ಸಾಕ್ಷ್ಯಚಿತ್ರವು ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.