ಕಾರು ಖರೀದಿದಾರರಿಗೆ ಸಿಹಿಸುದ್ದಿ!: ಸರ್ಕಾರ 3 ಲಕ್ಷದವರೆಗೆ ಸಹಾಯಧನ ನೀಡುತ್ತಿದೆ, ವಿವರಗಳನ್ನು ನೋಡಿ

ಇ-ವಾಹನಗಳ (ಇವಿ) ಬಳಕೆಯನ್ನು ಉತ್ತೇಜಿಸಲು ಗೋವಾ ಸರ್ಕಾರವು ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಪಾಲಿಸಿ-2021ಕ್ಕೆ ಚಾಲನೆ ನೀಡಿದೆ.

Written by - Puttaraj K Alur | Last Updated : Dec 5, 2021, 06:39 AM IST
  • ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಗೋವಾ ಸರ್ಕಾರದಿಂದ ಹೊಸ ನೀತಿ
  • ಕಾರು ಖರೀದಿಸಲು 3 ಲಕ್ಷ ರೂ.ವರೆಗೆ ಸಬ್ಸಿಡಿ ನೀಡುವ ಯೋಜನೆಗೆ ಸಿಎಂ ಸಾವಂತ್ ಚಾಲನೆ
  • 400 ವಾಹನಗಳಿಗೆ ‘ಮೊದಲು ಬಂದವರಿಗೆ ಮೊದಲು ಸೇವೆ’ ಆಧಾರದ ಮೇಲೆ ಈ ಪ್ರಯೋಜನ ಲಭ್ಯ
ಕಾರು ಖರೀದಿದಾರರಿಗೆ ಸಿಹಿಸುದ್ದಿ!: ಸರ್ಕಾರ 3 ಲಕ್ಷದವರೆಗೆ ಸಹಾಯಧನ ನೀಡುತ್ತಿದೆ, ವಿವರಗಳನ್ನು ನೋಡಿ

ನವದೆಹಲಿ: Electricity Mobility Promotion Policy:- ನೀವು ಸಹ ಕಾರು ಖರೀದಿಸಲು ಬಯಸಿದ್ದರೆ ನಿಮಗಾಗಿ ಒಂದು ಒಳ್ಳೆಯ ಸುದ್ದಿ ಇದೆ. ಕಾರು ಖರೀದಿಸಲು ಸರ್ಕಾರ 3 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸರ್ಕಾರ ಹೊಸ ನೀತಿಯನ್ನು ಪ್ರಾರಂಭಿಸಿದೆ. ವಾಸ್ತವವಾಗಿ ಇ-ವಾಹನಗಳ (ಇವಿ) ಬಳಕೆಯನ್ನು ಉತ್ತೇಜಿಸಲು ಗೋವಾ ಸರ್ಕಾರವು ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಪಾಲಿಸಿ-2021(Electricity Mobility Promotion Policy 2021)ಕ್ಕೆ ಚಾಲನೆ ನೀಡಿದೆ.

ಎಲೆಕ್ಟ್ರಿಕ್ ಮೊಬಿಲಿಟಿಗೆ ಪ್ರೋತ್ಸಾಹ ಸಿಗಲಿದೆ

ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್(Goa Chief Minister Pramod Sawant) ಅವರು ಶನಿವಾರ(ನ.5) Electricity Mobilityಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗಾರಿಕಾ ಸಚಿವಾಲಯ ಆಯೋಜಿಸಿದ್ದ ರೌಂಡ್ ಟೇಬಲ್‌ನಲ್ಲಿ ಈ ನೀತಿಗೆ ಚಾಲನೆ ನೀಡಿದ್ದಾರೆ. ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯದ ಜನರಿಗೆ ಉದ್ಯೋಗವನ್ನು ಸೃಷ್ಟಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ ಎಂದು ಸಿಎಂ ಸಾವಂತ್ ಹೇಳಿದ್ದಾರೆ.

ಇದನ್ನೂ ಓದಿ: Google ತನ್ನ ಈ ಆಪ್ ಗಳಿಂದ ನಿಮ್ಮ ಬೇಹುಗಾರಿಕೆ ನಡೆಸುತ್ತಿದೆ, ತಕ್ಷಣ ಈ ಕೆಲಸ ಮಾಡಿ ಅವುಗಳನ್ನು ಸ್ಟಾಪ್ ಮಾಡಿ

ಇ-ವಾಹನಗಳ ಖರೀದಿದಾರರಿಗೆ ಸಬ್ಸಿಡಿ

‘ನಾವು ಉತ್ಪಾದನೆಗೆ ಉತ್ತೇಜನ ನೀಡುತ್ತಿದ್ದೇವೆ. ಗೋವಾ(Goa)ದಲ್ಲಿ ನೋಂದಾಯಿಸಲಾದ ಎಲ್ಲಾ ವರ್ಗದ ಇ-ವಾಹನಗಳಿಗೆ 5 ವರ್ಷಗಳವರೆಗೆ ಟೋಲ್ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ಇ-ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತದೆ ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುತ್ತದೆ. ಹೆದ್ದಾರಿಗಳಲ್ಲಿ ಪ್ರತಿ 25 ಕಿಮೀಗೆ ಚಾರ್ಜಿಂಗ್ ಪಾಯಿಂಟ್ ಇರುತ್ತದೆ’ ಎಂದು ಸಿಎಂ ಸಾವಂತ್ ತಿಳಿಸಿದ್ದಾರೆ. ನಗರದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಹೆದ್ದಾರಿಗಳಿಗಿಂತ ಕಡಿಮೆ ದೂರದಲ್ಲಿರುತ್ತವೆ ಅಂತಾ ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಅನುದಾನ ನೀಡಲಿದೆ

ದ್ವಿಚಕ್ರ, ತ್ರಿಚಕ್ರ ಹಾಗೂ 4 ಚಕ್ರದ ಇ-ವಾಹನ(E-Vehicle)ಗಳದ್ದೇ ನಮ್ಮ ನೀತಿ. ದ್ವಿಚಕ್ರ ವಾಹನಗಳಿಗೆ ಶೇ.30 ಮತ್ತು ತ್ರಿಚಕ್ರ ವಾಹನಗಳಿಗೆ ಶೇ.40. 4 ಚಕ್ರದ ವಾಹನಗಳಿಗೆ 3 ಲಕ್ಷ ರೂ.ವರೆಗೆ ಸರ್ಕಾರ ಅನುದಾನ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Reliance Jio Smart TV: ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳುಳ್ಳ ದೊಡ್ಡ ಸ್ಕ್ರೀನ್ ನ ಸ್ಮಾರ್ಟ್ ಟಿವಿ

‘ಮೊದಲು ಬಂದವರಿಗೆ ಮೊದಲು ಸೇವೆ’ ನಿಯಮ

ಸುಮಾರು 400 ವಾಹನಗಳಿಗೆ ‘ಮೊದಲು ಬಂದವರಿಗೆ ಮೊದಲು ಸೇವೆ’ ಆಧಾರದ ಮೇಲೆ ಈ ಪ್ರಯೋಜನವನ್ನು ನೀಡಲಾಗುವುದು ಎಂದು ಸಿಎಂ ಸಾವಂತ್ ಹೇಳಿದ್ದಾರೆ. ಈ ನೀತಿಯಿಂದ ರಾಜ್ಯದಲ್ಲಿ 10,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News