ಗಾಜಿಯಾಬಾದ್: ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ತನ್ನ ಮಡಿಲಲ್ಲಿ ನವಜಾತ ಮಗಳನ್ನು ಹೊತ್ತು ನಿರಂತರವಾಗಿ ಕೆಲಸ ಮಾಡುತ್ತಿದ್ದು ಎಲ್ಲರಿಗೂ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಸೌಮ್ಯ ಅವರ ಕರ್ತವ್ಯ ನಿಷ್ಠೆಗೆ ಎಲ್ಲರೂ ತಲೆಬಾಗಿದ್ದು ದೇಶಾದ್ಯಂತ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿಯುತ್ತಿದೆ.  ಸೌಮ್ಯ ಅವರನ್ನು ಉತ್ತರ ಪ್ರದೇಶದ (Uttar Pradesh) ಘಜಿಯಾಬಾದ್‌ನ ಮೋದಿನಗರದಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿ ನೇಮಿಸಲಾಗಿದೆ.


Video: ಹಾಥಿ ಮೇರೆ ಸಾಥಿ! ಮನುಷ್ಯನ ಬೆನ್ನಿಗೆ ಮಸಾಜ್ ಮಾಡೋ ಆನೆ ನೋಡಿದ್ದೀರಾ...


ಹೆಣ್ಣು ಮಗು ಜನಿಸಿದ 14 ದಿನಗಳ ನಂತರ ಕೆಲಸಕ್ಕೆ ಮರಳಿದ ಸೌಮ್ಯ ಪಾಂಡೆ:-
ಸೌಮ್ಯ ಪಾಂಡೆ ಮೂಲತಃ ಪ್ರಯಾಗರಾಜ್ ಮೂಲದವರು, 2017ರ ಬ್ಯಾಚ್ ಐಎಎಸ್ ಅಧಿಕಾರಿ ಮತ್ತು ಅವರು ಕರೋನಾವೈರಸ್ (Coronavirus) ಸಾಂಕ್ರಾಮಿಕ ಸಮಯದಲ್ಲಿ ಮಗಳಿಗೆ ಜನ್ಮ ನೀಡಿದರು. ಮಗಳಿಗೆ ಜನ್ಮ ನೀಡಿದ 14 ದಿನಗಳ ನಂತರವೇ ಅವರು ಅಧಿಕಾರ ವಹಿಸಿಕೊಂಡರು. "ನನ್ನ ಗರ್ಭಧಾರಣೆಯ ಅವಧಿಯಲ್ಲಿ ಮತ್ತು ಹೆರಿಗೆಯ ನಂತರ ಜಿಲ್ಲಾಧಿಕಾರಿ ಮತ್ತು ಆಡಳಿತವು ನನಗೆ ಸಾಕಷ್ಟು ಬೆಂಬಲ ನೀಡಿದೆ" ಎಂದು ಅವರು ತಮ್ಮ ಸಹವರ್ತಿಗಳ ಬಗ್ಗೆ ಹೆಮ್ಮೆಯಿಂದ ನುಡಿದಿದ್ದಾರೆ.


Video: Gir National Parkನ ಗಾರ್ಡ್ ಸಿಂಹದಿಂದ ಸಹಾಯ ಬೇಡಿದಾಗ...