ನವದೆಹಲಿ: ಸಿಪಿಎಂ ಶಾಸಕ ಪಿಕೆ ಸಶಿ ವಿರುದ್ದಃ ಡಿವೈಎಫ್ಐ ನ ಮಹಿಳೆಯೂ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದಾಳೆ. ಆದರೆ ಮಹಿಳಾ ಆಯೋಗ ಮಾತ್ರ ಆ ಮಹಿಳೆಯ ರಕ್ಷಣೆಗೆ ಬರುವ ಬದಲು ಶಾಸಕನ ರಕ್ಷಣೆಗೆ ನಿಂತಿದೆ.


COMMERCIAL BREAK
SCROLL TO CONTINUE READING

ಈ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಎಂಸಿ  ಜೋಸೆಪೈನ್ "ಇದು ಹೋಸದೆನಲ್ಲ.ನಾವೆಲ್ಲಾ ಮನುಷ್ಯರು ತಪ್ಪುಗಳು ಒಮ್ಮೊಮ್ಮೆ ಸಂಭವಿಸುತ್ತವೆ.ಪಕ್ಷದೊಳಗಿರುವ ವ್ಯಕ್ತಿಗಳು ಸಹಿತ ಒಮ್ಮೊಮ್ಮೆ ಅಂತ ತಪ್ಪುಗಳನ್ನು ಮಾಡುತ್ತಿರುತ್ತಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ಇದುವರೆಗೂ ಮಹಿಳೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿಲ್ಲ ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಸಿಕ್ ವಿವರಣೆಗಳು ಮಾಧ್ಯಮಗಳು ಅಥವಾ ಆ ಮಹಿಳೆಯ ಮೂಲಕ  ನೀಡಿರುವ ದೂರುಗಳಾದರು ಬಹಿರಂಗ ಪಟ್ಟಿರಬೇಕು. ಆದರೆ ಈ ಕೇಸ್ ನಲ್ಲಿ ಆ ರೀತಿ ಆಗಿಲ್ಲ ಅದ್ದರಿಂದ ನಾವು ಹೇಗೆ ದೂರನ್ನು ದಾಖಲಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಜೋಸೆಪೈನ್ ತಿಳಿಸಿದ್ದಾರೆ.


ಈಗಾಗಲೇ ಸಿಪಿಎಂ ಈ ವಿಚಾರದ ಕುರಿತಾಗಿ ಆಂತರಿಕ ತನಿಖೆಗೆ ಆದೇಶ ನೀಡಿದೆ ಎಂದು  ತಿಳಿದುಬಂದಿದೆ.