ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ನಿಧನದಿಂದಾಗಿ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ತಂದೆಯ ಅಗಲಿಕೆಯ ನಂತರ ಕರುಣಾನಿಧಿಯವರ ಅಚ್ಚುಮೆಚ್ಚಿನ ಪುತ್ರ ಎಂ.ಕೆ. ಸ್ಟಾಲಿನ್ "ನಾನು ಒಮ್ಮೆ ನಿಮ್ಮನ್ನು ಅಪ್ಪಾ ಎಂದು ಕರೆಯಲೇ...?" ಎಂದು ಭಾವುಕರಾಗಿ ಪತ್ರವೊಂದನ್ನು ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಮಗ ದೊಡ್ದವನಾಗುತ್ತಿದ್ದಂತೆ ತಂದೆ-ಮಗ ಸ್ನೇಹಿತರಂತೆ ಇರಬೇಕು ಎನ್ನುತ್ತಾರೆ. ಕರುಣಾನಿಧಿ ಬಗ್ಗೆ ಸ್ಟಾಲಿನ್ ಗೆ ಇದ್ದ ಅಭಿಮಾನ, ಪ್ರೀತಿ, ಅಕ್ಕರೆ ಎಂತಹದ್ದು, ತಂದೆ-ಮಗನ ನಡುವಿನ ಈ ಅಪೂರ್ವ ಬಾಂಧವ್ಯಕ್ಕೆ ಕನ್ನಡಿಯಂತಿದೆ ಸ್ಟಾಲಿನ್ ಅವರ ಪತ್ರ.


"ನೀವು ಎಲ್ಲಿಗೆ ಹೊರಟರೂ ಒಂದು ಮಾತು ನನಗೆ ಹೇಳಿಯೇ ಹೊರಡುತ್ತಿದ್ದಿರಿ. ಈಗ ನನಗೆ ಹೇಳದೆ ಏಕೆ ಹೊರಟು ಹೋದಿರಿ? ನಮ್ಮನ್ನು ಬಿಟ್ಟು ನೀವು ಎಲ್ಲಿಗೆ ಹೋಗಿದ್ದೀರಿ?" 


33 ವರ್ಷಗಳ ಹಿಂದೆ ನೀವು ನಿಮ್ಮ ಸ್ಮಾರಕದಲ್ಲಿ ಅಕ್ಷರಗಳಿರಬೇಕು ಎಂದು ಹೇಳಿದ್ದೀರಿ: "ಜೀವನಪರ್ಯಂತ ಅವಿಶ್ರಾಂತವಾಗಿ ದುಡಿದ ನಾಯಕ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ನಿಮ್ಮ ಸಮಾಧಿಯ ಮೇಲೆ ಬರೆಯುತ್ತೇವೆ". ನೀವು ನಿಜಕ್ಕೂ ತಮಿಳರಿಗಾಗಿ ಜೀವನದುದ್ದಕ್ಕೂ ಅವಿರತವಾಗಿ ಶ್ರಮಿಸಿದ್ದೀರಿ. ಆದರೆ ಈಗ, ತಮಿಳು ಸಮಾಜಕ್ಕೆ ನೀವು ಮಾಡಿರುವ ಸೇವೆ ಸಾಕಷ್ಟಾಗಿದೆ ಎಂದು ನೀವು ನಿರ್ಧರಿಸಿದ್ದೀರಾ?" ಎಂದು ಸ್ಟಾಲಿನ್ ಭಾವುಕರಾಗಿ ಪ್ರಶ್ನಿಸಿದ್ದಾರೆ.


"80 ವರ್ಷಗಳ ನಿಮ್ಮ ಸಾರ್ವಜನಿಕ ಜೀವನದ ಸಾಧನೆಗಳನ್ನು ಯಾರಾದರೂ ಮೀರಿಸುವರೇ ಎಂಬುದನ್ನು ನೋಡಲು ನೀವು ಅವಿತಿರುವಿರೇ?"


"ನಿಮ್ಮ ಹುಟ್ಟು ಹಬ್ಬದ ದಿನವಾದ ಜೂನ್ 3ರಂದು ನಿಮ್ಮ ಸಾಮರ್ಥ್ಯದ ಅರ್ಧದಷ್ಟು ಭಾಗವನ್ನು ನನಗೆ ನೀಡಿ ಎಂದು ಬೇಡಿಕೊಂಡಿದ್ದೆ. ಬಹಳ ಹಿಂದೆ ಅರಿಗ್ನಾರ್ ಅಣ್ಣಾರಂತ ಧೀಮಂತ ನಾಯಕರು ಗೆದ್ದಿದ್ದ ನಿಮ್ಮ ಹೃದಯವನ್ನು ಈಗ ನೀವು ನನಗೆ ಕೊಡುತ್ತೀರಾ? ಏಕೆಂದರೆ, ಆ ಮಹತ್ವಪೂರ್ಣವಾದ ದಾನದೊಂದಿಗೆ, ನಿಮ್ಮ ಅತೃಪ್ತ ಕನಸುಗಳು ಮತ್ತು ಆದರ್ಶಗಳನ್ನು ನಾವು ಪೂರೈಸುತ್ತೇವೆ!"


ಕೋಟ್ಯಾಂತರ 'ಉದನ್ಪಿರಪ್ಪುಕ್ಕಲ್'(Blood brothers) ಪರವಾಗಿ ನಾನು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ, "ಒಂದೇ ಒಂದು ಸಾರಿ 'ಉದನ್ಪಿರಪ್ಪೆ' ಎಂದು ಹೇಳಿ, ಅದು ನಮಗೆ ಶತಮಾನದವರೆಗೆ ಕೆಲಸ ಮಾಡುವ ಶಕ್ತಿ ನೀಡುತ್ತದೆ. ನಾನು ನನ್ನ ಜೀವನದಲ್ಲಿ ನಿಮ್ಮನ್ನು 'ಅಪ್ಪಾ' ಎನ್ನುವದಕ್ಕಿಂತ ಹೆಚ್ಚು ಯಾವಾಗಲೂ 'ತಲೈವರ್'(ನಾಯಕ) ಎಂದೇ ಮಾತನಾಡಿಸುತ್ತಿದ್ದೆ. "ನಾನು ಈಗ ಒಮ್ಮೆ ನಿಮ್ಮನ್ನು ಅಪ್ಪಾ ಎಂದು ಕರೆಯಲೇ..?"


ಎಂ.ಕೆ. ಸ್ಟಾಲಿನ್