ನವದೆಹಲಿ: ಮಹಾರಾಷ್ಟ್ರ(Maharashtra)ದಲ್ಲಿ ಸರ್ಕಾರ ರಚನೆಯ ವಿಳಂಬದ ನಡುವೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಅಧ್ಯಕ್ಷ ಶರದ್ ಪವಾರ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಲಿದ್ದಾರೆ. ಆದರೆ, ಈ ಸಭೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಅಲ್ಲ, ಮಹಾರಾಷ್ಟ್ರ ರೈತರ ಪರಿಸ್ಥಿತಿಗಳ ಬಗ್ಗೆ ನಡೆಯಲಿದೆ. ಮಾಹಿತಿಯ ಪ್ರಕಾರ, ಇಂದು ಮಧ್ಯಾಹ್ನ 12: 40 ಕ್ಕೆ ಪವಾರ್ ಮತ್ತು ಪ್ರಧಾನಿ ಮೋದಿ ನಡುವೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಿವಸೇನೆ ಸಂಸದರು ಕೂಡ ಹಾಜರಾಗಬಹುದು ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿಯನ್ನು ಹೊಗಳಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಶರದ್ ಪವಾರ್(Sharad pawar) ಅವರ ಪಕ್ಷ ಎನ್‌ಸಿಪಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಪಕ್ಷದ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮಾಡದಿರುವ ಪ್ರವೃತ್ತಿಯನ್ನು ಅವರು ಗಮನಸೆಳೆದರು. ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬಿಜು ಜನತಾದಳ (BJD) ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (NCP) ಯಿಂದ ಕಲಿಯಬೇಕು ಎಂದು ಹೇಳಿದರು.


ರಾಜ್ಯಸಭೆಯ 250 ನೇ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತೀಯ ರಾಜಕಾರಣದಲ್ಲಿ ರಾಜ್ಯಸಭೆಯ ಪಾತ್ರ ... ಮುಂದಿನ ದಾರಿ' ಕುರಿತು ವಿಶೇಷ ಚರ್ಚೆಯಲ್ಲಿ ಭಾಗವಹಿಸುತ್ತಾ ಹೇಳಿದರು. ಎನ್‌ಸಿಪಿ ಮತ್ತು ಬಿಜೆಡಿ ನಾಯಕರು ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದು ಹೇಳಿದರು. ಈ ರೀತಿಯಾಗಿ ಪ್ರಧಾನಿ ನರೇಂದ್ರ ಮೋದಿ ಎರಡೂ ಪಕ್ಷಗಳನ್ನು ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ಪಕ್ಷಗಳಿಗೆ ಉದಾಹರಣೆ ನೀಡಿ, 'ಬಿಜೆಪಿ ಮತ್ತು ಇತರ ಪಕ್ಷಗಳು ಸಹ ಇದರಿಂದ ಕಲಿಯಬೇಕು' ಎಂದು ಹೇಳಿದ್ದಾರೆ.