ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋ ಪತಿ ಶಶಿ ತರೂರ್ ದೆಹಲಿಯ ಪಟಿಯಾಲ ಹೌಸ್​ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಸುನಂದಾ ಪುಷ್ಕರ್​ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಶಶಿ ತರೂರ್​ರನ್ನು ಆರೋಪಿ ಎಂದು ಪರಿಗಣಿಸಿ ಕೇಸ್​ ದಾಖಲಿಸಲಾಗಿತ್ತು. ಜುಲೈ 7 ರಂದು ನಡೆಯಲಿರುವ ವಿಚಾರಣೆ ಬಳಿಕ ತಮ್ಮನ್ನು ಬಂಧಿಸುತ್ತಾರೆಂಬ ಆತಂಕದಲ್ಲಿ ಶಶಿ ತರೂರ್​ ಈ ಅರ್ಜಿ ಸಲ್ಲಿಸಿದ್ದಾರೆಂದು ಹೇಳಲಾಗಿದೆ. 


ಈಗಾಗಲೇ ಕಾಂಗ್ರೆಸ್​ ನಾಯಕ ಶಶಿ ತರೂರ್​ ವಿರುದ್ಧ ಸೆಕ್ಷನ್​​ 498 ಎ ಹಾಗೂ 306ರ ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ. ಸುನಂದಾ ಪುಷ್ಕರ್​ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಪತಿ ಶಶಿ ತರೂರ್​ರನ್ನು ಸಿಬಿಐನ ವಿಶೇಷ ನ್ಯಾಯಾಲಯವು ಆರೋಪಿ ಎಂದು ಹೇಳಿತ್ತು. ಹೀಗಾಗಿ ಸೆಕ್ಷನ್ 498ರ ಅಡಿಯಲ್ಲಿ ಅವರಿಗೆ ಶಿಕ್ಷೆಯಾಗುವ ಸಾಧ್ಯತೆಗಳಿವೆ. 


ಜನವರಿ 17, 2014ರಲ್ಲಿ ದೆಹಲಿಯ ಪಂಚತಾರಾ ಹೋಟೆಲ್ ಒಂದರಲ್ಲಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ಸಾವಿಗೀಡಾಗಿದ್ದರು. ಅದಕ್ಕೂ ಒಂದುವಾರ ಮೊದಲು ಅಂದರೆ ಜನವರಿ 8, 2014ರಂದು ಸುನಂದಾ ಪುಷ್ಕರ್ ತನ್ನ ಪತಿ ಶಶಿ ತರೂರ್ ಗೆ ಈ ಮೇಲ್ ಮಾಡಿದ್ದರು. ಅದರಲ್ಲಿ "ನನಗೆ ಬದುಕಬೇಕೆಂಬ ಆಸೆ ಇಲ್ಲ. ನಾನು ಕೇವಲ ಸಾವಿನ ನಿರೀಕ್ಷೆಯಲ್ಲಿದ್ದೇನೆ' ಎಂದು ಬರೆದಿದ್ದರು.