ಕೊಲ್ಕತ್ತಾ: Sheikh Alam Controversial Statement - ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನ ಸಭೆ ಚುನಾವಣೆಯ ಪ್ರಚಾರದ ಕಾವು ಏರತೊಡಗಿದೆ. ವೋಟಿಂಗ್ ಕಾಲ ಸಮೀಪಿಸುತ್ತಿದ್ದಂತೆ, ರಾಜಕೀಯ ಮುಖಂಡರ ಕೇಳಿಕೆಗಳು ತೀಕ್ಷ್ಣವಾಗತೊಡಗಿವೆ ಮತ್ತು ಕೆಲ ಮುಖಂಡರು ವಿವಾದಾತ್ಮಕ ಹೇಳಿಕೆಗಳನ್ನು ಕೂಡ ನೀಡುತ್ತಿದ್ದಾರೆ. ಇದೆ ಸರಣಿಯಲ್ಲಿ ಇದೀಗ TMC ಮುಖಂಡ ಶೇಖ್ ಆಲಮ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಒಂದು ವೇಳೆ ದೇಶದ ಶೇ.30 ರಷ್ಟು ಮುಸ್ಲಿಂ ಸಮುದಾಹದ ಜನರು ಒಗ್ಗೊಡಿದರೆ, 4-4 ಪಾಕಿಸ್ತಾನಗಳು ರಚನೆಯಾಗಲಿವೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಶೇ.30 ರಷ್ಟುಅಲ್ಪಸಂಖ್ಯಾತರು: ಶೇಖ್ ಆಲಮ್
ಈ ಕುರಿತು ಹೇಳಿಕೆ ನೀಡಿರುವ TMC ಮುಖಂಡ ಶೇಖ್ ಆಲಮ್, 'ಇಲ್ಲಿ ಕೃತ್ಯ ಎಸಗಿ ಹೋದವರಿಗೆ ನಾವು ಮನಸ್ಸು ಮಾಡಿದರೆ, ನಮ್ಮ ಯುವಕರಿಗೆ ಆದೇಶ ನೀಡಿ ಅವರನ್ನು ಮುಗಿಸಬಹುದು. ಅವರನ್ನು ಅವರು ಹಿಡಿದಿರುವ ಬೆಟ್ಟವನ್ನು ಕತ್ತರಿಸಿ ಹಾಕಬಲ್ಲೆವು. ಆದರೆ ನಾವು ಆ ರೀತಿ ಮಾಡಲಿಲ್ಲ. ಏಕೆಂದರೆ ನಾವು ಮಮತಾ ಬ್ಯಾನರ್ಜಿ ಅವರನ್ನು ನಂಬುತ್ತೇವೆ ಹಾಗೂ ಅವರ ವಿಶ್ವಾಸಪಾತ್ರರಾಗಿದ್ದೇವೆ. ದೇಶದ ಜನಸಂಖ್ಯೆಯ ಶೇ.30 ರಷ್ಟಿರುವ ನಾವು ಅಲ್ಪಸಂಖ್ಯಾತರಾಗಿದ್ದೇವೆ ಹಾಗೂ ಅವರು ಶೇ.70 ರಷ್ಟಿದ್ದಾರೆ. ಸಂಪೂರ್ಣ ಭಾರತದಲ್ಲಿ ಶೇ.30 ರಷ್ಟಿರುವ ನಾವು ಒಂದುಗೂಡಿದರೆ, ನಾವು 4-4 ಪಾಕಿಸ್ತಾನಗಳನ್ನು ರಚಿಸಬಹುದು. ಆಗ ಶೇ. 70 ರಷ್ಟಿರುವ ಅವರು ಎಲ್ಲಿಗೆ ಹೋಗಲಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ- West Bengal elections 2021: ಪ. ಬಂಗಾಳ ಎಲೆಕ್ಷನ್: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ!


ಮಮತಾ ಬ್ಯಾನರ್ಜಿಗೆ ಸವಾಲೆಸೆಗಿದ BJP
ಶೇಖ್ ಆಲಮ್ ಅವರ ಈ ಭಾಷಣದ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ನ ರಾಷ್ಟ್ರೀಯ ಸಂಯೋಜಕ, ಅಮಿತ್ ಮಾಲ್ವಿಯಾ, 'ಟಿಎಂಸಿ ಮುಖಂಡ ಶೇಖ್ ಆಲಮ್, ಬಿರ್ಭೂಮ್ ಬಾಸಾಪಾಡಾ, ನ್ನಾನೂರ್ ನಲ್ಲಿ ಭಾಷಣ ನೀಡುತ್ತ, ಭಾರತದ ಶೇ.30 ರಷ್ಟು ಮುಸ್ಲಿಮರು ಒಂದುಗೂಡಿದರೆ, ನಾಲ್ಕು ಪಾಕಿಸ್ತಾನ ರಚನೆಯಾಗಲಿವೆ ಎಂದಿದ್ದಾರೆ. ಅವರು ಸ್ಪಷ್ಟ ರೂಪದಲ್ಲಿ ಮಮತಾ ಬಾನರ್ಜಿ ಪ್ರತಿ ನಿಷ್ಠೆಯನ್ನು ಹೊಂದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಬೆಂಬಲಿಸುತ್ತಾರೆಯೇ? ನಮಗೆ ಈ ರೀತಿಯ ಬಂಗಾಳ ಬೇಕೇ? ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ-ಪ್ರಧಾನಿ ಮೋದಿ ದೇಶ ನಡೆಸಲು ಅಸಮರ್ಥ ಎಂದ ಮಮತಾ ಬ್ಯಾನರ್ಜೀ


ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಯ ಒಟ್ಟು 294 ಸ್ಥಾನಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ 2ರಂದು ಚುನಾವಣಾ ಫಲಿತಾಂಶಗಳು ಘೋಷಣೆಯಾಗಲಿವೆ. ಮೊದಲ ಹಾಗೂ ಎರಡನೇ ಹಂತದಲ್ಲಿ 30-30 ಸ್ಥಾನಗಳಿಗೆ, ಮೂರನೇ ಹಂತದಲ್ಲಿ 31, ನಾಲ್ಕನೇ ಹಂತದಲ್ಲಿ 44, ಐದನೇ ಹಂತದಲ್ಲಿ 45, ಆರನೇ ಹಂತದಲ್ಲಿ 43, ಏಳನೇ ಹಂತದಲ್ಲಿ 36 ಹಾಗೂ ಎಂಟನೆ ಹಂತದಲ್ಲಿ 35 ಸ್ಥಾನಗಳಿಗೆ ಮತದಾನದ ಪ್ರಕ್ತಿಯೇ ನಡೆಯಲಿದೆ.


ಇದನ್ನೂ ಓದಿ-"ಬಿಜೆಪಿ ಮತದಾರರನ್ನು ಬೆದರಿಸಲು ಗೂಂಡಾಗಳನ್ನು ಬಳಸುತ್ತಿದೆ"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe