ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ. ಅಲ್ಲದೆ ಪಿಚ್ ಕೂಡ ಅವರನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 



COMMERCIAL BREAK
SCROLL TO CONTINUE READING

ಗಾಯಗೊಂಡಿರುವ ಕಾರಣ ವಿಶ್ವಕಪ್ ಟೂರ್ನಿಯ ಇತರ ಪಂದ್ಯಗಳನ್ನು ತಪ್ಪಿಸಿಕೊಂಡಿರುವ ಧವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಾವನಾತ್ಮಕ ಟ್ವೀಟ್ ಮಾಡಿದ್ದರು. " ಇನ್ನು ಮುಂದೆ 2019ರ ವಿಶ್ವಕಪ್ ಟೂರ್ನಿ ಭಾಗವಾಗುವುದಿಲ್ಲ ಎಂದು ಘೋಷಿಸಲು ನಾನು ಭಾವುಕನಾಗಿದ್ದೇನೆ. ದುರದೃಷ್ಟವಶಾತ್, ಹೆಬ್ಬೆರಳು ಸೂಕ್ತ ಸಮಯಕ್ಕೆ ಚೇತರಿಸಿಕೊಳ್ಳುವುದಿಲ್ಲ. ಆದರೆ ಪ್ರದರ್ಶನವು ಮುಂದುವರಿಯಬೇಕು .. ನನಗೆ ಬೆಂಬಲ ನೀಡಿದ ತಂಡದ ಆಟಗಾರರು ಹಾಗೂ ಕ್ರಿಕೆಟ್ ಪ್ರಿಯರಿಗೆ ಮತ್ತು ಇಡೀ ದೇಶಕ್ಕೆ ನಾನು ಕೃತಜ್ಞನಾಗಿದ್ದೇನೆ. ಜೈ ಹಿಂದ್! ”ಎಂದು ಅವರು ಟ್ವೀಟ್ ಮಾಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ " "ಆತ್ಮೀಯ ಶಿಖರ್ ಧವನ್ ಪಿಚ್ ನಿಮ್ಮನ್ನು ತಪ್ಪಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಆದರೆ ನೀವು ಬೇಗನೆ ಚೇತರಿಸಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಇದರಿಂದ ನೀವು ಮತ್ತೊಮ್ಮೆ ಮೈದಾನಕ್ಕೆ ಮರಳಬಹುದು ಮತ್ತು ರಾಷ್ಟ್ರದ ಹೆಚ್ಚಿನ ಗೆಲುವುಗಳಿಗೆ ಸಹಕರಿಸಬಹುದು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 


ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕಗಳಿಸಿದ್ದ ಶಿಖರ್ ಧವನ್ ಅವರಿಗೆ ಎಡಗೈಗಾಯವಾಗಿತ್ತು ಈ ಹಿನ್ನಲೆಯಲ್ಲಿ  ಅವರು ವಿಶ್ವಕಪ್ ಟೂರ್ನಿಯಿಂದ ಹೊರಬಂದಿದ್ದಾರೆ.ಅವರ ಬದಲಿಗೆ ಈಗ ರಿಶಬ್ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ.